ದಾವಣಗೆರೆ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ ಹೆಸರು ಗಳಿಸಿದ್ದ ಹೆಸರಾಂತ ವೈದ್ಯ ಸಾವಿಗೀಡಾಗಿದ್ದಾರೆ. ಎಂಬಿಬಿಎಸ್ ಎಂ ಡಿ, ಎಂಸಿಎಚ್ ಓದಿಕೊಂಡು ಯುರಾಲಜಿ ಸ್ಪೆಷಲಿಸೇಷನ್ ಇದ್ದ ವೈದ್ಯ ಅನುಮಾನಾಸ್ಪದವಾಗಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದು, ಸಾವಿನ ಬಗ್ಗೆ ಭಾರಿ ಶಂಕೆ ವ್ಯಕ್ತವಾಗಿದೆ.
ಜೀನ್ಸ್ ಪ್ಯಾಂಟ್ ನಿಂದ ನೇಣು ಬಿಗಿದಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎನಿಸಿದರೂ ಕೂಡ ಕೊಲೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ದಾವಣಗೆರೆ ನಗರದ ಎಸ್ಎಸ್ ಲೇ ಹೌಟ್ನಲ್ಲಿನ ಎ ಬಡಾವಣೆಯಲ್ಲಿರುವ ಹೆಸರಾಂತ ಜಿಲ್ಲಾಸ್ಪತ್ರೆ ವೈದ್ಯ ಡಾ. ಅರುಣಚಂದ್ರ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಡಾ. ಅರಣುಚಂದ್ರರಿಗೆ 36 ವರ್ಷ ವಯಸ್ಸಾಗಿದ್ದು, ಅವರು ಸಿವಿಲ್ ಇಂಜಿನಿಯರಿಂಗ್ ಓದಿದ್ದ ಯುವತಿಯನ್ನು ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಕಳೆದ ಒಂಬತ್ತು ತಿಂಗಳ ಹಿಂದೆಯಷ್ಟೇ ಒಂದು ಮಗು ಜನಿಸಿ ಅಪ್ಪನಾದ ಖುಷಿಯಲ್ಲಿದ್ದರು. ಅದೇನಾಯಿತೋ ಏನೋ ಇಂದು ಇದ್ದಕ್ಕಿದ್ದಂತೆ ನೇಣಿನ ಕುಣಿಕೆಯಲ್ಲಿ ಅವರ ದೇಹ ನೇತಾಡುತ್ತಿರುವುದು ನೂರಾರು ಅನುಮಾನಗಳನ್ನು ಹುಟ್ಟುಹಾಕಿದೆ.
ಇವರಿಗೆ ಈ ಮೊದಲೇ ವಿವಾಹವಾಗಿತ್ತು. ಮೊದಲ ಹೆಂಡತಿ ವಿಚ್ಛೇದನದ ನಂತರ ಸಭ್ಯಸ್ಥರು ಎಂಬ ಕಾರಣಕ್ಕೆ ಎರಡನೇ ಮದುವೆ ಮಾಡಿಕೊಡಲಾಗಿತ್ತು. ಡಾ. ಅರುಣಾಚಂದ್ರ ಅವರ ಪತ್ನಿಯ ತಂದೆ ಹೇಳುವ ಪ್ರಕಾರ ಅರುಣಾಚಂದ್ರರ ತಾಯಿ ಇದಕ್ಕೆಲ್ಲಾ ಕಾರಣವಂತೆ. ಅವರ ಮನೆ ಡ್ರೈವರ್ ಇದರಲ್ಲಿ ಶಾಮೀಲಾಗಿ ಅವರು ಸಾಯುವಂತೆ ಟಾರ್ಚರ್ ಮಾಡಿದ್ದಾರೆ. ಅವರ ಸಾವಿಗೆ ತಾಯಿಯೇ ಮೂಲ ಎನುತ್ತಿದ್ದಾರೆ,
ಸ್ಥಳಕ್ಕೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲೇ ವಿದ್ಯಾನಗರ ಪೊಲೀಸರು ಮೊಕ್ಕಾಂ ಹೂಡಿದ್ದು, ಈ ಸಾವಿನ ರಹಸ್ಯ ಭೇದಿಸಲು ಮುಂದಾಗಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾಂದರ್ಭಿಕ ಸಾಕ್ಷ್ಯಗಳ ಮೇಲೆ ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ:ಪಿಎಸ್ಐ ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ ಮಗನ ಮೇಲೆ ಪೊಲೀಸರಿಂದ ಹಲ್ಲೆ!