ETV Bharat / state

ದಾವಣಗೆರೆ: ನಕಲಿ ವೈದ್ಯನ ಕ್ಲಿನಿಕ್​ಗೆ ಜಿಲ್ಲಾಧಿಕಾರಿ ದಾಳಿ

ನಕಲಿ ವೈದ್ಯನೊಬ್ಬ ಕೋವಿಡ್ ರೋಗಿಗಳಿಗೆ ಔಷಧಿ ಕೊಡುತ್ತಿದ್ದಾನೆ ಎಂಬ ಮಾಹಿತಿ ಆಧರಿಸಿ ಆತನ ಕ್ಲಿನಿಕ್​ ಮೇಲೆ ದಾವಣಗೆರೆ ಡಿಸಿ ಪೊಲೀಸರೊಂದಿಗೆ ದಾಳಿ ನಡೆಸಿದರು.

author img

By

Published : May 24, 2021, 6:35 AM IST

Davangere DC raids on fake doctor's clinic
ನಕಲಿ ವೈದ್ಯನ ಕ್ಲಿನಿಕ್​ಗೆ ಜಿಲ್ಲಾಧಿಕಾರಿ ದಾಳಿ

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕು ಕುಂಬಳೂರು ಗ್ರಾಮದ ನಕಲಿ ವೈದ್ಯನ ಕ್ಲಿನಿಕ್​ಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ದಾಳಿ ನಡೆಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಅವಿನಾಶ್ ಕುಮಾರ್​ ಎಂಬ ನಕಲಿ ವೈದ್ಯ ಕ್ಲಿನಿಕ್ ಇಟ್ಟುಕೊಂಡು ಕೋವಿಡ್ ರೋಗಿಗಳಿಗೆ ಔಷಧಿ ನೀಡುತ್ತಿದ್ದಾನೆ ಎಂದು ಗ್ರಾಮದ ಯುವಕರು ಜಿಲ್ಲಾಧಿಕಾರಿಗೆ ವಾಟ್ಸ್ ಆ್ಯಪ್​ ಮೂಲಕ ಮಾಹಿತಿ ನೀಡಿದ್ದರು.

Davangere DC raids on fake doctor's clinic
ನಕಲಿ ವೈದ್ಯಕೀಯ ಸರ್ಟಿಫಿಕೇಟ್

ಕ್ಲಿನಿಕ್ ನಡೆಸುತ್ತಿದ್ದ ವೈದ್ಯ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ. ಕೆಎಂಪಿಇಯಲ್ಲಿ ನೋಂದಣಿಯೂ ಮಾಡಿಕೊಂಡಿಲ್ಲ. ಆದರೂ, ಕುಂಬಳೂರು ಗ್ರಾಮದ ಮನೆಯಲ್ಲಿ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಇಟ್ಟುಕೊಂಡು ಚಿಕಿತ್ಸೆ ನೀಡುತ್ತಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಮನೆಯಲ್ಲಿಯೇ ಅಕ್ರಮ ಮದ್ಯ ಮಾರಾಟ: 50 ಸಾವಿರ ಮೌಲ್ಯದ ಮದ್ಯ ವಶ

ನಕಲಿ ವೈದ್ಯನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕೋವಿಡ್ ಚಿಕಿತ್ಸೆಯ ಹೆಸರಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಕಲಿ ವೈದ್ಯರ ಹಾವಳಿ ಇರುವುದು ನಮ್ಮ ಗಮನಕ್ಕೆ ಬಂದಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.