ETV Bharat / state

ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು ಸೋಂಕಿತನ ಅಂತ್ಯಕ್ರಿಯೆ: ದಾವಣಗೆರೆ ಡಿಸಿ

ದಾವಣಗೆರೆಯಲ್ಲಿ ಪತ್ತೆಯಾಗಿರುವ ಕೋವಿಡ್​​-19 ಪಾಸಿಟಿವ್​​ ಪ್ರಕರಣಗಳ ಬಗ್ಗೆ ಮಹಾಂತೇಶ್ ಆರ್. ಬೀಳಗಿ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

davangere dc mahantesh bilagi pressmeet
ಮಹಾಂತೇಶ್ ಆರ್. ಬೀಳಗಿ ಸುದ್ದಿಗೋಷ್ಟಿ
author img

By

Published : May 2, 2020, 6:09 PM IST

ದಾವಣಗೆರೆ: ದಾವಣಗೆರೆಯಲ್ಲಿ ಕೊರೊನಾ ಪಾಸಿಟಿವ್​​ ಪ್ರಕರಣಗಳ ಕುರಿತಂತೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ರು.

ಮಹಾಂತೇಶ್ ಆರ್. ಬೀಳಗಿ ಸುದ್ದಿಗೋಷ್ಠಿ

ಕೊರೊನಾ ಸೋಂಕಿತರಾದ ಬಾಷಾನಗರದ ಪಿ- 533ನೇ ಮಹಿಳೆ ಹಾಗೂ ಜಾಲಿನಗರದ ಪಿ- 556ನೇ ವೃದ್ಧ ವಾಸವಿದ್ದ ಮನೆಯ ಅಕ್ಕಪಕ್ಕದವರಲ್ಲಿ ಕೋವಿಡ್​ ಗುಣಲಕ್ಷಣ ಇಲ್ಲದಿದ್ದರೂ ಅವರ ಗಂಟಲು ದ್ರವ ಸ್ಯಾಂಪಲ್​​ ಅನ್ನು ಲ್ಯಾಬ್​​ ಟೆಸ್ಟ್​​ಗೆ ಕಳುಹಿಸಿಕೊಡಲಾಗಿದೆ. ನಿನ್ನೆ ಕಳಿಸಿದ್ದ 2 ಸ್ಯಾಂಪಲ್ ಗಳ ವರದಿಗಾಗಿ ಕಾಯುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ‌ ತಿಳಿಸಿದರು.

ಕೊರೊನಾ ಪೀಡಿತರಾಗಿದ್ದ 69 ವರ್ಷದ ವೃದ್ಧನಲ್ಲಿ‌ ಕೊರೊನಾ ಪಾಸಿಟಿವ್ ಇದ್ದದ್ದು ಏಪ್ರಿಲ್‌ 29 ರಂದು ಗೊತ್ತಾಗಿತ್ತು.‌ ಜಿಲ್ಲಾಸ್ಪತ್ರೆಯಲ್ಲಿ ಬೆಂಗಳೂರಿನ ತಜ್ಞ ವೈದ್ಯರ ಸಂಪರ್ಕದಲ್ಲಿದ್ದುಕೊಂಡು ಇಲ್ಲಿನ ವೈದ್ಯರು ಚಿಕಿತ್ಸೆ ನೀಡಿದರೂ ಉಳಿಯಲಿಲ್ಲ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.