ETV Bharat / state

ಮಳೆಯಿಂದ ಜನರ ಜೀವನ ಅಯೋಮಯ : ರೈತರ ಬದುಕು ನೀರುಪಾಲು, ಅಧಿಕಾರಿಗಳ ಕಾಟಾಚಾರದ ಭೇಟಿ - ದಾವಣಗೆರೆಯಲ್ಲಿ ಭಾರೀ ಮಳೆ

ಮುಂಗಾರು ಪೂರ್ವ ಮಳೆ ದಾವಣಗೆರೆ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ರೈತರು ಬೆಳೆದ ಬೆಳೆ ನೀರುಪಾಲಾಗಿದೆ. ಕೆಲವೇ ದಿನಗಳಲ್ಲಿ ರೈತರ ಕೈಸೇರಬೇಕಾಗಿದ್ದ 2,651 ಎಕರೆ ಭತ್ತ ನಾಶವಾಗಿದೆ. ಇತ್ತ ತೋಟಗಾರಿಕೆ‌ ಬೆಳೆ‌ ಕೂಡ ನೆಲಕಚ್ಚಿರುವುದು ರೈತರಿಗೆ ಎಲ್ಲಿಲ್ಲದ ನಷ್ಟ ಸಂಭವಿಸಿದೆ.

ದಾವಣಗೆರೆಯಲ್ಲಿ ಭಾರೀ ಮಳೆಗೆ ಊರು ಬಿಡುತ್ತಿರುವ ಜನರು

author img

By

Published : May 20, 2022, 7:29 PM IST

Updated : May 21, 2022, 8:52 AM IST

ದಾವಣಗೆರೆ: ಮುಂಗಾರು ಪೂರ್ವ ಮಳೆಯಿಂದ ರೈತರ ಬದುಕು ಮೂರಾಬಟ್ಟೆಯಾಗಿದೆ. ಇತ್ತ ಗ್ರಾಮೀಣ ಪ್ರದೇಶದ ಜನರ ಬದುಕು ಬರಡಾಗಿದೆ. ರಕ್ಕಸ ಮಳೆಯಿಂದ ಜನಸಾಮಾನ್ಯರು ಮನೆ-ಮಠ ಬಿಟ್ಟು ಗಂಟುಮೂಟೆ ಕಟ್ಟಿಕೊಂಡು ಅಲ್ಲಿಂದ ಹೊರಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ರೈತರ ಬದುಕು ಹಸನಾಗುವ ಬದಲು ನೀರುಪಾಲಾಗಿದ್ದು, ದಾವಣಗೆರೆ ಜಿಲ್ಲೆಯ ಜನರ ಜೀವನ ಅಯೋಮಯವಾಗಿದೆ.

ಮುಂಗಾರು ಪೂರ್ವ ಮಳೆ ದಾವಣಗೆರೆ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸೃಷ್ಟಿಸಿದೆ. ರೈತರು ಬೆಳೆದ ಬೆಳೆ ನೀರುಪಾಲಾಗಿದೆ. ಕೆಲವೇ ದಿನಗಳಲ್ಲಿ ರೈತರ ಕೈಸೇರಬೇಕಾಗಿದ್ದ 2,651 ಎಕರೆ ಭತ್ತ ಹಾನಿಗೊಳಗಾಗಿದೆ. ಇತ್ತ ತೋಟಗಾರಿಕೆ‌ ಬೆಳೆ‌ ಕೂಡ ನೆಲಕಚ್ಚಿರುವುದು ರೈತರಿಗೆ ಎಲ್ಲಿಲ್ಲದ ನಷ್ಟ ಸಂಭವಿಸಿದೆ. ‌ಆದರೆ, ಇದಕ್ಕೆ ಪರಿಹಾರ ಕಟ್ಟಿಕೊಡುವ ಅಧಿಕಾರಿ ವರ್ಗ ಮಾತ್ರ ಫೋಟೋಗಳಿಗೆ ಸೀಮಿತವಾಗಿದ್ದಾರೆ ವಿನಃ ರೈತರ ಕಣ್ಣೀರನ್ನು ಒರೆಸುವ ಕೆಲಸ ಅವರಿಂದ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಮಳೆಯಿಂದ ಜನರ ಜೀವನ ಅಯೋಮಯ

ನಂದಿತಾವರೆ ಹಾಗೂ ಭಾನುವಳ್ಳಿ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ. ಈ ಗ್ರಾಮಗಳ ಮಧ್ಯೆ ಹಳ್ಳ ಮೈದುಂಬಿ ಹರಿದು ನೀರು ಮನೆಗಳಿಗೆ ನುಗ್ಗಿದೆ. ಪರಿಣಾಮ ಜನ ಊರು ಬಿಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಹೊತ್ತು ಅಧಿಕಾರಿಗಳ ಬಳಿ ತೆರಳಿದರೆ ಸ್ಪಂದಿಸದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರೈತರು ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿ ಬಳಿ ಅಳಲನ್ನು ತೋಡಿಕೊಂಡು ಪರಿಹಾರ ಕೇಳಿದರೆ, ಮೂರು ಇಲ್ಲ ನಾಲ್ಕು ಮರಗಳು ಬಿದ್ದರೆ ಪರಿಹಾರ ನೀಡಲ್ವಂತೆ, ಇಡೀ ಒಂದು ಹೆಕ್ಟೇರ್​​ಗೆ 30,40 ಮರಗಳು ಬೀಳಬೇಕೆಂದು ಅಧಿಕಾರಿ ಹೇಳುತ್ತಾರಂತೆ. ಅಷ್ಟೊಂದು ಮರಗಳು ಮಳೆಗೆ ಬೀಳದಿದ್ದರೆ ನಾವು ಮರಗಳನ್ನು ಕಡಿದು ಹಾಕಿ ಪರಿಹಾರ ಕೇಳಬೇಕಾ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ : ಕೆ.ಆರ್.ಪುರ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ

Last Updated : May 21, 2022, 8:52 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.