ದಾವಣಗೆರೆ : ಕೊರೊನಾ ವೈರಸ್ ಚಿಕ್ಕವರು ದೊಡ್ಡವರೆನ್ನದೆ ಎಲ್ಲರನ್ನೂ ಬಲಿ ಪಡೆಯುತ್ತಿದೆ. ಇದೀಗ ದಾವಣಗೆರೆ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ.
ಲೋಕಿಕೆರೆ ಜಿಪಂ ಕ್ಷೇತ್ರದ ಸದಸ್ಯ ಓಬಳಪ್ಪ ಇಂದು ಕೊರೊನಾದಿಂದ ನಿಧನರಾದವರು. ಇವರು ಮೂಲತಃ ದಾವಣಗೆರೆ ತಾಲೂಕಿನ ಹೂವಿನಮಡ ಗ್ರಾಮದ ನಿವಾಸಿ.
ಕೋವಿಡ್ ಸೋಂಕಿಗೆ ತುತ್ತಾಗಿ ಕಳೆದ 15 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.