ದಾವಣಗೆರೆ: ಅವರೆಲ್ಲರೂ ಕಷ್ಟಪಟ್ಟು ಗ್ರಾಮೀಣ ಭಾಗದಿಂದ ಬಂದು ಉನ್ನತ ಶಿಕ್ಷಣ ಪಡೆದವರು. ಇದೀಗ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಸಿದ್ದಪಡಿಸಿದ ಪಟ್ಟಿಯಲ್ಲಿ ದಾವಣಗೆರೆಯ ಶಿವಗಂಗೋತ್ರಿ ವಿಶ್ವವಿದ್ಯಾಲಯದ ಗಣಿತ ಶಾಸ್ತ್ರವಿಭಾಗದ ಒಟ್ಟು ಆರು ಅಧ್ಯಾಪಕರುಗಳು ಸ್ಥಾನ ಪಡೆದಿದ್ದಾರೆ.
ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ. ಬಿ. ಸಿ. ಪ್ರಸನ್ನ ಕುಮಾರ್, ಪ್ರೊ. ಡಿ. ಜಿ. ಪ್ರಕಾಶ , ಪ್ರೊ. ಯು. ಎಸ್. ಮಹಾಬಲೇಶ್ವರ್ ಡಾ. ಕೆ. ಗಣೇಶ್ ಕುಮಾರ್, ಅವರುಗಳು ಸ್ಥಾನ ಪಡೆದಿದ್ದರೆ. ಇತ್ತಾ ಪಿಹೆಚ್‌ಡಿ ಸಂಶೋಧನಾರ್ಥಿಗಳಾದ ಆರ್. ಜೆ. ಪುನೀತ್ ಗೌಡ ಮತ್ತು ಆರ್. ನವೀನ್ ಕುಮಾರ್ ಕೂಡ ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿ ವಿವಿಗೆ ಹೆಗ್ಗಳಿಕೆ ತಂದಿದ್ದಾರೆ.
ಇದಲ್ಲದೇ ಗಣಿತ ಶಾಸ್ತ್ರ ವಿಭಾಗದ ಪ್ರೊಫೆಸರ್ಗಳು, ಪಿಹೆಚ್‌ಡಿ ವಿದ್ಯಾರ್ಥಿಗಳು ಸಾಧನೆ ಮಾಡಿರುವುದು ವಿವಿಗೆ ಹೆಗ್ಗಳಿಕೆ ತಂದಂತೆ. ಇದಲ್ಲದೇ ಇನ್ನುಳಿದ ಎಲ್ಲ ವಿಷಯಗಳಲ್ಲು ಕೂಡ ಮಕ್ಕಳು ಸಾಧನೆ ಮಾಡ್ಬೇಕಾಗಿದೆ ಎಂದು ವಿವಿಯ ವಿಸಿ ಡಾ ಬಿಡಿ ಕುಂಬಾರ ತಿಳಿಸಿದರು.
ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಗುರುತಿಸಿದ್ದು ಹೇಗೆ..?: ಇಡೀ ಗಣಿತ ಶಾಸ್ತ್ರ ವಿಭಾಗದ ಸಿಬ್ಬಂದಿ ಹಾಗೂ ಪಿಹೆಚ್‌ಡಿ ವಿದ್ಯಾರ್ಥಿಗಳು ಸದಾ ಗ್ರೂಪ್ ವರ್ಕ್ ಮಾಡ್ತಾ ಸಂಶೋಧನೆ ಮಾಡುವುದೇ ಇವರ ಕಾರ್ಯವಾಗಿತ್ತು. ಇವರು ಮಾಡಿದ ಸಂಶೋಧನೆಗಳಾದ ಶಾಖ ಮತ್ತು ಸಮೂಹ ವರ್ಗಾವಣೆ, ಸಂಖ್ಯಾತ್ಮಕ ವಿಶ್ಲೇಷಣೆ, ಘನ ಚಲನ ಶಾಸ್ತ್ರ, ದ್ರವ ಚಲನ ಶಾಸ್ತ್ರ, ಭೇದಾತ್ಮಕ ರೇಖಾಗಣಿತ, ರಾಶಿ ಕಲನಶಾಸ್ತ್ರ, ಅನ್ವಯಿಕ ಗಣಿತಶಾಸ್ತ್ರ, ವಿಭಿನ್ನ ಸಮೀಕರಣಗಳಿಗೆ ಪರಿಹಾರ, ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನ ಶಾಸ್ತ್ರ, ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನ ಶಾಸ್ತ್ರ, ಶಾಖ ಮತ್ತು ಸಮೂಹ ವರ್ಗಾವಣೆ, ದ್ರವ ಚಲನ ಶಾಸ್ತ್ರ ಹೀಗೆ ಎಲ್ಲಾ ವಿಷಯಗಳ ಮೇಲೆ ಸಂಶೋಧನೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಅಮೆರಿಕದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಗುರುತಿಸಿದೆ.
ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಕಾರಣ ಏನೂ..?: ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್ - ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ದಪಡಿಸಲಾಗಿದೆ. ವಿಶೇಷತೆಯೇನೆಂದರೆ, ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಲ್ಲ ವಿಜ್ಞಾನಿಗಳು ಗ್ರಾಮೀಣ ಪ್ರತಿಭೆಗಳಾಗಿದ್ದಾರೆ. ಅಲ್ಲದೇ, ಪ್ರೊ. ಬಿ. ಸಿ ಪ್ರಸನ್ನ ಕುಮಾರ್ ಮತ್ತು ಪ್ರೊ. ಡಿ. ಜಿ .ಪ್ರಕಾಶ ರವರು 2020ನೇ ಸಾಲಿನಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿಯೂ ಕೂಡ ಸ್ಥಾನ ಪಡೆದಿರುವುದು ವಿಶೇಷ ಸಾಧನೆಯಾಗಿದೆ. ಇದರಿಂದ ತುಂಬಾನೆ ಸಂತೋಷವಾಗಿದೆ ಎಂದು ಪ್ರೋ ಪ್ರಸನ್ನಕುಮಾರ್ ಸಂತಸ ವ್ಯಕ್ತಪಡಿಸಿದರು.
ಒಟ್ಟಾರೆ ಈ ಪಟ್ಟಿಯಲ್ಲಿ ಕರ್ನಾಟಕದ ವಿವಿಧ ವಿವಿಗಳಿಂದ ಒಟ್ಟು 24 ಜನ್ರು ಆಯ್ಕೆಯಾಗಿದ್ದು, ಅದರಲ್ಲಿ ದಾವಣಗೆರೆ ವಿವಿಯ 6 ಜನ್ರು ಸ್ಥಾನ ಪಡೆಯುವ ಮೂಲಕ ದಾವಣಗೆರೆಗೆ ಕೀರ್ತಿ ಹೆಚ್ಚಿಸಿದ್ದಾರೆ. ಇದಲ್ಲದೇ ಮುಂದಿನ ವರ್ಷದಲ್ಲಿ ಇನ್ನು ಇಬ್ಬರು ಇದೇ ವಿವಿಯಿಂದ ಆಯ್ಕೆಯಾಗುವ ಸಂಭವ ಇದೆಯಂತೆ. ಇದರಿಂದ ಆ ಸಂಶೋಧನಾ ವಿದ್ಯಾರ್ಥಿಗಳು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಿದ್ರೇ ಸುಳ್ಳಲ್ಲ.
ಓದಿ: ಬತ್ತುತ್ತಲೇ ಸಾಗಿರುವ ಸತೋಪಂತ್ ಸರೋವರ; ಇದಕ್ಕೆ ಕಾರಣ ತಿಳಿಸಿದ ವಿಜ್ಞಾನಿ!