ETV Bharat / state

ಮತ ಎಣಿಕೆಗೆ ಸಜ್ಜಾದ ದಾವಣಗೆರೆ: 84 ಅಭ್ಯರ್ಥಿಗಳ ಎದೆಯಲ್ಲಿ ಢವಢವ.. - Assembly election

''ದಾವಣಗೆರೆ ಜಿಲ್ಲಾಡಳಿತ ಮತ ಎಣಿಕೆಗೆ ಸರ್ವ ಸನ್ನದ್ಧವಾಗಿದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆಗೆ ಸಿದ್ಧತೆ ನಡೆಸಲಾಗಿದ್ದು, ಮೂರು ಬ್ಲಾಕ್​ಗಳಲ್ಲಿ‌ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ'' ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

Assembly Election 2023
ಮತ ಎಣಿಕೆಗೆ ಸಜ್ಜಾದ ದಾವಣಗೆರೆ: 84 ಅಭ್ಯರ್ಥಿಗಳ ಎದೆಯಲ್ಲಿ ಢವಢವ
author img

By

Published : May 12, 2023, 7:52 PM IST

Updated : May 12, 2023, 7:58 PM IST

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣ್ ಕೆ ಮಾತನಾಡಿದರು.

ದಾವಣಗೆರೆ: ಜಿಲ್ಲೆಯಲ್ಲಿ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆದಿದ್ದು, ಅವರ ಭವಿಷ್ಯ ಸ್ಟ್ರಾಂಗ್ ರೂಮ್​ನಲ್ಲಿ ಭದ್ರಾವಾಗಿದೆ. ಮತ ಎಣಿಕೆ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅರುಣ್ ಕೆ ಅವರು ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವಿಎಂ ಮತ ಯಂತ್ರಗಳನ್ನು ಸದ್ಯ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ಟ್ರಾಂಗ್ ರೂಮ್​ನಲ್ಲಿ ಇರಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಪೋಲಿಸ್ ಸಿಆರ್​ಪಿಎಫ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ‌‌. ಒಟ್ಟು 84 ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದ್ದು, ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ಜಿಲ್ಲಾಧಿಕಾರಿಯಿಂದ ಮಾಹಿತಿ: ಈ ವೇಳೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ''ದಾವಣಗೆರೆ ಜಿಲ್ಲಾಡಳಿತ ಮತ ಎಣಿಕೆಗೆ ಸರ್ವ ಸನ್ನದ್ಧವಾಗಿದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆಗೆ ಸಿದ್ಧತೆ ನಡೆಸಲಾಗಿದ್ದು, ಮೂರು ಬ್ಲಾಕ್​ಗಳಲ್ಲಿ‌ ಮತ ಎಣಿಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ಕೊಠಡಿಯಲ್ಲಿ ಮತ ಎಣಿಕೆ ಮಾಡಲು 14 ಟೇಬಲ್​ಗಳನ್ನು ಅಳವಡಿಲಾಗಿದ್ದು, ಒಂದು ಟೇಬಲ್​ಗೆ ಮೂರು ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ಬೆಳಿಗ್ಗೆ 8ಗಂಟೆಯಿಂದ ಅಂಚೆ ಮತ ಹಾಗೂ ಹಿರಿಯ ನಾಗರಿಕರ, ವಿಶೇಷಚೇತನರ ಮತ ಎಣಿಕೆ ಜರುಗಲಿದೆ. ಬೆಳಿಗ್ಗೆ 8.30ಕ್ಕೆ ಇವಿಎಂ ಮತ ಎಣಿಕೆ ಆರಂಭವಾಗಲಿದೆ.

ಇನ್ನು ಅಂಚೆ ಮತಗಳು, ವಿಶೇಷಚೇತನರ, ಹಿರಿಯ ನಾಗರಿಕ ಮತಗಳು 9,340ಗಳಿದ್ದು, ಬೆಳಿಗ್ಗೆ 8 ಗಂಟೆಯವರೆಗೆ ಅಂಚೆ ಮತ ಸ್ವೀಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 1.30ಕ್ಕೆ ಬಹುತೇಕ ಫಲಿತಾಂಶ ಪ್ರಕಟ ಆಗಲಿದೆ. ಮತ ಎಣಿಕೆ ಕಾರ್ಯಕ್ಕೆ 650 ಸಿಬ್ಬಂದಿ ನೇಮಕ ಮಾಡಲಾಗಿದ್ದು, ಜಗಳೂರು- 19, ಹರಿಹರ- 17, ದಾವಣಗೆರೆ ಉತ್ತರ- 18, ದಾವಣಗೆರೆ ದಕ್ಷಿಣ- 16, ಚನ್ನಗಿರಿ- 19 ಸುತ್ತುಗಳಲ್ಲಿ ಮತ ಎಣಿಕೆ‌ ನಡೆಯಲಿದೆ. ಇನ್ನು ಉಳಿದ ಮಾಯಕೊಂಡ- 18, ಹೊನ್ನಾಳಿ- 18 ಸುತ್ತುಗಳಲ್ಲಿ ಮತ ಎಣಿಕೆ ಮಾಡ್ತೇವೆ ಎಂದು
ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಮಾಹಿತಿ ನೀಡಿದ್ರು.

ಇದನ್ನೂ ಓದಿ: ಪಕ್ಷಕ್ಕಾಗಿ ಶ್ರಮ ಪಟ್ಟಿದ್ದೇನೆ, ಈಗ ನನಗೆ ಹಿರಿ-ಕಿರಿಯರ ಸಹಕಾರ ಸಿಗುವ ವಿಶ್ವಾಸ ಇದೆ: ಡಿಕೆಶಿ

ಮತ ಎಣಿಕೆ ಹಿನ್ನೆಲೆ ಖಾಕಿ ಕಣ್ಗಾವಲು: ನಾಳೆ ದಾವಣಗೆರೆ ವಿವಿಯಲ್ಲಿ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮೂರು ಹಂತಗಳಲ್ಲಿ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರ ಹೊರಭಾಗದಲ್ಲಿ ಸಿಆರ್​ಪಿಎಫ್ ಸಿಬ್ಬಂದಿ ಭದ್ರತೆ ಒದಗಿಸಲಿದ್ದಾರೆ. ಕೆಎಸ್ಆರ್​ಪಿ, ಸಿವಿಲ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಫಲಿತಾಂಶ ಹೊರಬಂದ ಬಳಿಕ ಯಾವುದೇ ಗಲಾಟೆ ನಡೆಯದಂತೆ ಬಂದೋಬಸ್ತ್ ಕಲ್ಪಿಸಲಾಗಿದೆ. ಈಗಾಗಲೇ 144 ಸೆಕ್ಷನ್ ಜಾರಿಯಲ್ಲಿದೆ. ಒಟ್ಟು 300 ಜನ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ‌. ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿರುತ್ತವೆ. ಫಲಿತಾಂಶ ನೋಡಲು ಬರುವ ಜನರಿಗೆ ಹೊರಗಡೆ ಅವಕಾಶ ಕಲ್ಪಿಸಲಾಗಿದೆ. ಧ್ವನಿ ವರ್ಧಕಗಳ ಮೂಲಕ ಫಲಿತಾಂಶ ಕೇಳಬಹುದಾಗಿದೆ.

ಇದನ್ನೂ ಓದಿ: ದೇಶದ ಗಮನ ಸೆಳೆದ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ: ಜಾತಿ ಲೆಕ್ಕಾಚಾರ, ಬೆಟ್ಟಿಂಗ್ ಭರಾಟೆ ಜೋರು

ಇದನ್ನೂ ಓದಿ: ಎಡಗೈ ಊತ, ನೋವು; ತಪಾಸಣೆಗೆ ಒಳಗಾದ ಸಿದ್ದರಾಮಯ್ಯ: ಡಿಕೆಶಿ ಆರೋಗ್ಯ ಚೇತರಿಕೆ

Last Updated : May 12, 2023, 7:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.