ETV Bharat / state

ವಿವಿಧ ಹತ್ತು ಪ್ರಕರಣಗಳನ್ನು ಭೇದಿಸಿದ ದಾವಣಗೆರೆ ಪೊಲೀಸರು - ಮನೆ ಕಳ್ಳತನ ಆರೋಪಿಯ ಬಂಧನ

ದಾವಣಗೆರೆಯಲ್ಲಿ ದಾಖಲಾಗಿದ್ದ ಕುರಿ‌ ಕಳ್ಳತನ, ಗಂಧದ ಮರ ಹಾಗೂ ಮೊಬೈಲ್‌ ಕಳ್ಳತನ ಸೇರದ್ದಂತೆ ಸುಮಾರು 10 ಪ್ರಕರಣಗಳನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

davanagere
ಎಸ್​ಪಿ ರಿಷ್ಯಂತ್
author img

By

Published : Jun 29, 2021, 10:58 PM IST

ದಾವಣಗೆರೆ: ಜಿಲ್ಲೆಯ ವಿವಿಧ ಹತ್ತು ಪ್ರಕರಣಗಳನ್ನು ಭೇದಿಸುವಲ್ಲಿ ಬೆಣ್ಣೆ ನಗರಿಯ ಖಾಕಿ ಪಡೆ ಯಶಸ್ವಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್​ಪಿ ರಿಷ್ಯಂತ್, ಕುರಿ‌ ಕಳ್ಳತನ, ಗಂಧದ ಮರ ಹಾಗು ಮೊಬೈಲ್‌ ಕಳ್ಳತನ ಸೇರದ್ದಂತೆ ಬೈಕ್, ಮನೆ ಮತ್ತು ದೇವಸ್ಥಾನದ ಕಳ್ಳತನದ ಪ್ರಕರಣಗಳನ್ನು ಭೇದಿಸಿ ಖದೀಮರ ಹೆಡೆ ಮುರಿಕಟ್ಟಿದ್ದಾರೆ‌. ದಾವಣಗೆರೆ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಒಂಬತ್ತು ಕುರಿಗಳನ್ನು ವಶಕ್ಕೆ ಪಡೆದು ಆರೋಪಿತ ಇಸ್ಮಾಯಿಲ್ ಹಾಗೂ ಅಮೀರ್ ಜಾನ್ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ರು.

ಎಸ್​ಪಿ ರಿಷ್ಯಂತ್

ಮೊಬೈಲ್ ಹಾಗೂ ಗಂಧದ ಮರ ಕಳ್ಳತನ ಭೇದಿಸಿದ ಖಾಕಿ:

ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಮೊಬೈಲ್ ಹಾಗೂ ಗಂಧದ ಮರದ ಕಳ್ಳತನ ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಮಧ್ಯಪ್ರದೇಶ ಮೂಲದ ಸತೀಶ್ ಎಂಬ ಆರೋಪಿಯನ್ನು ಬಂಧಿಸಿ ಬಂಧಿತನಿಂದ 55,000 ಬೆಲೆ ಬಾಳುವ ಮೂರು ಮೊಬೈಲ್ ಹಾಗೂ 25,000 ಸಾವಿರ ಬೆಲೆ ಬಾಳುವ ಗಂಧದ ಮರಗಳನ್ನು ವಶಕ್ಕೆ ಪಡೆದರು. ಇದು ಬಸವರಾಜ್ ಕುರ್ತುಕೋಟೆ‌ ಎಂಬುವರಿಗೆ ಸೇರಿದ್ದಾಗಿವೆ. ಇನ್ನು ಗಂಧದ ಮರಗಳು ಜಿಎಮ್ಐಟಿಯ ಸಂಸ್ಥೆಗೆ ಸೇರಿದ್ದವು ಎಂದು ತಿಳಿದು ಬಂದಿದೆ.

13 ಮೋಟರ್ ಸೈಕಲ್ ವಶ:

ಬಿಳಿಚೋಡು ಪೊಲೀಸ್​ ಠಾಣೆಯ ಪೊಲೀಸರು ದ್ವಿ ಚಕ್ರವಾಹನ ಕಳ್ಳನಾದ ರುದ್ರಪ್ಪ ಎಂಬುವನನ್ನು ಬಂಧಿಸಿದ್ದು, ಬಂಧಿತನಿಂದ 1,90,000 ಮೊತ್ತದ 13 ಮೋಟರ್ ಸೈಕಲ್ ವಶಕ್ಕೆ ಪದಡೆದರು. ಇವು ದಾವಣಗೆರೆ ಜಿಲ್ಲೆಯ ಅಸಗೋಡು ಗ್ರಾಮಸ್ಥರಿಗೆ ಸೇರಿದ್ದಾಗಿವೆ.

ಮನೆ ಕಳ್ಳತನ ಆರೋಪಿಯ ಬಂಧನ:

ಜಗಳೂರು ಠಾಣೆಯ ಪೊಲೀಸರು ಮನೆ ಕಳ್ಳತ‌ನದ ಪ್ರಕರಣಗಳನ್ನು ಭೇದಿಸಿ ಇಬ್ಬರು ಖದೀಮರನ್ನು ಬಂಧಿಸಿದ್ದಾರೆ, ಹರೀಶ್ ರೆಡ್ಡಿ ಹಾಗೂ ಕುರುಡು ಪಾಲಯ್ಯ ಎಂಬುವರನ್ನು ಬಂಧಿಸಿ, ಬಂಧಿತರಿಂದ 2,52,000 ಬೆಲೆ ಬಾಳುವ ಚಿನ್ನಾಭರಣ, ಹಾಗು ಕೃತ್ಯಕ್ಕೆ ಬಳಕೆ‌ ಮಾಡಿದ್ದ ದ್ವಿ ಚಕ್ರವಾಹನ ವಶಕ್ಕೆ ಪಡೆಯಲಾಯಿತು. ಇದು ಹೊನ್ನಾರೆಡ್ಡಿ ಎಂಬುವವರಿಗೆ ಸೇರಿದ್ದಾಗಿದ್ದು, ಜಗಳೂರು ತಾಲೂಕಿನ ಗೊಲ್ಲರಹಟ್ಟಿಯಲ್ಲಿ ಕಳ್ಳತನವಾಗಿತ್ತು.‌

ಇನ್ನು ದೇವಸ್ಥಾನದಲ್ಲಿ ಚಿನ್ನಾಭರಣವನ್ನು ದೋಚಿದ್ದ ಖದೀಮನನ್ನು ಜಗಳೂರು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಂಧಿತನನ್ನು ಚಿತ್ರದುರ್ಗ ಮೂಲದ ಮುದ್ದುರಾಜ್ ಎಂದು ಹೇಳಲಾಗಿದ್ದು, ಬಂಧಿತನಿಂದ 1,20,000 ಬೆಲೆ ಬಾಳುವ ನಾಲ್ಕು ಬೆಳ್ಳಿಯ ಗಟ್ಟಿಗಳನ್ನು ವಶಕ್ಕೆ ಪಡೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.