ದಾವಣಗೆರೆ: ಮೆಕ್ಕೆಜೋಳ ಖರೀದಿಸಿ ರೈತ ಹಾಗೂ ವರ್ತಕರಿಗೆ ಹಣ ನೀಡದೆ ಮೋಸ ಮಾಡುತ್ತಿದ್ದ ಬ್ಯಾಂಕ್ ಉದ್ಯೋಗಿ ಸೇರಿ 6 ಜನರನ್ನು ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಹಾಗೂ ವಿಜಯನಗರ ಭಾಗದ ರೈತರ ಬಳಿ ಮೆಕ್ಕೆಜೋಳ ಖರೀದಿಸಿದ ಆರೋಪಿಗಳು ಹಣ ನೀಡದೆ ವಂಚಿಸಿದ್ದರು.
ಶಿವಲಿಂಗಯ್ಯ, ಚೇತನ, ಮಹೇಶ್ವರಯ್ಯ, ವಾಗೀಶ್, ಚಂದ್ರು ಹಾಗೂ ಕೆನರಾ ಬ್ಯಾಂಕ್ ಸಿಬ್ಬಂದಿ ಶಿವಕುಮಾರ್ ಬಂಧಿತರು. ಇವರಿಂದ 2.68 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಡಿಎಸ್ಪಿ ಬಿ. ಬಸವರಾಜ್ ನೇತೃತ್ವದ 15 ಜನರ ತಂಡ ಕಾರ್ಯಾಚರಣೆ ನಡೆಸಿ, ವಂಚಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಕತ್ತಲಲ್ಲಿ ಹುಬ್ಬಳ್ಳಿ ಭೂಮಾಪನ ಕಚೇರಿ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಬೇಸರ