ದಾವಣಗೆರೆ: ಸರ್ಕಾರ ಹೋಮ್ ಐಸೋಲೇಷನ್ ರದ್ದುಗೊಳಿಸಿದ ಬೆನ್ನಲ್ಲೇ ಜಿಲ್ಲಾಡಳಿತ ಕೋವಿಡ್ ಕೇರ್ ಸೆಂಟರ್ಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಕೊರೊನಾ ರೋಗ ಲಕ್ಷಣಗಳು ಇಲ್ಲದಿದ್ರೂ ಪಾಸಿಟಿವ್ ವರದಿ ಬಂದಲ್ಲಿ ಅಂಥವರನ್ನು ಮುಂಜಾಗೃತಾ ಕ್ರಮವಾಗಿ ಕೋವಿಡ್ ಕೇರ್ ಸೆಂಟರ್ಗಳಿಗೆ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿ ಪಲ್ಸ್ ಆಕ್ಸಿಮೀಟರ್, ಬಿಪಿ, ಶುಗರ್ ಚೆಕ್ ಮಾಡುವ ಸಲಕರಣೆಗಳನ್ನು ಇರಿಸಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಜಿಲ್ಲಾಡಳಿತ ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದೆ. ರೋಗ ಲಕ್ಷಣಗಳು ಇಲ್ಲದೇ, ಪಾಸಿಟಿವ್ ವರದಿ ಬಂದ್ರೆ ಅವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಕಳುಹಿಸಿ ಕೊಡಲಾಗುತ್ತಿದೆ. ಹೋಮ್ ಐಸೋಲೇಷನ್ ಇರುವುದರಿಂದ ಕೊರೊನಾ ಹೆಚ್ಚಾಗಿ ಹರಡುತ್ತಿದೆಯೆಂದು ಜಿಲ್ಲಾಡಳಿತ ಈ ನಿರ್ಧಾರಕ್ಕೆ ಬಂದಿದೆ.
ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 19 ಕೋವಿಡ್ ಕೇರ್ ಸೆಂಟರ್ಗಳನ್ನು ಜಿಲ್ಲಾಡಳಿತ ತೆರೆದಿದೆ ಎಂದು ಡಿಹೆಚ್ಒ ಡಾ. ನಾಗರಾಜ್ ಮಾಹಿತಿ ನೀಡಿದರು. ಸೋಂಕಿತರಿಗೆ ಯಾವುದೇ ಸಮಸ್ಯೆಗಳಾಗದಂತೆ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ಸದ್ಯ ಐದು ಸಾವಿರ ಸಕ್ರಿಯ ಕೊರೊನಾ ಪ್ರಕರಣಗಳಿರುವುದರಿಂದ ಜಿಲ್ಲಾಡಳಿತ ಪ್ರತಿ ತಾಲೂಕುಗಳಿ ಕೋವಿಡ್ ಕೇರ್ ಸೆಂಟರ್ ತೆರೆದು ಸೋಂಕಿತರಿಗೆ ಚಿಕಿತ್ಸೆ ನೀಡಿ ಕೊರೊನಾದ ಕೊಂಡಿ ಮುರಿಯಲು ತಂತ್ರ ರೂಪಿಸಿದೆ ಎಂದು ತಿಳಿಸಿದರು. ಈ ಕೋವಿಡ್ ಕೇರ್ ಸೆಂಟರ್ಗಳ ಸದುಪಯೋಗ ಪಡೆಯಬೇಕು. ನಿರ್ಲಕ್ಷ್ಯ ವಹಿಸದೇ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸಚಿವ ಬೈರತಿ ಬರವರಾಜ್ ಮನವಿ ಮಾಡಿದರು.
ಕೋವಿಡ್ ಕೇರ್ ಸೆಂಟರ್:
ಕಡಿಮೆ ರೋಗಲಕ್ಷಣ ಇರುವ ಕೊರೊನಾ ರೋಗಿಗಳಿಗೆ ಮಾತ್ರ ಸಿಸಿಸಿ(ಕೋವಿಡ್ ಕೇರ್ ಸೆಂಟರ್)ಗೆ ಕಳಿಹಿಸಿಕೊಡಲಾಗುತ್ತಿದ್ದರಿಂದ ಅಲ್ಲಿ ಪಲ್ಸ್ ಆಕ್ಸಿಮೀಟರ್, ಬಿಪಿ, ಶುಗರ್ ಪರಿಶೀಲಿಸುವ ಮೀಟರ್ ನೊಂದಿಗೆ ನುರಿತ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಕೊರೊನಾ ಸೀರಿಯಸ್ ಪ್ರಕರಣಗಳಿಗೆ ತಾಲೂಕು ಹಾಗು ಜಿಲ್ಲಾಸ್ಪತ್ರೆಗೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದೇ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಈಸಿಜಿ, ಸಿಟಿ ಸ್ಕ್ಯಾನ್, ಎಂಆರ್ಐ, ಎಕ್ಸ್ ರೇ ಮುಂತಾದ ವ್ಯವಸ್ಥೆಯನ್ನು ಮಾಡದೆ ಇರುವುದಕ್ಕೆ ಪ್ರಮುಖ ಕಾರಣ ಆಗಿದೆ.
ಇದನ್ನೂ ಓದಿ: ಕೊರೊನಾ ಅಲೆಯಿಂದ ಬಳ್ಳಿಯಲ್ಲೆ ಬಾಕಿಯಾದ ವೀಳ್ಯ: ಕರಾವಳಿಯಲ್ಲಿ ರೈತ ವಿಲವಿಲ
ಒಟ್ಟಾರೆ ಜಿಲ್ಲೆಯಲ್ಲಿ ಸಾಕಷ್ಟು ಸೋಂಕಿತರು ಕೋವಿಡ್ ಕೇರ್ ಸೆಂಟರ್ಗಳಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆ ಸೇರುತ್ತಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಸಿಸಿಸಿಗೆ ಕಳುಹಿಸಿಕೊಡುತ್ತಿದ್ದರಿಂದ ಹೊನ್ನಾಳಿಯಲ್ಲಿ ಕೂಡ ಸಾವಿರ ಬೆಡ್ ಸೌಲಭ್ಯ ಇರುವ ಕೋವಿಡ್ ಕೇರ್ ಸೆಂಟರ್ ಅನ್ನು ತೆರೆಯಲಾಗಿದೆ.