ದಾವಣಗೆರೆ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯಕ್ಕೆ ದಿನಾಂಕ ನಿಗದಿ ಆಗಿದೆ.
ಓದಿ: ದೇಶಾದ್ಯಂತ ರೈಲ್ ರೋಖೋ: ಧಾರವಾಡ, ತುಮಕೂರು, ಬೆಳಗಾವಿಯಲ್ಲಿ ರೈತರು ಪೊಲೀಸ್ ವಶಕ್ಕೆ.. LIVE UPDATES
ಇದೇ ಶನಿವಾರ 20ಕ್ಕೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮ ಹಾಗೂ ಅಗಸನಾಳ್ ಈ ಎರಡು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಲಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಬಸವನಕೋಟೆ ಹಾಗೂ ಅಗಸನಾಳ್ ಗ್ರಾಮದಲ್ಲಿ ಇದೇ 20ಕ್ಕೆ ಗ್ರಾಮ ವಾಸ್ತವ್ಯ ಮಾಡಲಿದ್ದು, ಸಮಸ್ಯೆಗಳ ಬಗ್ಗೆ ಸ್ಥಳದಲ್ಲೇ ಪರಿಹಾರ ಮಾಡಲು ಚಿಂತಿಸಲಾಗಿದೆ.
ಇದಲ್ಲದೇ ಜಿಪಂ ಸಿಇಒ ಕೂಡ ಇದಕ್ಕೆ ಕೈ ಜೋಡಿಸಿದ್ದು, ಜಿಪಂ ಅಡಿ ಬರುವ ಇಲಾಖೆಗಳ ಸೇವೆಗಳು ಜನರಿಗೆ ತಲುಪುವಂತೆ ಅಲ್ಲಿ ಕೆಲಸ ಮಾಡುತ್ತೇವೆ ಎಂದರು. ಇನ್ನು ಅದೇ ದಿನದಂದು ಎಸಿ ಸಿಇಒ ಡಿಸಿ ಗ್ರಾಮ ವಾಸ್ತವ್ಯ ಮುಗಿದ ಬಳಿಕ ಆಯಾ ತಾಲೂಕಿನ ತಹಶೀಲ್ದಾರ್ ತಮ್ಮ ತಾಲೂಕಿನ ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡುತ್ತಾರೆ.
ಪ್ರತಿ ತಿಂಗಳು ಗ್ರಾಮ ವಾಸ್ತವ್ಯ ನಡೆಯಲಿದ್ದು, ಅಂದು ರಜೆ ಇದ್ದರೂ ಕೂಡ ಕೆಲಸ ಮಾಡಬೇಕಾಗುತ್ತದೆ. ಇದು ಜಿಲ್ಲಾಧಿಕಾರಿಯವರ ನಡೆ ಹಳ್ಳಿ ಕಡೆ ಆರಂಭ ಆಗಲಿದೆ ಎಂದರು.