ETV Bharat / state

ಕುದುರೆ ಖರೀದಿಸಲು ಬೆಣ್ಣೆನಗರಿಗೆ ಬಂದ ದರ್ಶನ್​​: ಚಾಲೆಂಜಿಂಗ್ ಸ್ಟಾರ್ ಕಾರು ಕಂಡು ಪೊಲೀಸರು ಫಿದಾ

ಬಾಪೂಜಿ ಗೆಸ್ಟ್ ಹೌಸ್​​ಗೆ ಆಗಮಿಸಿದ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಲ್ಯಾಂಬರ್ ಗನಿ ಕಾರಿನ ಮುಂದೆ ನಿಂತು ಫೋಟೋ ತೆಗೆದುಕೊಂಡು ಖುಷಿಪಟ್ಟರು.

author img

By

Published : Aug 31, 2020, 9:43 AM IST

ಚಾಲೆಂಜಿಂಗ್ ಸ್ಟಾರ್ ಕಾರು ಕಂಡು ಪೊಲೀಸರು ಫಿದಾ

ದಾವಣಗೆರೆ: ಕುದುರೆ ಖರೀದಿಸಲು ಬೆಣ್ಣೆನಗರಿಗೆ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಗರದ ಬಾಪೂಜಿ ಗೆಸ್ಟ್ ಹೌಸ್​​ನಲ್ಲಿ ತಂಗಿದ್ದು, ದುಬಾರಿ ಬೆಲೆಯ ಲ್ಯಾಂಬರ್ ಗನಿ‌ ಕಾರಿನ ಮುಂದೆ ನಿಂತು ಪೊಲೀಸರು ಫೋಟೋ ತೆಗೆಸಿಕೊಂಡ ಘಟನೆ ನಡೆಯಿತು.

ಹರಿಹರ ತಾಲೂಕಿನ ದುಗ್ಗತ್ತಿ ಶುಗರ್ ಕಾರ್ಖಾನೆ ಹಾಗೂ ಕಲ್ಲೇಶ್ವರ ರೈಸ್ ಮಿಲ್​​ಗೆ ರಾತ್ರಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜೊತೆ ಭೇಟಿ ನೀಡಿದ ದರ್ಶನ್, ಕುದುರೆಗಳನ್ನು ನೋಡಿದ್ದಾರೆ. ಬಳಿಕ ರಾತ್ರಿ ಶಾಮನೂರು ಶಿವಶಂಕರಪ್ಪ ಮನೆಯಲ್ಲಿ ಊಟ ಮಾಡಿದ ಬಳಿಕ ರಾತ್ರಿ 3.15ಕ್ಕೆ ಬಾಪೂಜಿ ಗೆಸ್ಟ್ ಹೌಸ್​​ಗೆ ಆಗಮಿಸಿ, ಅಲ್ಲಿಯೇ ತಂಗಿದ್ದರು.

ಬೆಳಗ್ಗೆ ಆರು ಗಂಟೆಗೆ ಬಾಪೂಜಿ ಗೆಸ್ಟ್ ಹೌಸ್​​ಗೆ ಆಗಮಿಸಿದ ವಿದ್ಯಾನಗರ ಪೊಲೀಸ್ ಠಾಣೆಯ ಸಿಬ್ಬಂದಿ ಲ್ಯಾಂಬರ್ ಗನಿ ಕಾರಿನ ಮುಂದೆ ನಿಂತು ಫೋಟೋ ತೆಗೆದುಕೊಂಡು ಖುಷಿಪಟ್ಟರು. ಎಸ್.ಎಸ್.‌ಮಲ್ಲಿಕಾರ್ಜುನ್ ಬಳಿ ಹತ್ತಕ್ಕೂ ಹೆಚ್ಚು ಕುದುರೆಗಳಿದ್ದು, ಈ ಪೈಕಿ ಒಂದು ಕುದುರೆಯಾದರೂ ನೀಡಬೇಕೆಂದು ಮಲ್ಲಿಕಾರ್ಜುನ್ ಬಳಿ ದರ್ಶನ್ ಕೇಳಿಕೊಂಡಿದ್ದಾರೆ. ಆದರೆ ಕುದುರೆ ಇಷ್ಟವಾದ ಬಳಿಕ ಇಲ್ಲಿಂದ ಹೋಗ್ತೇನೆ. ಇಲ್ಲದಿದ್ದರೆ ಎರಡು ದಿನವಾದರೂ ಇಲ್ಲಿಯೇ ಇರುತ್ತೇನೆ ಎಂದು ದರ್ಶನ್, ಮಲ್ಲಿಕಾರ್ಜುನ್​ ಬಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.