ETV Bharat / state

Davanagere crime.. ಇಲಿ ಕೊಲ್ಲಲು ವಿಷ ಬೆರೆಸಿ ಇಟ್ಟಿದ್ದ ಟೊಮೆಟೊ ಸೇವಿಸಿ ಯುವತಿ ಸಾವು

author img

By

Published : Jun 10, 2023, 3:40 PM IST

ವಿಷ ಬೆರೆಸಿದ್ದ ಟೊಮೆಟೊ ಸೇವಿಸಿ ಯುವತಿ ಮೃತಪಟ್ಟಿರುವ ಘಟನೆ ಗದಗದಲ್ಲಿ ನಡೆದಿದೆ.

ಟೊಮ್ಯಾಟೊ ಸೇವಿಸಿ ಯುವತಿ ಸಾವು
ಟೊಮ್ಯಾಟೊ ಸೇವಿಸಿ ಯುವತಿ ಸಾವು

ದಾವಣಗೆರೆ: ಇಲಿಗಾಗಿ ವಿಷ ಸವರಿ ಇಟ್ಟಿದ್ದ ಟೊಮೆಟೊ ಹಣ್ಣನ್ನು ಆಕಸ್ಮಿಕವಾಗಿ ಸೇವಿಸಿ ಯುವತಿ ಕೊನೆಯುಸಿರೆಳೆದಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿ ನಡೆದಿದೆ. ಸೋಮವಾರ ಯವತಿ ಹಣ್ಣು ಸೇವಿಸಿದ್ದು, ಶುಕ್ರವಾರ ಸಾವನ್ನಪ್ಪಿದ್ದಾಳೆ. ಹೆಚ್ ಐಶ್ವರ್ಯ (21) ಮೃತ ಯುವತಿ. ಇವರು ಬಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಮನೆಯಲ್ಲಿ ಇಲಿಗಳು ಹೆಚ್ಚಾಗಿದ್ದರಿಂದ ಅವುಗಳನ್ನು ಹಿಡಿಯಲು ವಿಷ ಸವರಿ ಟೊಮೆಟೊ ಹಣ್ಣನ್ನು ಇಡಲಾಗಿತ್ತು. ಜೂನ್ 05 ಸೋಮವಾರ ದಂದು ಮೃತ ಯುವತಿ ಐಶ್ವರ್ಯ ಆಕಸ್ಮಿಕವಾಗಿ ಇಲಿಗಾಗಿ ಇರಿಸಿದ್ದ ಟೊಮೆಟೊ ಹಣ್ಣನ್ನು ಸೇವಿಸಿದ್ದಾಳೆ. ಟೊಮೆಟೊ ಹಣ್ಣನ್ನು ಸೇವಿಸಿದ ಬಳಿಕ ದೇಹದಲ್ಲಿ ರಿಯಾಕ್ಷನ್ ಆಗಿದೆ​. ಇದನ್ನು ಗಮನಿಸಿದ ಯುವತಿ ತನ್ನ ಕುಟುಂಬಕ್ಕೆ ತಿಳಿಸಿದ್ದಾಳೆ.

ಏನು ಆಗಲ್ಲ, ಮನೆಯವರು ಕಡಿಮೆಯಾಗುತ್ತೆ. ಅದು ಕೇವಲ ಇಲಿಗಳಿಗೆ ಮಾತ್ರ ವಿಷವಾಗಿ ಕೆಲಸ ಮಾಡುತ್ತದೆ ಎಂದು ಸುಮ್ಮನಾಗಿದ್ದಾರೆ. ಸಮಸ್ಯೆ ಮತ್ತೆ ಹೆಚ್ಚಾಗಿದೆ. ಕೂಡಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದಾರೆ.

ಬಳಿಕ ಅಲ್ಲಿಂದ ಬೇರೊಂದು ಆಸ್ಪತ್ರೆಗೆ ಹೋಗಿದ್ದಾರೆ. ಚಿಕಿತ್ಸೆ ಹರಸಿ ತಿರುಗಾಡಿದರೂ ಕೂಡ ಯಾವುದೇ ಪ್ರಯೋಜನೆಯಾಗದೆ ವಿಷ ಇಡೀ ದೇಹಕ್ಕೆ ಹರಡಿ ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮೃತಳ ಚಿಕ್ಕಪ್ಪ ಹಾಗು ಸಂಬಂಧಿಕರು ನ್ಯಾಮತಿ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆಂದು ನ್ಯಾಮತಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.‌

ಪೊಲೀಸರು ಹೇಳುವುದೇನು...? ದೂರವಾಣಿ ಮೂಲಕ ಈಟಿವಿ ಭಾರತದೊಂದಿಗೆ ಪ್ರತಿಕ್ರಿಯಿಸಿದ ಪಿಎಸ್ಐ ರಮೇಶ್, ಈ ಘಟನೆ ಜೂನ್ 05 ರಂದು ನಡೆದಿದ್ದು, ಯುವತಿ ಐಶ್ವರ್ಯ ಕಳೆದ ದಿನ ಕೊನೆಯುಸಿರೆಳೆದಿದ್ದಾಳೆ‌. ಇಲಿಗಾಗಿ ವಿಷ ಸವರಿ ಇರಿಸಿದ್ದ ಟೊಮೆಟೊಅನ್ನು ಯುವತಿ ಸೇವಿಸಿದ್ದಾಳೆ. ಇದರಿಂದ ಆರೋಗ್ಯ ಬಿಗಡಾಯಿಸಿದ ಬಳಿಕ ಬಳಿಕ ಘಟನೆ ಬೆಳಕಿಗೆ ಬಂದಿದೆ.

ಬಳಿಕ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅದರೂ ಚಿಕಿತ್ಸೆ ಫಲಕಾರಿಯಾಗದೆ ಐಶ್ವರ್ಯ ಸಾವನಪ್ಪಿದ್ದಾಳೆ. ಘಟನೆ ಬಳಿಕ ಯುವತಿಯ ಚಿಕ್ಕಪ್ಪ ನ್ಯಾಮತಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲು ಮಾಡಿದ್ದು, ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಗಾಳಿ ಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ವ್ಯಕ್ತಿ ಸಾವು.. ಗದಗ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿ ಯುವಕನೋರ್ವ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ನಿವಾಸಿ ರವಿ ಮೃತ ಯುವಕ ಎಂದು ಗುರುತಿಸಲಾಗಿದೆ. ನಗರದ ಡಂಬಳ ನಾಕಾ ಬಳಿ ಬೈಕ್‌ನಲ್ಲಿ ಹೋಗುವಾಗ ಗಾಳಿಪಟದ ದಾರ (ಮಾಂಜಾ ದಾರ) ಯುವಕನ ಕುತ್ತಿಗೆಗೆ ಸಿಲುಕಿ ಕತ್ತು ಸೀಳಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರವಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾನೆ.

ಇದನ್ನೂ ಓದಿ: ದೇಹದ ಎತ್ತರ ಕಡಿಮೆ ಎಂಬ ಕೊರಗು; ನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.