ETV Bharat / state

Davanagere crime: ಅನುಮಾನಾಸ್ಪದವಾಗಿ ವ್ಯಕ್ತಿ ಸಾವು.. ಪತ್ನಿ ಮೇಲೆ ಗುಮಾನಿ.. ಪ್ರಿಯಕರನೊಂದಿಗೆ ಸೇರಿ ಗಂಡನ ಕೊಂದಳಾ ಹೆಂಡತಿ? - ವಿವಾಹಿತ ಅನುಮಾನಾಸ್ಪದ ಸಾವು

ವಿವಾಹಿತನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

suspicious-death-of-man-in-davanagere
ಅನುಮಾನಾಸ್ಪದವಾಗಿ ವ್ಯಕ್ತಿ ಸಾವು : ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಕೊಲೆ ಮಾಡಿದ ಆರೋಪ
author img

By

Published : Jun 10, 2023, 6:40 PM IST

ದಾವಣಗೆರೆ : ವಿವಾಹಿತನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಬಿಸಲೇರಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಮೃತನ ಪತ್ನಿಯ ವಿರುದ್ಧ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಕೊಲೆ ಆರೋಪ ಮಾಡಿದ್ದಾರೆ.

ಬಿಸಲೇರಿ ಗ್ರಾಮದ ನಿವಾಸಿ ಲಿಂಗರಾಜ್​ ಎಂಬುವವರೇ ಮೃತರೆಂದು ಗುರುತಿಸಲಾಗಿದೆ. ಈತನ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಈ ಕೊಲೆ ಮಾಡಿದ್ದಾಳೆಂಬ ಆರೋಪ ಕೇಳಿ ಬಂದಿದೆ‌. ಅಕ್ರಮ ಸಂಬಂಧ ಹಿನ್ನೆಲೆ ಪತಿಯನ್ನು ಕೊಲೆಗೈದಿರುವ ಶಂಕೆಯನ್ನು ಕುಟುಂಬಸ್ಥರು ಮತ್ತು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

ಮನೆ ಸ್ವಚ್ಛಗೊಳಿಸುವಾಗ ಸಾವು ? : ನಿನ್ನೆ(ಶುಕ್ರವಾರ) ರಾತ್ರಿ ಲಿಂಗರಾಜ ಮನೆಯಲ್ಲಿ ದೇವರ ಕಾರ್ಯವಿತ್ತು. ದೇವರ ಕಾರ್ಯದ ವೇಳೆ ಅನುಮಾನಾಸ್ಪದವಾಗಿ ಲಿಂಗರಾಜ ಸಾವನ್ನಪ್ಪಿದ್ದಾನೆ. ಈ ಹಠಾತ್​ ಸಾವು ಕುಟುಂಬಸ್ಥರ ಸಂಶಯಕ್ಕೆ ಕಾರಣವಾಗಿದೆ. ಮನೆ ಸ್ವಚ್ಛಗೊಳಿಸುವಾಗ ಬಿದ್ದು ಮೃತಪಟ್ಟಿರುವುದು ಪತ್ನಿ ಹೇಳಿದ್ದಾಳೆ. ಲಿಂಗರಾಜ್​ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆರೋಪಿಯನ್ನು ಬಂಧಿಸುವ ತನಕ ಶವಸಂಸ್ಕಾರ ಮಾಡುವುದಿಲ್ಲ ಎಂದು ಮೃತನ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ.

ಅಕ್ರಮ ಸಂಬಂಧ ಕೊಲೆಗೆ ಕಾರಣ ?: ಮೃತ ಲಿಂಗರಾಜ್​ಗೆ ಐದು ವರ್ಷಗಳ ಹಿಂದೆ ಮದುವೆಯಾಗಿತ್ತು. ಕುಟುಂಬಸ್ಥರು ಆರೋಪಿಸುವ ಪ್ರಕಾರ ಪತ್ನಿಗೆ ಬೇರೊಬ್ಬನ ಜೊತೆ ಅನೈತಿಕ ಸಂಬಂಧವಿತ್ತು. ಮಗುವಾದ ಬಳಿಕವೂ ಪ್ರಿಯಕರನ ಜೊತೆಗೆ ಹೋಗಿದ್ದಳಂತೆ. ಈ ಸಂಬಂಧ ಗ್ರಾಮಸ್ಥರೆಲ್ಲ ಕೂಡಿ ಆಕೆಗೆ ಬುದ್ಧಿವಾದ ಹೇಳಿದ್ದರು. ಮದುವೆ ಆಗಿದ್ದು, ಮಗು ಕೂಡ ಇದೆ. ಈ ರೀತಿ ಮಾಡುವುದು ಸರಿಯಲ್ಲ ಎಂದು ರಾಜಿ ಪಂಚಾಯಿತಿ ಮಾಡಿ ಲಿಂಗರಾಜ್ ಮತ್ತು ಅವನ ಪತ್ನಿಯನ್ನು ಮತ್ತೆ ಒಂದು ಮಾಡಿದ್ದರು. ಬಳಿಕ ಇಬ್ಬರೂ ಚೆನ್ನಾಗಿಯೇ ಇದ್ದರು ಎಂದು ತಿಳಿದುಬಂದಿದೆ.

ಆದರೆ ಲಿಂಗರಾಜ ಸಂಬಂಧಿಕರು ಮಾತ್ರ ಆತನನ್ನು ಕೊಲೆ ಮಾಡಲಾಗಿದೆ. ಅನೈತಿಕ ಸಂಬಂಧದ ವಿಚಾರವಾಗಿ ಇಬ್ಬರಿಗೂ ಹಲವು ಬಾರಿ ಜಗಳವಾಗಿದೆ. ಆದರೆ ಪತ್ನಿ ಮಾತ್ರ ತನ್ನ ಪ್ರಿಯಕರನ ಜೊತೆ ಸಂಬಂಧ ಮುಂದುವರೆಸಿದ್ದಳು ಎಂದು ಹೇಳಲಾಗಿದೆ. ಇದಕ್ಕೆ ಪತಿ ಲಿಂಗರಾಜ ಅಡ್ಡಿಯಾಗಿದ್ದು, ಈತನನ್ನು ಮುಗಿಸಲು ಪತ್ನಿ ಸಂಚು ರೂಪಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಘಟನೆ ಸಂಬಂಧ ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಹದಡಿ ಪೊಲೀಸ್ ಠಾಣೆಯ ಪಿಎಸ್ಐ ಸಂಜೀವ್ ಅವರು, ಲಿಂಗರಾಜ್ ಅವರು ಮನೆ ಸ್ವಚ್ಛಗೊಳಿಸುವ ವೇಳೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪತ್ನಿ ಹೇಳಿದ್ದಾರೆ. ಆದರೆ ಸಂಬಂಧಿಕರು ಮತ್ತು ಗ್ರಾಮಸ್ಥರು ಪತ್ನಿ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖೆ ಬಳಿಕ ಸತ್ಯಾಂಶಗಳು ಹೊರ ಬರಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Bengaluru lady murder.. ಕೈ ಕಾಲು ಕತ್ತರಿಸಿ ಒಂಟಿ ಮಹಿಳೆ ಬರ್ಬರ ಕೊಲೆ ಪ್ರಕರಣ: ಬನ್ನೇರುಘಟ್ಟ ಪೊಲೀಸರಿಂದ ಬಿಹಾರ ಮೂಲದ ಆರೋಪಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.