ದಾವಣಗೆರೆ: ನಗರದ ಸಿದ್ದಗಂಗಾ ಶಾಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆಗೆ ಬಹುಭಾಷಾ ನಟ ಸಾಯಿ ಕುಮಾರ್ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಟ ಸಾಯಿಕುಮಾರ್, ಪೊಲೀಸರು ಎಲ್ಲ ಮಾಡಬೇಕು ಎಂದು ಹೇಳುವ ಜನ ಮೊದಲು ಬದಲಾಗಬೇಕು. ಪೊಲೀಸ್ ಮತ್ತು ಜನರು ಸೇರಿದರೆ ಮಾತ್ರ ಎಲ್ಲವನ್ನು ಮಾಡಲು ಸಾಧ್ಯ. ಪೊಲೀಸ್ ಇರೋದ್ರಿಂದ ನಮ್ಮ ಕರ್ತವ್ಯವನ್ನು ಮರೆಯುತ್ತೇವೆ. ನಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ನಾನು ಐಎಎಸ್ -ಐಪಿಎಸ್ ಆಗಬೇಕು ಎಂದು ನನ್ನ ತಾಯಿ ಬಯಸಿದ್ದರು. ಆದರೆ ನಾನು ಸಿನಿಮಾದಲ್ಲಿ ಪೊಲೀಸ್ ಆಗಬೇಕಾಗಿ ಬಂತು ಎಂದು ಹೇಳಿದರು.
ಆಂಧ್ರಪ್ರದೇಶದ ಪೊಲೀಸ್ ಇಲಾಖೆ ನನ್ನನ್ನು ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿದ್ದಾರೆ. ಈ ಮೂಲಕ ನನ್ನ ಪೊಲೀಸ್ ಸಿನಿಮಾ ಡೈಲಾಗ್ ಬಳಸಿಕೊಂಡಿದ್ದಾರೆ. ನಾಲ್ಕನೇಯ ಸಿಂಹ ಎಂಬ ಆ್ಯಪ್ ಮೂಲಕ ಕ್ರೈಂ ಕಂಟ್ರೋಲ್ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.