ETV Bharat / state

62 ಪ್ರಕರಣ ಭೇದಿಸಿದ ಚನ್ನಗಿರಿ ಪೊಲೀಸರು; ವಾರಸುದಾರರಿಗೆ ₹84 ಲಕ್ಷ ಮೌಲ್ಯದ ವಸ್ತುಗಳು ಹಸ್ತಾಂತರ - Honnali Police

2022ರ ಜುಲೈನಿಂದ 2023ರ ಜೂನ್​ವರೆಗೆ ದಾಖಲಾಗಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 62 ಪ್ರಕರಣಗಳನ್ನು ದಾವಣಗೆರೆ ಚನ್ನಗಿರಿ ಪೊಲೀಸರು ಭೇದಿಸಿದ್ದಾರೆ.

Channagiri Police
ವಾರಸುದಾರರಿಗೆ ಹಣ ವಸ್ತುಗಳನ್ನು ವಾಪಾಸ್ಸು ಮಾಡುತ್ತಿರುವ ಚನ್ನಗಿರಿ ಪೊಲೀಸರು
author img

By

Published : Jul 27, 2023, 8:47 AM IST

ದಾವಣಗೆರೆ: ಜಿಲ್ಲೆಯ ಚನ್ನಗಿರಿ ಉಪ ವಿಭಾಗದ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 62 ಪ್ರಕರಣಗಳನ್ನು ಚನ್ನಗಿರಿ ಪೊಲೀಸರು ಬಗೆಹರಿಸಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ಒಟ್ಟು 84,47,353 ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗು ವಾಹನಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಚನ್ನಗಿರಿಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಗುರುವಾರ ಪ್ರಾಪರ್ಟಿ ರಿಟರ್ನ್ ಪರೇಡ್ ಹಮ್ಮಿಕೊಳ್ಳಲಾಗಿತ್ತು. ಪತ್ತೆಯಾದ ಪ್ರಕರಣಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ವಸ್ತುಗಳನ್ನು ಡಿವೈಎಸ್‌ಪಿ ಡಾ.ಸಂತೋಷ್ ವಾರಸುದಾರರಿಗೆ ಹಸ್ತಾಂತರಿಸಿದರು. ಪ್ರಾಪರ್ಟಿ ಪರೇಡ್‌ನಲ್ಲಿ ಒಟ್ಟು 62 ಪ್ರಕರಣಗಳ ಪೈಕಿ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ 53 ವಾಹನಗಳು, 47,59,000 ರೂಪಾಯಿ ಹಣ, 14,15,000 ರೂಪಾಯಿ ಮೌಲ್ಯದ 342 ಗ್ರಾಂ ಬಂಗಾರ ಹಾಗು ಬೆಳ್ಳಿಯ ಆಭರಣಗಳು ಸೇರಿದಂತೆ 30,000 ರೂಪಾಯಿ ಮೌಲ್ಯದ 3 ಮೊಬೈಲ್ ಸೇರಿ 22,43,353 ರೂಪಾಯಿ ಮೌಲ್ಯದ ಕೃಷಿ ಚಟುವಟಿಕೆಗೆ ಬಳಕೆ ಮಾಡುವ ಉಪಕರಣಗಳು, ಅಡಿಕೆ, ಬೋರ್‌ವೆಲ್ ವೈರ್, ಮೋಟರ್ ಮತ್ತು ಇತರೆ ವಸ್ತುಗಳು ಸೇರಿ ಒಟ್ಟು 84,47,353 ಮೌಲ್ಯದ ಕಳುವಾದ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಯಿತು. ಕಳ್ಳತನವಾಗಿದ್ದ ವಸ್ತುಗಳನ್ನು ಮರಳಿ ಪಡೆದ ಜನರು ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.

honnali police
ಅಕ್ರಮ ಶ್ರೀಗಂಧ ಮರದ ತುಂಡುಗಳ ಮಾರಾಟ ಪ್ರಕರಣ

ಗಂಧದ ತುಂಡು ಸಾಗಿಸುತ್ತಿದ್ದ ಆರೋಪಿಗಳ ಬಂಧನ: ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದವರನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ. ಸಾಸ್ಟೇಹಳ್ಳಿ ಗ್ರಾಮದಲ್ಲಿ ಗಸ್ತು ತಿರುಗುವ ವೇಳೆ ಮೂವರು ಗಂಧದ ತುಂಡುಗಳನ್ನು ಕಳ್ಳತನ ಮಾಡಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು ಕುಳಗಟ್ಟೆ ಕ್ರಾಸ್ ಬಳಿ 42,000 ರೂ ಮೌಲ್ಯದ 21 ಕೆಜಿ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಸೈಯದ್ ಅಲ್ಲಾಭಕ್ಷಿ (35) ಮಹಮದ್‌ ರಫೀಕ್ (30) ನೂರುಲ್ಲಾ (36) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

ಅಡಿಕೆ ಕಳ್ಳರ ಬಂಧನ : ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವಾಗಿದ್ದ ಅಡಿಕೆಸಮೇತ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 6.90 ಲಕ್ಷ ರೂಪಾಯಿ ಹಣ, ಬೊಲೆರೊ ವಾಹನ ವಶಕ್ಕೆ ಪಡೆಯಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ಕಾರ್ತಿಕ್ ಹೆಚ್.ಎಸ್. (28) ಜಾವೀದ್ ಅಲಿ (28) ಅಮೀರ್ ಜಾನ್ (24) ಸೇರಿ ಮೂವರನ್ನು ಬಂಧಿಸಿದ್ದಾರೆ. ಇವರಿಂದ 41 ಚೀಲ ಅಡಿಕೆ ಕಳ್ಳತನ ಮಾಡಿ, ಮಾರಾಟದ ಮೂಲಕ ಸಂಗ್ರಹಿಸಿದ್ದ ಒಟ್ಟು 6,90,000 ಲಕ್ಷ ರೂ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ಬೊಲೆರೊ ಪಿಕಪ್ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ನಕಲಿ ಗೃಹ ಲಕ್ಷ್ಮಿ ಯೋಜನೆ ಸರ್ಟಿಫಿಕೇಟ್ ನೀಡುತ್ತಿದ್ದ ಸೈಬರ್ ಸೆಂಟರ್ ಮಾಲೀಕನ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.