ದಾವಣಗೆರೆ: ವೈಯಕ್ತಿಕ ಕಾರಣದಿಂದ ಅಕ್ಕನನ್ನು ಕೊಲೆ ಮಾಡಿದ ಆರೋಪಿ ತಮ್ಮನಿಗೆ ದಾವಣಗೆರೆ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ಗಣೇಶ್ ನಾಯ್ಕ್ ಶಿಕ್ಷೆಗೊಳಗಾದ ವ್ಯಕ್ತಿ. ಮಾಯಕೊಂಡ ಹೋಬಳಿಯ ಬೊಮ್ಮೆನಹಳ್ಳಿಯಲ್ಲಿ ಈ ಘಟನೆ ನಡೆದಿತ್ತು.
ಘಟನೆ ಹಿನ್ನೆಲೆ:
ವೈಯಕ್ತಿಕ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಈತ ತನ್ನ ಅಕ್ಕ ಶಾಂತಿ ಬಾಯಿ ಅವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದ, ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ವಾದ ಆಲಿಸಿದ ನ್ಯಾಯಾಲಯ ಅಕ್ಕನನ್ನು ಕೊಂದಿದ್ದು ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.