ETV Bharat / state

ಜಗಳೂರು ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ಆರೋಪ: ತನಿಖೆಗೆ ಸರ್ಕಾರ ಆದೇಶ - ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಅಕ್ರಮ

ದಾವಣಗೆರೆ ಜಿಲ್ಲೆಯ ಜಗಳೂರು ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿದೆ ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆರೋಪಿಸಿದ್ದಾರೆ.

corruption-at-jagaluru-millet-buying-centre-dot-jagaluru-mla-b-devendrappa
ಜಗಳೂರು ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ : ಹಣಕ್ಕಾಗಿ ಕಾದು ಕುಳಿತ ರೈತರು
author img

By

Published : Jul 13, 2023, 7:57 AM IST

ಜಗಳೂರು ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ಆರೋಪ

ದಾವಣಗೆರೆ : ರಾಗಿ ಖರೀದಿ ಕೇಂದ್ರದಲ್ಲಿ ರೈತರು ಮಾತ್ರ ರಾಗಿ ಮಾರಾಟ ಮಾಡುವ ನಿಯಮವನ್ನು ಸರ್ಕಾರ ಮಾಡಿದೆ. ಆದರೆ ಕೆಲವರು ಮೈಸೂರಿನಿಂದ ರಾಗಿ ತಂದು ಜಗಳೂರು ರಾಗಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿ ಅಕ್ರಮ ಎಸಗುತ್ತಿದ್ದಾರೆ ಎಂದು ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಆರೋಪಿಸಿದ್ದಾರೆ. ಇನ್ನೊಂದೆಡೆ, ರೈತರ ಹೆಸರಿನಲ್ಲಿ ಅವ್ಯವಹಾರ ಎಸಗಿರುವವರ ವಿರುದ್ಧ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.

ಕಳೆದ ಐದು ತಿಂಗಳ ಹಿಂದೆ ಖರೀದಿ ಕೇಂದ್ರಕ್ಕೆ ರೈತರು ರಾಗಿ ಹಾಕಿದ್ದರು. ಪ್ರತಿ ರೈತರಿಂದ 20 ಕ್ವಿಂಟಲ್ ಖರೀದಿ ಮಾಡಲಾಗಿತ್ತು. ಒಂದು ಕ್ವಿಂಟಲ್‌ಗೆ 3,780 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಕೆಲವರು 1,500ರಿಂದ 2,000 ರೂಪಾಯಿಗೆ ಮೈಸೂರು ಭಾಗದಿಂದ ರಾಗಿ ಖರೀದಿಸಿ ತಂದು ಕೇಂದ್ರಕ್ಕೆ ಹಾಕಿ ವಂಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ತನಿಖೆ ನಡೆಸಲು ಆಹಾರ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಆದೇಶಿಸಿದ್ದಾರೆ.

ಖರೀದಿ ಕೇಂದ್ರದ ಡೇಟಾ ಎಂಟ್ರಿ ಆಪರೇಟರ್ ಗಿರೀಶ್ ಹಾಗು ನವೀನ್ ಇಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸರ್ಕಾರದ ಸೂಚನೆ ನೀಡಿದೆ. ಅಂದಿನ ಖರೀದಿ ಕೇಂದ್ರದ ವ್ಯವಸ್ಥಾಪಕರಾಗಿದ್ದ ಶಂಕರ್​ ಸಾವನ್ನಪ್ಪಿರುವುದರಿಂದ ಕುಟುಂಬಕ್ಕೆ ಸರ್ಕಾರದ ಸೌಲಭ್ಯ ತಡೆ ಹಿಡಿಯಲು ನಿರ್ದೇಶನ ನೀಡಲಾಗಿದೆ.

ಜಗಳೂರು ಶಾಸಕ ಬಿ. ದೇವೇಂದ್ರಪ್ಪ ಪ್ರತಿಕ್ರಿಯಿಸಿ, "ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿರುವುದು ಸತ್ಯ. ಇದಕ್ಕೆ ಕಾರಣಕರ್ತರು ಅಧಿಕಾರಿಗಳೋ ರೈತರೋ ಗೊತ್ತಿಲ್ಲ. ಆರೇಳು ತಿಂಗಳುಗಳಿಂದ ಸರ್ಕಾರ ಮತ್ತು ರೈತರ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಪಾಣಿಗಳನ್ನು ಪರಿಶೀಲನೆ ಮಾಡಿದಾಗ ಜಗಳೂರು ತಾಲೂಕಿನ ರೈತರು ಯಾರು, ಬೇರೆಯವರು ಯಾರು ಎಂಬುದು ತಿಳಿದುಬಂದಿದೆ."

ಇದರಲ್ಲಿ 1,100 ಜನ ರೈತರು ನಿಜವಾದ ರೈತರೆಂದು ಕಂಡುಬಂದಿದೆ. ಇವರಿಗೆ ರಾಗಿ ಹಣ ಸಂದಾಯ ಮಾಡಲು ಸರ್ಕಾರ ಮುಂದಾಗಿದೆ. ತನಿಖೆಯಲ್ಲಿ ನಕಲಿ ರೈತರು ಪತ್ತೆಯಾದರೆ ಅವರು ಪಡೆದಿರುವ ಹಣ ಮರುಪಾವತಿ ಮಾಡಿಸುವ ಕೆಲಸ ಮಾಡಲಾಗುವುದು. ಇನ್ನುಳಿದ 400 ಜನ ರೈತರಿಗೆ ಪರಿಶೀಲನೆ ನಡೆಸಿ ಹಣ ಸಂದಾಯ ಮಾಡುವ ಕೆಲಸ ಮಾಡುತ್ತೇವೆ. ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ" ಎಂದು ತಿಳಿಸಿದರು.

1,100 ಜನ ರೈತರಿಗೆ 7.80 ಕೋಟಿ ರೂಪಾಯಿ ಹಣ ನೀಡುವಂತೆ ಸರ್ಕಾರ ಆದೇಶ ಮಾಡಿದೆ. ಆದರೆ ರಾಗಿ ಕೇಂದ್ರದಲ್ಲಿ ಸುಮಾರು ಮೂರು ಸಾವಿರ ಜನ ರೈತರು ರಾಗಿ ನೀಡಿದ ಬಗ್ಗೆ ದಾಖಲೆಗಳಿವೆ. ಸದ್ಯ ಖರೀದಿ ಬಗ್ಗೆ ಗ್ರೀನ್ ವೋಚರ್ ಪಡೆದ ಇನ್ನೂ 400 ಜನಕ್ಕೆ ಇಷ್ಟರಲ್ಲಿಯೇ ಹಣ ಸಂದಾಯ ಆಗಲಿದೆ. ಮೂರು ಸಾವಿರ ರೈತರಲ್ಲಿ 1400 ರೈತರ ದಾಖಲೆಗಳು ಮಾತ್ರ ಸರಿ ಇವೆ. ಈ ಸಂಬಂಧ ಖರೀದಿ ಕೇಂದ್ರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎನ್ನಲಾಗಿದ್ದು, ತನಿಖೆ ಶುರುವಾಗಿದೆ.

ಆಹಾರ ಇಲಾಖೆಯ ಉಪ ನಿರ್ದೇಶಕ ರವಿಕುಮಾರ್ ಮಾತನಾಡಿ, "ಪ್ರಕರಣ ಸಂಬಂಧ ತನಿಖೆ ಮಾಡಲು ಸರ್ಕಾರ ಈಗಾಗಲೇ ಒಂದು ಸಮಿತಿ ಮಾಡಿದೆ. ಕೆಲವರು ರೈತರ ಹೆಸರನಲ್ಲಿ ಓಚರ್‌ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ನಮ್ಮ ಕಡೆಯಿಂದ ವರದಿ ಸಲ್ಲಿಸಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ : GST on Chit Fund.. ಜಿಎಸ್​ಟಿ ಹೆಚ್ಚಳ ವಿರೋಧಿಸಿ ಬೆಂಗಳೂರಲ್ಲಿ ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.