ದಾವಣಗೆರೆ: ದೇಶದಲ್ಲಿ ಕೊರೊನಾ ಎರಡನೇ ಅಲೇ ಎದ್ದಿರುವ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳ ಪ್ರದೇಶಗಳಲ್ಲಿ ರಾತ್ರಿ ವೇಳೆ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ದಾವಣಗೆರೆಯಲ್ಲೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗೂ ಎಸ್ಪಿ ಹನುಮಂತರಾಯ ಸೇರಿದಂತೆ ಜಿಪಂ ಸಿಇಒ ಡಾ.ವಿಜಯ್ ಮಾಲ್ತೇಶ್ ದಾನಮ್ಮನವರ್ ಜನರಲ್ಲಿ ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಿದರು.
ದಾವಣಗೆರೆ ನಗರದ ರಾಮ್ ಆ್ಯಂಡ್ ಕೋ ವೃತ್ತದಿಂದ ಮಾಸ್ಕ್ ಜಾಗೃತಿ ಆರಂಭಿಸಿರುವ ಮಾಡಿದ ಅವರು, ಪ್ರತಿ ಅಂಗಡಿ, ಹೋಟೆಲ್, ಜ್ಯೂಸ್ ಸೆಂಟರ್, ಮಾರುಕಟ್ಟೆ, ಮಾರ್ಟ್ ಸೇರಿದ್ದಂತೆ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಜನರಲ್ಲಿ ಮಾಸ್ಕ್ ಧರಿಸಿರುವಂತೆ ಅರಿವು ಮೂಡಿಸಿದರು.
ಈ ವೇಳೆ ಮಾಸ್ಕ್ ಧರಿಸದೆ ಇರುವವರಿಗೆ ಮಾಸ್ಕ್ ಧರಿಸುವಂತೆ ತರಾಟೆಗೆ ತೆಗೆದುಕೊಂಡರು. ಜ್ಯೂಸ್ ಸೆಂಟರ್ಗೆ ನುಗ್ಗಿದ ಡಿಸಿ ಮಾಹಂತೇಶ್ ಬೀಳಗಿ, ಮಾಸ್ಕ್ ಹಾಕದೆ ಆಗಮಿಸಿದ್ದ ಗ್ರಾಹಕರಿಗೆ 'ಕೊರೊನಾ ಎರಡನೇ ಅಲೆ ಬರ್ತಿದೆ, ಕಳೆದ ವರ್ಷ ಮಾರ್ಚ್ನಲ್ಲೇ ನಾವು ನಲುಗಿ ಹೋಗಿದ್ವಿ. ಮತ್ತೆ ಆ ಪರಿಸ್ಥಿತಿ ಬರಕೂಡದು ಅಂದ್ರೆ ಮಾಸ್ಕ್ ಧರಿಸಿ ಎಂದರು.
ಇದನ್ನೂ ಓದಿ: ಕಾಯಿಲೆಯಿಂದ ಹೈರಾಣಾದ ಮಹಿಳೆ: ತನ್ನ 11 ತಿಂಗಳ ಮಗಳಿನೊಂದಿಗೆ ನೇಣಿಗೆ ಶರಣು
ಖಾಸಗಿ ಹಾಗೂ ಸರ್ಕಾರಿ ಬಸ್ಗಳಿಗೆ ನುಗ್ಗಿದ ಎಸ್ಪಿ, ಡಿಸಿ ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ ಪ್ರಯಾಣಿಕರಿಗೆ ಮಾಸ್ಕ್ ಧರಿಸುವಂತೆ ಕೈ ಮುಗಿದು ಒತ್ತಾಯಿಸಿದರು. ಬಳಿಕ ಮಾಸ್ಕ್ ಧರಿಸದ ಪ್ರಯಾಣಿಕರನ್ನು ಬಸ್ನಲ್ಲಿ ಕೂರಿಸಿದ್ರೆ ಡ್ರೈವರ್ ಹಾಗೂ ನಿರ್ವಾಹಕನಿಂದ ಎಲ್ಲಾ ಪ್ರಯಾಣಿಕರ ದಂಡ ವಸೂಲಿ ಮಾಡ್ತೀನಿ ಎಂದು ಎಚ್ಚರಿಕೆ ನೀಡಿದರು.