ದಾವಣಗೆರೆ: ಜಿಲ್ಲೆಯಲ್ಲಿಂದು ಬರೋಬ್ಬರಿ 239 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆರು ಮಂದಿ ಬಲಿಯಾಗಿದ್ದಾರೆ.
ಇಂದು 170 ಮಂದಿ ಸಂಪೂರ್ಣ ಗುಣಮುಖರಾಗಿ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 2,648 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ದಾವಣಗೆರೆಯಲ್ಲಿ 163, ಹರಿಹರ 39, ಜಗಳೂರು 07, ಚನ್ನಗಿರಿ19, ಹೊನ್ನಾಳಿ 08 ಹಾಗೂ ಅಂತರ್ ಜಿಲ್ಲೆಯಿಂದ ಬಂದ ಮೂವರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಕೊರೊನಾಗೆ 111 ಮಂದಿ ಬಲಿಯಾಗಿದ್ದು, ಪ್ರಸ್ತುತ 1,310 ಸಕ್ರಿಯ ಪ್ರಕರಣಗಳಿವೆ.
ತಾಲೂಕುವಾರು ಬಿಡುಗಡೆಯಾದವರು: ದಾವಣಗೆರೆ 104, ಹರಿಹರ 19, ಜಗಳೂರು 06, ಚನ್ನಗಿರಿ 23, ಹೊನ್ನಾಳಿ 10 ಮತ್ತು ಅಂತರ್ ಜಿಲ್ಲೆಯಿಂದ ಬಂದಿದ್ದ 8 ಮಂದಿ ಜಿಲ್ಲಾ ನಿಗದಿತ ಕೋವಿಡ್ ಆಸ್ವತ್ರೆಯಿಂದ ಬಿಡುಗಡೆಯಾಗಿದ್ದಾರೆ.