ETV Bharat / state

ಬೆಡ್​ಗಾಗಿ ಆ್ಯಂಬುಲೆನ್ಸ್​ನಲ್ಲೇ ಕಾದು ಕಾದು ಸುಸ್ತಾದ ಸೋಂಕಿತೆ..! - ದಾವಣಗೆರೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ

ಆಸ್ಪತ್ರೆಯಲ್ಲಿ ಬೆಡ್​ ಸಿಗದೇ ಕೊರೊನಾ ಸೋಂಕಿತರೊಬ್ಬರು ಆ್ಯಂಬುಲೆನ್ಸ್​ನಲ್ಲಿ ಗಂಟೆಗಟ್ಟಲೇ ಕಾದು ಸುಸ್ತಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ambulane
ambulane
author img

By

Published : May 4, 2021, 3:44 PM IST

Updated : May 4, 2021, 4:29 PM IST

ದಾವಣಗೆರೆ: ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೋಂಕಿತೆ ಬೆಡ್​​ಗಾಗಿ ಆ್ಯಂಬುಲೆನ್ಸ್​​​ನಲ್ಲೇ ಕಾದು ಕಾದು ಸುಸ್ತಾಗಿರುವ ಘಟನೆ ನಡೆಯಿತು.

ಜಿಲ್ಲೆಯ ಹರಿಹರದಿಂದ ಆ್ಯಂಬುಲೆನ್ಸ್ ಮೂಲಕ ದಾವಣಗೆರೆ ಜಿಲ್ಲಾಸ್ಪತ್ರೆಗೆ ಆಗಮಿಸಿ ಎರಡು ಗಂಟೆ ಕಳೆದರೂ ಸೋಂಕಿತೆಗೆ ಬೆಡ್ ಮಾತ್ರ ದೊರೆತಿಲ್ಲ. ಇದರಿಂದ ರೋಗಿಯ ಮಗ ಹಾಗೂ ಮಗಳು ಹೈರಾಣಾಗಿದ್ದರು. ಮೊದಲ ಬಾರಿಗೆ ಕೊರೊನಾ ವಾರ್ಡ್​​​​ನ ತನಕ ತೆರಳಿ ಬೆಡ್ ಇಲ್ಲದೇ ವ್ಹೀಲ್​ ಚೇರ್ ಸಹಾಯದಿಂದ ಮತ್ತೆ ಆ್ಯಂಬುಲೆನ್ಸ್ ನತ್ತ ಮರಳಿದ್ರು. ಇದಾದ ಬಳಿಕ ಸೋಂಕಿತೆ ಆ್ಯಂಬುಲೆನ್ಸ್​ನಲ್ಲೇ ಕಾಲ ಕಳೆಯುವಂತೆ ಆಯಿತು.

ಬೆಡ್​ಗಾಗಿ ಆ್ಯಂಬುಲೆನ್ಸ್​ನಲ್ಲೇ ಕಾದು ಕಾದು ಸುಸ್ತಾದ ಸೋಂಕಿತೆ

ನಂತರ ಸೋಂಕಿತೆ ಸಂಬಂಧಿಯೊಬ್ಬರು ಆಗಮಿಸಿ ಜಿಲ್ಲಾ ಸರ್ಜನ್ ಜಯಪ್ರಕಾಶ್ ಅವರ ಬಳಿ ಮಾತನಾಡಿ, ಕೊನೆಗೂ ಹರಸಾಹಸ ಪಡುವ ಮೂಲಕ ಬೆಡ್ ದೊರೆಯಿತು. ಇನ್ನು ನಮ್ಮಲ್ಲಿ ಎಲ್ಲ ಸೌಲಭ್ಯ ಇದೆ ಎಂದು ಹೇಳಿಕೊಳ್ಳುವ ಜಿಲ್ಲಾಡಳಿತ, ಎಲ್ಲೋ ಸುಳ್ಳು ಹೇಳುತ್ತಿದೆಯೇನೋ ಎಂಬ ಅನುಮಾನ ಕಾಡತೊಡಗಿದೆ‌‌. ಕಳೆದ ದಿನ ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಸಂಸದ ಜಿಎಂ ಸಿದ್ದೇಶ್ವರ್ ಸುದ್ದಿಗೋಷ್ಠಿ ಮಾಡಿ ಹೇಳಿದ್ರು.

Last Updated : May 4, 2021, 4:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.