ದಾವಣಗೆರೆ: ಜಿಲ್ಲೆಯಲ್ಲಿ ಇಂದು 405 ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದುವರೆಗೆ ಸೋಂಕಿತರ ಸಂಖ್ಯೆ 13,627ಕ್ಕೇರಿದೆ. ಸೋಂಕಿಗೆ ಇಂದು ಒಬ್ಬರು ಬಲಿಯಾಗಿದ್ದು, ಈವರೆಗೆ ಒಟ್ಟು 227 ಜನರು ಸಾವಿಗೀಡಾಗಿದ್ದಾರೆ.
ಹಾವೇರಿ ಜಿಲ್ಲೆಯ ಕದರಮಂಡಲಗಿಯ 58 ವರ್ಷದ ಪುರುಷ ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಇನ್ನು ಜಿಲ್ಲೆಯಲ್ಲಿ 2752 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.
ದಾವಣಗೆರೆಯಲ್ಲಿ 183, ಹರಿಹರ 72, ಜಗಳೂರು 77, ಚನ್ನಗಿರಿ 24, ಹೊನ್ನಾಳಿ 45 ಹಾಗೂ ಹೊರ ಜಿಲ್ಲೆಯಿಂದ ನಾಲ್ವರಲ್ಲಿ ಸೋಂಕು ಇರುವುದು ಖಚಿತವಾಗಿದೆ. 226 ಮಂದಿ ವೈರಾಣುವಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 10,648 ಜನರು ಬಿಡುಗಡೆ ಹೊಂದಿದ್ದಾರೆ.
ದಾವಣಗೆರೆಯಲ್ಲಿ 405 ಕೊರೊನಾ ಪಾಸಿಟಿವ್: ಓರ್ವ ಬಲಿ - ದಾವಣಗೆರೆ ಲೇಟೆಸ್ಟ್ ಕೊರೊನಾ ರಿಪೋರ್ಟ್
ದಾವಣಗೆರೆ ಜಿಲ್ಲೆಯಲ್ಲಿ ಹೊಸದಾಗಿ ಇಂದು 405 ಸೋಂಕಿತ ಪ್ರಕರಣಗಳು ದಾಖಲಾಗಿವೆ. ಹಾಗೂ ಒಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.