ETV Bharat / state

ಎಣ್ಣೆಗಾಗಿ ದಾವಣಗೆರೆಯಿಂದ ಹರಿಹರಕ್ಕೆ ಬರುತ್ತಿರುವ ಜನ... ಕೊರೊನಾ ಹರಡುವ ಭೀತಿಯಲ್ಲಿ ಸ್ಥಳೀಯರು - ಕೊರೊನಾ ಹರಡುವ ಭೀತಿಯಲ್ಲಿ ಹರಿಹರ ಜನತೆ

ಹರಿಹರಕ್ಕೆ ದಾವಣಗೆರೆಯಿಂದ ಬಂದು ಮದ್ಯ ಖರೀದಿಸುತ್ತಿರುವವರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆ ತಾಲೂಕಿನ ಜನರಲ್ಲಿ ಕೊರೊನಾ ಹರಡುವ ಆತಂಕ ಹೆಚ್ಚಾಗಿದೆ.

ಕೊರೊನಾ ಹರಡುವ ಭೀತಿಯಲ್ಲಿ ಹರಿಹರ ಜನತೆ
ಕೊರೊನಾ ಹರಡುವ ಭೀತಿಯಲ್ಲಿ ಹರಿಹರ ಜನತೆ
author img

By

Published : May 9, 2020, 6:37 PM IST

ಹರಿಹರ: ದಾವಣಗೆರೆಯ ಮದ್ಯ ವ್ಯಸನಿಗಳಿಂದ ಹರಿಹರ ನಗರದ ಜನತೆಗೆ ಕೊರೊನಾ ವೈರಸ್ ಹರಡಲಿದೆಯೇ ಎಂಬ ಆತಂಕ ಕಾಡುತ್ತಿದೆ.

ನಗರದಲ್ಲಿ ಎಂಎಸ್​​ಐಎಲ್​​ ಮತ್ತು ಬಾರ್​ಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದು, ಇಲ್ಲಿ ಹರಿಹರದ ಜನರಿಗಿಂತ ದಾವಣಗೆರೆಯ ಜನರೇ ಹೆಚ್ಚು ಖರೀದಿಸಲು ಮುಗಿಬಿದ್ದಿದ್ದಾರೆ. ಈಗಾಗಲೇ ಜಿಲ್ಲಾ ಕೇಂದ್ರದಲ್ಲಿ ದಿನದಿಂದ‌ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತಲೇ ಇರುವ ಕಾರಣ ಅಲ್ಲಿ ಜಿಲ್ಲಾಧಿಕಾರಿಗಳು ಎಣ್ಣೆ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟಿಲ್ಲ. ಆದರೆ ಜಿಲ್ಲೆಯ ಜನರು ಹರಿಹರ‌ಕ್ಕೆ ಬಂದು ಎಣ್ಣೆ ಖರೀದಿಸುತ್ತಿದ್ದು, ಇವರಿಂದ ಮುಂದಿನ ದಿನಗಳಲ್ಲಿ ಹರಿಹರದಲ್ಲೂ ಕೋವಿಡ್​ ಹರಡಲಿದೆ ಎಂದು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

ಕೊರೊನಾ ಹರಡುವ ಭೀತಿಯಲ್ಲಿ ಹರಿಹರ ಜನತೆ

ಕಳೆದ ಒಂದೂವರೆ ತಿಂಗಳು ತಾಲೂಕಿನಲ್ಲಿ ತಹಶೀಲ್ದಾರ್, ಪೊಲೀಸರು, ನಗರಸಭೆ ಪೌರಾಯುಕ್ತರು, ವೈದ್ಯರು ಹಾಗೂ ಪೌರಕಾರ್ಮಿಕರು ತಾಲೂಕಿನಲ್ಲಿ ಕೊರೊನಾ ಹರಡದಂತೆ ಎಚ್ಚರ ವಹಿಸಿದ್ದಾರೆ.

ಜಿಲ್ಲಾ ಕೇಂದ್ರದಿಂದ ಹರಿಹರ ತಾಲೂಕನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ತಾಲೂಕುಗಳು 40 ಕಿ.ಮೀ. ದೂರದಲ್ಲಿವೆ. ಆದರೆ ಹರಿಹರ ನಗರವು ಕೇವಲ 15 ಕಿ.ಮೀ. ದೂರದಲ್ಲಿರುವುದರಿಂದ ಜಿಲ್ಲಾ ಕೇಂದ್ರದ ಪಾನಪ್ರಿಯರು ಹರಿಹರಕ್ಕೆ ಸುಲಭವಾಗಿ ಬರುತ್ತಿದ್ದಾರೆ. ಮದ್ಯ ಖರೀದಿಸಲು ಜಿಲ್ಲಾ ಕೇಂದ್ರದಿಂದ ಪೊಲೀಸರು ನಿರ್ಮಿಸಿರುವ ಚೆಕ್ ಪೋಸ್ಟ್​​ಗಳನ್ನು ತಪ್ಪಿಸಿಕೊಂಡು ಹರಿಹರ, ಹನಗವಾಡಿ ಬೈಪಾಸ್, ಬನ್ನಿಕೋಡು, ದೇವರಬೆಳಕೆರೆಯಲ್ಲಿರುವ ಬಾರ್​ಗಳಲ್ಲಿ ಎಣ್ಣೆ ಖರೀದಿಸುತ್ತಿದ್ದಾರೆ.

ಇನ್ನು ಮದ್ಯ ಮಾರಾಟಗಾರರು ವ್ಯಾಪಾರ ಮಾಡುವ ವೇಳೆ ಯಾವುದೇ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ತಾಲೂಕಿನ ಜನರಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.