ದಾವಣಗೆರೆ: ಎರಡನೇ ಅಲೆ ಕೋವಿಡ್, ಲಾಕ್ಡೌನ್ನಿಂದ ಜನ ಸಾಮಾನ್ಯರು ದುಡಿಮೆಯಿಲ್ಲದೇ ಹೈರಾಣಾಗಿದ್ದಾರೆ. ಅಗತ್ಯ ವಸ್ತುಗಳನ್ನು ಸಹ ಕೊಳ್ಳಲಾಗದ ಪರಿಸ್ಥಿತಿಯಲ್ಲಿ ಹಲವರಿದ್ದಾರೆ. ಇದರ ಮಧ್ಯೆ ಅಡುಗೆಗೆ ಅತ್ಯವಶ್ಯಕವಾಗಿರುವ ಅಡುಗೆ ಎಣ್ಣೆಯ ದರವೂ ಗಗನಕ್ಕೇರಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ಎಣ್ಣೆ ಮಾರಾಟವಾಗದೇ, ಅಡಿಗೆ ಎಣ್ಣೆ ಮರ್ಚೆಂಟ್ಸ್ ಕೂಡ ಆತಂಕದಲ್ಲಿದ್ದಾರೆ.
ಲಾಕ್ಡೌನ್ ಜಾರಿಯಲ್ಲಿದ್ದು, ಪ್ರತಿಯೊಂದು ದಿನ ಬಳಕೆಯ ವಸ್ತುಗಳ ದರ ಹೆಚ್ಚಾಗಿದೆ. ದುಡಿಮೆ ಇಲ್ಲದೆ ಜನಸಾಮಾನ್ಯರು ಹೈರಾಣಾಗಿರುವ ವೇಳೆಯಲ್ಲಿ ಅಡುಗೆಗೆ ಅತ್ಯವಶ್ಯಕವಾಗಿರುವ ಅಡುಗೆ ಎಣ್ಣೆಯ ದರ ಗಗನಕ್ಕೇರಿರುವುದರಿಂದ ಆಯಿಲ್ ಡಿಲರ್ಸ್ ಕೂಡ ಆತಂಕದಲ್ಲಿದ್ದಾರೆ. ಈಗಾಗಲೇ ಪ್ರತಿಯೊಂದು ಅಡುಗೆ ಎಣ್ಣೆಯ ದರ ಹೆಚ್ಚಾಗಿದ್ದರಿಂದ ಎಣ್ಣೆ ಕೂಡ ಮಾರುಕಟ್ಟೆಯಲ್ಲಿ ಕಡಿಮೆ ಮಟ್ಟದಲ್ಲಿ ಮಾರಾಟ ಆಗುತ್ತಿದೆ.
ಇದರಿಂದ ಕಿರಾಣಿ ಅಂಗಡಿಗಳ ಮಾಲೀಕರು ಅಡುಗೆ ಎಣ್ಣೆ ಮಾರಾಟ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಲೇ ಕಡಿಮೆ ಮಟ್ಟದಲ್ಲಿ ಖರೀದಿ ಮಾಡುತ್ತಿದ್ದಾರಂತೆ. ಹಾಗಾಗಿ ಸರ್ಕಾರ ತಕ್ಷಣ ದರವನ್ನು ಕಡಿಮೆ ಮಾಡಬೇಕೆಂಬುದು ಅಡುಗೆ ಎಣ್ಣೆ ಮರ್ಚೆಂಟ್ಸ್ ಒತ್ತಾಯವಾಗಿದೆ.
ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ಹೇಗಿದೆ ಗೊತ್ತಾ?
ಅಡುಗೆ ಎಣ್ಣೆ ದರ ದುಪ್ಪಟ್ಟಾಗಿರುವುದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಾಮ್ ಆಯಿಲ್ ಹಾಗೂ ರುಚಿ ಗೋಲ್ಡ್ ಒಂದು ಕೆಜಿ ಎಣ್ಣೆಗೆ ಕಳೆದ ವರ್ಷ 70 ರೂಪಾಯಿ ಇದ್ದು, ಈ ವರ್ಷ 140 ರೂಪಾಯಿಗೆ ಏರಿದೆ. ಗೋಲ್ಡ್ ವಿನ್ನರ್- 200 ರೂ., ಸನ್ ಫ್ಲವರ್- 170 ರೂ., ಹದಿನೈದು ಕೆಜಿ ಟಿನ್ ಸನ್ ಫ್ಲವರ್ ಎಣ್ಣೆಗೆ 2,550 ರೂಪಾಯಿ ಆಗಿದ್ದು, ಪಾಮ್ ಆಯಿಲ್ ಹದಿನೈದು ಕೆಜಿಯ ಟಿನ್ ಎಣ್ಣೆಗೆ 2,100 ರೂಪಾಯಿ ಆಗಿದೆ. ಇದ್ರಿಂದ ಮಧ್ಯಮ ವರ್ಗದ ಜನ, ಬಡವರು ಹಾಗೂ ಕಿರಾಣಿ ಅಂಗಡಿ ಮಾಲೀಕರು ಹೈರಾಣಾಗಿದ್ದಾರೆ.
ಒಟ್ಟಾರೆ ಅಡುಗೆಗೆ ಬೇಕಾಗಿರುವ ಅಡುಗೆ ಎಣ್ಣೆಯನ್ನು ಹೋಲ್ ಸೇಲ್ನಲ್ಲಿ 140 ಹಾಗೂ 170ಕ್ಕೆ ಖರೀದಿ ಮಾಡುವ ಕಿರಾಣಿ ಅಂಗಡಿ ಮಾಲೀಕರು ತಮ್ಮ ಅಂಗಡಿಗಳಲ್ಲಿ 10 ಇಲ್ಲವೇ 20 ರೂಪಾಯಿ ಲಾಭಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಅಡುಗೆ ಎಣ್ಣೆ ಅಗತ್ಯವಿರುವುದರಿಂದ ಜನರು ಮೊದಲಿನಷ್ಟಲ್ಲದಿದ್ದರೂ, ಅಗತ್ಯಕ್ಕೆ ತಕ್ಕಷ್ಟು ಖರೀದಿ ಮಾಡುತ್ತಿದ್ದಾರೆ.