ETV Bharat / state

ಸಿದ್ದರಾಮಯ್ಯ-ಡಿಕೆಶಿ ನಾಯಕತ್ವದಲ್ಲಿ 'ಭಾಗ್ಯ' ಯೋಜನೆಗಳನ್ನು ಕೊಡುತ್ತೇವೆ: ರಾಹುಲ್​ ಗಾಂಧಿ ಭರವಸೆ

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯನವರ 'ಅಮೃತ ಮಹೋತ್ಸವ' ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ವರಿಷ್ಠ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡು ಮಾತನಾಡಿದರು.

Congress leader Rahul Gandhi Attend Siddaramaiahs amrut mahostava in Davanagere
ಸಿದ್ದರಾಮಯ್ಯ-ಶಿವಕುಮಾರ ನಾಯಕತ್ವದಲ್ಲಿ 'ಭಾಗ್ಯ' ಯೋಜನೆಗಳನ್ನು ಕೊಡುತ್ತೇವೆ: ರಾಹುಲ್​ ಗಾಂಧಿ
author img

By

Published : Aug 3, 2022, 3:54 PM IST

Updated : Aug 3, 2022, 4:30 PM IST

ದಾವಣಗೆರೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರ ನೀಡಿದ ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ರಾಜ್ಯದ ಜನತೆ ಇಂದಿಗೂ ಸ್ಮರಿಸುತ್ತಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಾಯಕತ್ವದಲ್ಲಿ ಮುಂದೆಯೂ ಕೂಡ ರಾಜ್ಯದ ಜನತೆಗೆ ಉತ್ತಮ ಯೋಜನೆಗಳನ್ನು ಕೊಡುತ್ತೇವೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಭರವಸೆ ಕೊಟ್ಟರು.

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು​, ಪ್ರಪಂಚದ ಭೂಪಟದಲ್ಲಿ ಕರ್ನಾಟಕವನ್ನು ಕಾಣಿಸುವಂತೆ ಮಾಡಿದ್ದು ಕಾಂಗ್ರೆಸ್​. ಕಾಂಗ್ರೆಸ್​ ಸರ್ಕಾರದ ಆಡಳಿತದಲ್ಲಿ ಜನರು ಯಾವುದೇ ಭಯವಿಲ್ಲದೆ ಬದುಕುತ್ತಿದ್ದರು. ಯಾವುದೇ ಉದ್ಯಮ, ವ್ಯಾಪಾರ ವೃದ್ಧಿಗೆ ಶಾಂತಿ ಹಾಗೂ ಸಾಮರಸ್ಯ ಮುಖ್ಯ ಎಂದರು.

ಸಿದ್ದರಾಮಯ್ಯ-ಡಿಕೆಶಿ ನಾಯಕತ್ವದಲ್ಲಿ 'ಭಾಗ್ಯ' ಯೋಜನೆಗಳನ್ನು ಕೊಡುತ್ತೇವೆ: ರಾಹುಲ್​ ಗಾಂಧಿ ಭರವಸೆ

ನೋಟು ರದ್ಧತಿಯಿಂದಾಗಿ ಜನತೆ ಸಂಕಷ್ಟಕ್ಕೆ ಸಿಲುಕಿದರು. ಈ ಕ್ರಮದ ಹಿಂದಿನ ಉದ್ದೇಶ ಕೆಲವೇ ಕೆಲ ಉದ್ಯಮಿಗಳಿಗೆ ಹಣ ವರ್ಗಾವಣೆ ಮಾಡುವುದೇ ಆಗಿತ್ತು. ಕಾರ್ಮಿಕರು, ರೈತರನ್ನು ನಾಶ ಮಾಡಲೆಂದೇ ಜಿಎಸ್​ಟಿ ಜಾರಿ ಮಾಡಿದರು ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

"ಸಿದ್ದರಾಮಯ್ಯರೊಂದಿಗೆೆ ವಿಶೇಷ ಬಾಂಧವ್ಯವಿದೆ": ನಾನು ಹುಟ್ಟುಹಬ್ಬ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಭಾಗವಹಿಸಲ್ಲ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯನವರೊಂದಿಗಿನ ವಿಶೇಷ ಬಾಂಧವ್ಯ ಕಾರಣ. ನಾನು ಅವರನ್ನು ಒಬ್ಬ ವ್ಯಕ್ತಿಯಾಗಿ ಅಷ್ಟೇ ಅಲ್ಲದೇ ವಿಚಾರದಲ್ಲೂ ಇಷ್ಟ ಪಡುತ್ತೇನೆ. ಬಡವರು ಮತ್ತು ದುರ್ಬಲರ ಬಗ್ಗೆ ಸಿದ್ದರಾಮಯ್ಯನವರಿಗಿರುವ ಸಹಾನುಭೂತಿ ಮೆಚ್ಚುವಂಥದ್ದು ಎಂದು ರಾಹುಲ್​ ಗಾಂಧಿ ಗುಣಗಾನ ಮಾಡಿದರು.

Last Updated : Aug 3, 2022, 4:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.