ETV Bharat / state

ಸುಳ್ಳು ಕೇಸ್​​ನಲ್ಲಿ ಹೇಳಿಕೆ ಕೊಡುವ ಪರಿಸ್ಥಿತಿ ಬಂತಲ್ಲ ಅಂತ ಬೇಸರವಾಗುತ್ತೆ: ಸಿಎಂ ಸಿದ್ದರಾಮಯ್ಯ

ಶಿಗ್ಗಾಂವ್ ಉಪಚುನಾವಣೆ ಪ್ರಚಾರದ ವೇಳೆ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಮುಡಾ ಪ್ರಕರಣ ಸಂಬಂಧ ನಾಳೆ ಲೋಕಾಯುಕ್ತ ಕಚೇರಿಗೆ ಹೇಳಿಕೆ ಕೊಡಲು ಹೋಗುತ್ತಿದ್ದೇನೆ ಎಂದು ತಿಳಿಸಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Nov 5, 2024, 9:00 PM IST

ಹಾವೇರಿ: ನಾಳೆ ನಾನು ಲೋಕಾಯುಕ್ತಕ್ಕೆ ಹೇಳಿಕೆ ಕೊಡಲು ಹೋಗುತ್ತಿದ್ದೇನೆ. ಸುಳ್ಳು ಕೇಸ್​​ನಲ್ಲಿ ಹೇಳಿಕೆ ಕೊಡುವ ಪರಿಸ್ಥಿತಿ ಬಂತಲ್ಲ ಅಂತ ಬೇಸರವಾಗುತ್ತದೆ. ರಾಜ್ಯಪಾಲರ ಮೇಲೆ ಒತ್ತಡ ತಂದು ನಮ್ಮ ಕುಟುಂಬಕ್ಕೆ ಕಿರುಕುಳ ಕೊಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಹಿರೇ ಬೆಂಡಿಗೇರಿಯಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು. ನಮ್ಮ ರಾಜ್ಯ ದಿವಾಳಿ ಆಗಿಲ್ಲ, ಜೆಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ನಂಬರ್ 1 ಇದೆ. ಗ್ಯಾರಂಟಿ ಜಾರಿಗೆ ತಂದ್ರೆ ರಾಜ್ಯ ದಿವಾಳಿ ಆಗುತ್ತೆ ಅಂತ ಮೋದಿ ಹೇಳಿದರು. ನಾವು ಯಾರ ಸಂಬಳ ನಿಲ್ಲಿಸಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯ ನಿಲ್ಲಿಸಿಲ್ಲ‌, ಜೆಡಿಪಿ ಬೆಳವಣಿಗೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮೋದಿಗೆ ಇವೆಲ್ಲವೂ ಗೊತ್ತಿದೆ ಆದರೂ ಅವರು ಸುಳ್ಳು ಹೇಳ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಸಿಎಂ ಸಿದ್ದರಾಮಯ್ಯ (ETV Bharat)

ಬಿಜೆಪಿಯವರು ನಾಟಕ ಆಡುತ್ತಿದ್ದಾರೆ- ಸಿಎಂ; ವಕ್ಫ್ ನೋಟಿಸ್ ಕೊಟ್ಟವರು ಬಿಜೆಪಿಯವರು. ಉಪಚುನಾವಣೆ ಬಂದಿದೆ ಅಂತ ಬಿಜೆಪಿಯವರು ನಾಟಕ ಆಡುತ್ತಿದ್ದಾರೆ. ಮೂರು ಕ್ಷೇತ್ರಗಳಲ್ಲಿ ನಮ್ಮ ಗೆಲುವು ಖಚಿತ . ಈ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ಸೋಲು ನಿಶ್ಚಿತ. ಪೂರ್ವದಲ್ಲಿ ಸೂರ್ಯ ಉದಯಿಸುವದು ಎಷ್ಟು ಸತ್ಯವೋ ಪಠಾಣ್ ಗೆಲ್ಲುವುದು ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಯಾರು ಯಾರನ್ನೂ ರಾಜಕೀಯವಾಗಿ ಮುಗಿಸಲು ಆಗಲ್ಲ: ಇದಕ್ಕೂ ಮುನ್ನ ಚಂದಾಪುರ ಗ್ರಾಮದಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರು ನನ್ನನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದರು. ಆದರೆ, ಯಾರು ಯಾರನ್ನೂ ರಾಜಕೀಯವಾಗಿ ಮುಗಿಸಲು ಆಗಲ್ಲ. ಕ್ಷೇತ್ರದ ಜನರ ಕೈಯಲ್ಲಿ ಅದೆಲ್ಲಾ ಇದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಬಸವರಾಜ ಬೊಮ್ಮಾಯಿ ಮಗ ಬಿಟ್ ಕಾಯಿನ್ ಕೇಸ್​ನಲ್ಲಿ ಸಿಕ್ಕಾಕಿಕೊಂಡಿದ್ದರು ಎಂದು ಆರೋಪಿಸಿದ ಸಿದ್ದರಾಮಯ್ಯ, ಇಂಥವರಿಗೆ ಮತ ಹಾಕ್ತಿರಾ ಮತದಾರರನ್ನು ಪ್ರಶ್ನಿಸಿದರು. ಬಿಜೆಪಿ ಅಭ್ಯರ್ಥಿ ಭರತ್ ಸಾಮಾನ್ಯ ಕುಟುಂಬದಿಂದ ಬಂದವರಲ್ಲ. ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಸಾಮಾನ್ಯ ಕುಟುಂಬದಿಂದ ಬಂದವರು. ಭರತ್ ಬೊಮ್ಮಾಯಿಗೆ ಹಳ್ಳಿ ಜೀವನ ರೈತರ ಕೆಲಸ ಗೊತ್ತಿಲ್ಲ. ಪಠಾಣ್ ಹಳ್ಳಿಲಿ ಬೆಳೆದವರು. ಬಸವರಾಜ ಬೊಮ್ಮಾಯಿ ಈಗ ಎಂಪಿ. ಬೇರೆಯವರಿಗೆ ಟಿಕೆಟ್ ಕೊಡ್ತೀವಿ ಅಂತ ಹೇಳಿ ಅವರ ಮಗನನ್ನೇ ಅಭ್ಯರ್ಥಿ ಮಾಡಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

ಬಿಜೆಪಿ ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ: ಕುಟುಂಬ ರಾಜಕಾರಣ ವಿರೋಧ ಮಾಡುವ ಮೋದಿ ಅವರೇ ನೀವು ಯಾಕೆ ಭರತ್​​ಗೆ ಟಿಕೆಟ್ ಕೊಟ್ರಿ?, ನಾಲಿಗೆ ಒಂದಿರಬೇಕು, ಎರಡು ಇರೋಕೆ ಆಗಲ್ಲ. ಯಡಿಯೂರಪ್ಪ ಮತ್ತು ಮಕ್ಕಳದು ಕುಟುಂಬ ರಾಜಕಾರಣ ಅಲ್ವಾ? ದೇವೇಗೌಡ ಮತ್ತು ಮಕ್ಕಳು, ಸೊಸೆ ಅದು ಕುಟುಂಬ ರಾಜಕೀಯ ಅಲ್ವಾ? ಎಂದು ಪ್ರಶ್ನಿಸಿದರು.

ನನ್ನನ್ನ ತೆಗೆಯಬೇಕು ಅಂತ ಬಿಜೆಪಿ ಜೆಡಿಎಸ್ ಸೇರಿದ್ದಾರೆ. ಆದರೆ ನಾನು‌ ಜಗ್ಗೋದೂ ಇಲ್ಲ, ಬಗ್ಗೋದು ಇಲ್ಲ. ನಾನು‌ ಎಲ್ಲಿವರೆಗೆ ಸಿಎಂ ಆಗಿರ್ತೀನಿ ಅಲ್ಲಿವರೆಗೂ ಇವರ ಬೇಳೆಕಾಳು ಬೇಯಲ್ಲ. ಜನರ ಆಶೀರ್ವಾದ ಇರುವವರೆಗೆ ನನ್ನನ್ನು ಏನೂ ಮಾಡಲು ಆಗಲ್ಲ. ನಾನು, ನನ್ನ ಕುಟುಂಬದವರು ತಪ್ಪು ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಬೊಮ್ಮಾಯಿ ಗೃಹ ಸಚಿವರಿದ್ದ ವೇಳೆ ಬಿಟ್ ಕಾಯಿನ್ ಹಗರಣದಲ್ಲಿ ಸಿಲುಕಿಕೊಂಡಿದ್ದರು. ಇಂಥವರಿಗೆ ನೀವು ಮತ ಹಾಕಬೇಡಿ. ಬೊಮ್ಮಾಯಿ ಯಾವಾಗ್ಲೂ ಒಳ ಒಪ್ಪಂದ ಮಾಡಿಕೊಳ್ತಾರೆ.ಇಂತವರು ರಾಜಕಾರಣದಲ್ಲಿ ಇರಬಾರದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಸಿಎಂ ಪ್ರಚಾರದ ವೇಳೆ ಮೋದಿ ಮೋದಿ ಎಂದು ಘೋಷಣೆ: ತಡಸ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಚಾರದ ವೇಳೆ ಕೆಲ ಯುವಕರು ಮೋದಿ ಮೋದಿ ಎಂದು ಘೋಷಣೆ ಕೂಗಿದ ಘಟನೆ ನಡೆಯಿತು.

ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಪ್ರಚಾರ ಅಖಾಡಕ್ಕಿಳಿದ ದೇವೇಗೌಡರು: ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ಮತಬೇಟೆ

ಇದನ್ನೂ ಓದಿ: 15 ಬಾರಿ ಬಜೆಟ್ ಮಂಡಿಸಿರುವೆ, ಮುಂದೆ ಮಂಡಿಸುತ್ತೇನೋ ಇಲ್ಲೋ ಗೊತ್ತಿಲ್ಲ: ಕುರುಬ ಸಮುದಾಯದ ಮುಖಂಡರ ಸಭೆಯಲ್ಲಿ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.