ETV Bharat / state

ದಾವಣಗೆರೆ: ರಸ್ತೆ ಗುಂಡಿಗಳ ಸುತ್ತ ದೀಪ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ - ರಸ್ತೆ ಗುಂಡಿ ಮುಂಚುವಂತೆ ಆಗ್ರಹ

ರಸ್ತೆ ಗುಂಡಿಗಳ ಸುತ್ತ ದೀಪ ಹಚ್ಚಿ ಕಾಂಗ್ರೆಸ್‌ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.

Congress activists Protest at Davangere
ರಸ್ತೆ ಗುಂಡಿಗಳ ಸುತ್ತ ದೀಪ ಹಚ್ಚಿ ಕೈ ಕಾರ್ಯಕರ್ತರ ಪ್ರತಿಭಟನೆ
author img

By

Published : Oct 26, 2022, 7:37 PM IST

ದಾವಣಗೆರೆ: ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಬಿದ್ದಿರುವ ಗುಂಡಿಗಳ ಸುತ್ತ ದೀಪಗಳನ್ನು ಹಚ್ಚಿದ ಕಾಂಗ್ರೆಸ್ ಕಾರ್ಯಕರ್ತರು, ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ‌ಯ ಬಳಿಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ನಗರದಲ್ಲಿ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು, ಮಾಜಿ ಸಚಿವ ಎಸ್‌. ಎಸ್. ಮಲ್ಲಿಕಾರ್ಜುನ ಅವರ ಆಡಳಿತದಲ್ಲಿ ಆಗಿರುವ ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ರಸ್ತೆಗಳು ಗುಂಡಿಮಯವಾಗಿವೆ. ಈ ಗುಂಡಿಗಳನ್ನು ಮುಚ್ಚುವ ಕೆಲಸ ಮಹಾನಗರ ಪಾಲಿಕೆಯಿಂದ ಆಗುತ್ತಿಲ್ಲ. ಇದಕ್ಕೆ 40 ಪರ್ಸೆಂಟ್​ ಕಮಿಷನ್​ ಕಾರಣವೇ ಎಂದು ಪ್ರಶ್ನಿಸಿದರು.‌

ಮಹಾನಗರ ಪಾಲಿಕೆಯ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್ ಮಾತನಾಡಿ, ಕೇವಲ ನಾಲ್ಕು ರಸ್ತೆಗಳನ್ನು ನಿರ್ಮಿಸಿ ಇಡೀ ದಾವಣಗೆರೆ ನಗರದ ಎಲ್ಲಾ ರಸ್ತೆಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿಕೊಳ್ಳುವ ಮಾಜಿ ಮೇಯರ್ ಅದರಲ್ಲಿ ಎಷ್ಟು ಪರ್ಸೆಂಟ್ ತೆಗೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಾನಗರ ಪಾಲಿಕೆ ಸದಸ್ಯ ಎ.ನಾಗರಾಜ್, ಕನಿಷ್ಠ ಪಕ್ಷ ಗುಂಡಿ ಮುಚ್ಚಿಸುವಲ್ಲಿ ವಿಫಲವಾಗಿರುವ ಮಹಾನಗರ ಪಾಲಿಕೆ ದಿವಾಳಿ ಆಗಿದೆಯಾ? ಎಂದು ಕೇಳಿದರು.‌

ಇದನ್ನೂ ಓದಿ: ಹುಬ್ಬಳ್ಳಿ: ದೀಪ ಹಚ್ಚಿ ರಸ್ತೆ ಗುಂಡಿ ದುರಸ್ತಿಗೆ ಆಗ್ರಹ, ಪ್ರತಿಭಟನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.