ETV Bharat / state

ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಸಂತಾಪ ಸೂಚಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

ಸಿದ್ದೇಶ್ವರ ಸ್ವಾಮೀಜಿ ಬರೀ ಸ್ವಾಮೀಜಿಯಾಗಿ ಗುರುತಿಸಿಕೊಂಡಿಲ್ಲ ಉಪನಿಷತ್ತು, ಭಗವದ್ಗೀತೆ, ಸಿದ್ಧಾಂತ ಶಿಖಾಮಣಿಯಾಗಿದ್ದರು - ಶ್ರೀಶೈಲ ಸ್ವಾಮೀಜಿ ಸಂತಾಪ- ದಾವಣಗೆರೆಯಲ್ಲಿ ಸಂತಾಪ ಸೂಚಿಸಿದ ಶಾಸಕ ಶಾಮನೂರು ಶಿವಶಂಕರಪ್ಪ

Condolences on passing away of Siddeshwar Swamiji
ಸಿದ್ದೇಶ್ವರ ಸ್ವಾಮೀಜಿ ಅಗಲಿಕೆ ಸಂತಾಪ ಸೂಚಿಸಿದ ಶಾಸಕ ಶಾಮನೂರು ಶಿವಶಂಕರಪ್ಪ
author img

By

Published : Jan 3, 2023, 10:48 PM IST

ದಾವಣಗೆರೆ: ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಶ್ರೀಶೈಲ ಪೀಠದ ಜಗದ್ಗುರುಗಳು ಸಂತಾಪ ಸೂಚಿಸಿದರು. ಶ್ರೀಶೈಲದಲ್ಲಿ ಮಾತನಾಡಿದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಗಳು ಶಾಂತ ಮೂರ್ತಿಗಳಾಗಿದ್ದರು. ಅವರ ಅಗಲಿಕೆ ಇಡೀ ಸಂತ ಪ್ರಪಂಚಕ್ಕೆ ತುಂಬಲಾರದ ನಷ್ಟ ಹಾಗು ಸಂತ ಪ್ರಪಂಚ ಬಡವಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಅವರು ಜ್ಙಾನ ಯೋಗಿಯನ್ನು ಕಳೆದುಕೊಂಡಿರುವ ನೋವು ನಮಗಿದೆ. ಅವರು ಬರೀ ಸ್ವಾಮೀಜಿಯಾಗಿ ಗುರುತಿಸಿಕೊಂಡಿಲ್ಲ ಉಪನಿಷತ್ತು, ಭಗವದ್ಗೀತೆ, ಸಿದ್ಧಾಂತ ಶಿಖಾಮಣಿ, ಸಾಕಷ್ಟು ಪ್ರವಚನ ನೀಡುವ ಮೂಲಕ ಪ್ರಖ್ಯಾತಿ ಹೊಂದಿದ್ದರು. ಎಂತಹದ್ದೇ ವಿಷಯವನ್ನು ಜನರಿಗೆ ಸರಳವಾಗಿ ವಿವರಿಸುತ್ತಿದ್ದರು. ಗ್ರಂಥಗಳನ್ನು ಬರೆದು ಆಧ್ಯಾತ್ಮ ಲೋಕಕ್ಕೆ ಮಹದುಪಕಾರವನ್ನು ಮಾಡಿದ್ದಾರೆ. ಅವರೊಂದಿಗಿನ ನೆನಪು ಎಂದು ಮರೆಯಲು ಸಾಧ್ಯವಿಲ್ಲ. ಸರಳ ಮತ್ತು ಸಜ್ಜನಿಕೆಯ ಜೀವನ ಸಾಗಿಸುವ ಮೂಲಕ ಮನೆ ಮಾತಾಗಿದ್ದರು ಲಕ್ಷಾಂತರ ಭಕ್ತರನ್ನು ಹೊಂದಿದ್ದ ಸಿದ್ದೇಶ್ವರ ಸ್ವಾಮೀಜಿಗಳ ಆತ್ಮಕ್ಕೆ ಶಾಂತಿ ಕೋರುವೆ ಎಂದು ಸಂತಾಪ ಸೂಚಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಸಂತಾಪ: ದಾವಣಗೆರೆಯಲ್ಲಿ ಶಾಸಕ, ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಸ್ವರ್ಗಸ್ಥರಾಗಿರುವುದು ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಲಕ್ಷಾಂತರ ಜನರು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಯಾವುದಕ್ಕೂ ಆಸೆಯನ್ನು ಪಡದೆ, ಯಾರಿಗೂ ತೊಂದರೆ ನೀಡದೆ ಅವರ ಸಾವು ಬಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕಾರಗಳು ಬಂದರೂ ತಿರಸ್ಕಾರ ಮಾಡಿದ್ದರು ಎಂದು ಹೇಳಿದರು.

ಖಾವಿಯನ್ನು ತೊಡದೆ ಬಿಳಿ ಬಟ್ಟೆ ಧರಿಸಿ ಸರಳ ಜೀವನ ನಡೆಸುತ್ತಿದ್ದರು. ದಾವಣಗೆರೆಗೆ ಕೂಡ ಮೂರು ಬಾರಿ ಬಂದಿದ್ದರು, ನಾವು ಕೂಡ ಭೇಟಿ ‌ಮಾಡಿದ್ದೆವು. ವೀರಶೈವ ವಿಧಿವಿಧಾನ ರೀತಿ ನನ್ನ ಅಂತಿಮ ಸಂಸ್ಕಾರ ಬೇಡ ಎಂದಿದ್ದರು. ಅವರು ತಮ್ಮ ಅಂತ್ಯಕ್ರಿಯೆ ಕುರಿತು ಮುಂಚಿತವಾಗಿಯೇ ವಿಲ್​ ಬರೆದಿದ್ದರು. ಸ್ವಾಮೀಜಿ ಮಹಾನ್ ಗುರುಗಳು ಎಂದು ಸಿದ್ದೇಶ್ವರ ಶ್ರೀಗಳಿಗೆ ಶಾಮನೂರು ಶಿವಶಂಕರಪ್ಪ ಸಂತಾಪ ಸೂಚಿಸಿದರು.

ಜ್ಞಾನ ಯೋಗಾಶ್ರಮದಲ್ಲಿ ಅಂತ್ಯಕ್ರಿಯೆ: ವಿಜಯಪುರದ ಜ್ಞಾನ ಯೋಗಾಶ್ರಮದ ಆವರಣದಲ್ಲಿ ಮಂಗಳವಾರ ರಾತ್ರಿ ಶ್ರೀಗಳ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ವಿಧಿ ವಿಧಾನಗಳ ಮೂಲಕ ಸರ್ಕಾರದಿಂದಲೇ ಅವರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ, ಸರ್ಕಾರದ ಸಚಿವರು, ವಿವಿಧ ಮಠಾಧೀಶರು ಲಕ್ಷಾಂತರ ಅಭಿಮಾನಿಗಳು ಈ ಸಂದರ್ಭದಲ್ಲಿ ಭಾಗಿಯಾದರು.

ಶ್ರೀಗಳ ಅಂತ್ಯಕ್ರಿಯೆ ಹಿನ್ನೆಲೆ ವಿಜಯಪುರ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಒಂದು ದಿನ ರಜೆಯನ್ನು ಘೋಷಿಸಲಾಗಿತ್ತು. ಸೈನಿಕ ಶಾಲೆಯಲ್ಲಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಅಲ್ಲಿಂದ ಮೆರವರಣಿಗೆ ಮೂಲಕ ಜ್ಞಾನ ಯೋಗಾಶ್ರಮದ ಆವರಣಕ್ಕೆ ಪಾರ್ಥಿವ ಶರೀರವನ್ನು ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಶ್ರೀಗಳು ಪಂಚಭೂತಗಳಲ್ಲಿ ಲೀನವಾದರು.

ಇದನ್ನೂ ಓದಿ:ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ ವಸಂತ ಸಿದ್ದೇಶ್ವರ ಸ್ವಾಮೀಜಿ : ಗವಿಶ್ರೀ ಸ್ಮರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.