ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದೇವರಹಳ್ಳಿಯ ನವೋದಯ ಶಾಲೆ ವಿದ್ಯಾರ್ಥಿ ಆಯ್ಕೆಯಾಗಿದ್ದಾರೆ.
![Pariksha Pe Charcha 2020, Channagiri student selected for the Pariksha Pe Charcha 2020, Pariksha Pe Charcha 2020 news, Pariksha Pe Charcha 2020 latest news, ಪರೀಕ್ಷಾ ಪೆ ಚರ್ಚಾ 2020, ಪರೀಕ್ಷಾ ಪೆ ಚರ್ಚಾ 2020ಗೆ ಚನ್ನಗಿರಿ ವಿದ್ಯಾರ್ಥಿ ಆಯ್ಕೆ, ಪರೀಕ್ಷಾ ಪೆ ಚರ್ಚಾ 2020 ಸುದ್ದಿ,](https://etvbharatimages.akamaized.net/etvbharat/prod-images/kn-dvg-05-10-modisamvada-select-script-7203307_10012020192728_1001f_1578664648_638.jpg)
9ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎಸ್.ಜಿ.ಬಸವರಾಜ್ ಆಯ್ಕೆಯಾಗಿದ್ದು, ಪ್ರಧಾನಿ ಮೋದಿ ಜೊತೆ ಪರೀಕ್ಷಾ ಪೇ ಚರ್ಚಾ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಮೂಲತಃ ಜಗಳೂರು ತಾಲ್ಲೂಕಿನ ಸಿದ್ದಯ್ಯನಕೋಟೆ ವಿದ್ಯಾರ್ಥಿ ಬಸವರಾಜ್, ಇದೇ 16ರಂದು ಬೆಂಗಳೂರಿನಿಂದ ದೆಹಲಿಗೆ ತೆರಳಲಿರುವ ತಂಡದ ಜೊತೆ ಸಂವಾದ ಕಾರ್ಯಕ್ರಮಕ್ಕೆ ತೆರಳಲಿದ್ದಾರೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ನಡೆಸಿದ ಆನ್‌ಲೈನ್ ಪರೀಕ್ಷೆಯಲ್ಲಿ ಬಸವರಾಜ್ ಆಯ್ಕೆಯಾಗಿದ್ದಾರೆ.