ETV Bharat / state

ನಕಲಿ ಮದ್ಯ ಮಾರಾಟ ಕಂಡು ಬಂದಲ್ಲಿ ಕಂಟ್ರೋಲ್​​ ರೂಂಗೆ ಕರೆ ಮಾಡಿ - ದಾವಣಗೆರೆ ಸುದ್ದಿ

ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ ವ್ಯವಹಾರಗಳು ಕಂಡುಬಂದಲ್ಲಿ ಅಬಕಾರಿ ಇಲಾಖೆಯ ಕಂಟ್ರೋಲ್ ರೂಂ ದೂರಾವಾಣಿ ಸಂಖ್ಯೆ 08192-235316ಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತರು ಮನವಿ ಮಾಡಿದ್ದಾರೆ.

Call the Control Room if you find a counterfeit liquor
ನಕಲಿ ಮದ್ಯ ಮಾರಾಟ ಕಂಡುಬಂದಲ್ಲಿ ಕಂಟ್ರೋಲ್ ರೂಂಗೆ ಕರೆ ಮಾಡಿ
author img

By

Published : Apr 16, 2020, 10:45 PM IST

ದಾವಣಗೆರೆ: ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.

ಆದರೆ, ಕೆಲವು ಸಮಾಜಘಾತುಕ ವ್ಯಕ್ತಿಗಳು ದಾವಣಗೆರೆ ಜಿಲ್ಲೆಯಾದ್ಯಂತ ಸ್ಪಿರಿಟ್ ಬಳಸಿ ನಕಲಿ ಮದ್ಯ ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ಅಬಕಾರಿ ಇಲಾಖೆಯ ಗಮನಕ್ಕೆ ಬಂದಿದೆ. ನಕಲಿ ಮದ್ಯ, ಕಳ್ಳಭಟ್ಟಿ ಸಾರಾಯಿ ಸೇವನೆಯಿಂದ ಮನುಷ್ಯನ ಆರೋಗ್ಯ ಹಾಳಾಗಿ ಲಿವರ್, ಕಿಡ್ನಿ ಇತರೆ ಅಂಗಾಂಗ ವೈಫಲ್ಯತೆಯುಂಟಾಗಿ ಸಾವಿಗೀಡಾಗುವ ಸಂಭವವಿದೆ. ಆದ್ದರಿಂದ ಅಕ್ರಮವಾಗಿ ಮಾರಾಟ ಮಾಡುವ ನಕಲಿ ಮದ್ಯ, ಕಳ್ಳಭಟ್ಟಿಯನ್ನ ಸಾರ್ವಜನಿಕರು ಸೇವಿಸಬಾರದು.

ಇಂತಹ ನಕಲಿ ವ್ಯವಹಾರಗಳು ಕಂಡುಬಂದಲ್ಲಿ ಅಬಕಾರಿ ಇಲಾಖೆಯ ಕಂಟ್ರೋಲ್ ರೂಂ ದೂರಾವಾಣಿ ಸಂಖ್ಯೆ 08192-235316ಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಅಬಕಾರಿ ಇಲಾಖೆಯ ಉಪ ಆಯುಕ್ತರು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.