ದಾವಣಗೆರೆ : ನಮ್ಮಲ್ಲಿ ಮೂಲ, ಹೊರಗಿನವರು, ಒಳಗಿನವರು ಎಂಬ ಪ್ರಶ್ನೆಯೇ ಇಲ್ಲ. ಎಲ್ಲರೂ ಬಿಜೆಪಿ ಕಾರ್ಯಕರ್ತರೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ಪುನರ್‌ರಚನೆ ಆಗಿಯೇ ಆಗುತ್ತದೆ ಎಂದರು. ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ ನಡೆಯುತ್ತಿದೆ ಎಂಬುದನ್ನು ನಿರಾಕರಿಸಿದ ಅವರು, ಎಲ್ಲಿ ರೆಸಾರ್ಟ್ ರಾಜಕೀಯ ಆಗಿದೆ. ಅವರವರು ಟೂರ್ ಹೋಗಿದ್ದಾರಷ್ಟೇ, ಅದರಲ್ಲೇನೂ ವಿಶೇಷ ಇಲ್ಲ ಅಂದರು.
ಬಿಜೆಪಿ ಹಿಂದಿನ ಹಾಗೂ ಈಗಿನ ಜಿಲ್ಲಾಧ್ಯಕ್ಷರ ಜೊತೆ ಸಭೆ ನಡೆಸಿರುವೆ. ಪಕ್ಷದ ಸಂಘಟನೆ ಕುರಿತು ಚರ್ಚೆಯಾಗಿದೆ ಅಷ್ಟೇ ಎಂದ ಅವರು, ಸಚಿವ ಆನಂದ್ ಸಿಂಗ್ ಮೇಲಿನ ಆರೋಪದ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದರು.