ETV Bharat / state

ಚಂದ್ರು ಹೊನ್ನಾಳಿ ಜನರ ಪ್ರೀತಿಗೆ ಪಾತ್ರನಾಗಿದ್ದ, ಅವನ ಸಾವು ಆಘಾತ ತಂದಿದೆ: ಬಿ ವೈ ವಿಜಯೇಂದ್ರ

ಚಂದ್ರಶೇಖರ್ ಹೊನ್ನಾಳಿ ಸಾವು ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತಿದ್ದಾರೆ‌. ಸರಿಯಾಗಿ ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕು. ರೇಣುಕಾಚಾರ್ಯ ಅವರು ತುಂಬಾ ನೋವಿನಲ್ಲಿದ್ದಾರೆ. ಆದಷ್ಟು ಶೀಘ್ರ ತನಿಖೆ ನಡೆಸಿ ವರದಿ ನೀಡಬೇಕು-ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ.

BY Vijayendra visits MP Renukacharya residence
ಎಂ.ಪಿ ರೇಣುಕಾಚಾರ್ಯ ನಿವಾಸಕ್ಕೆ ಬಿವೈ ವಿಜಯೇಂದ್ರ ಭೇಟಿ
author img

By

Published : Nov 7, 2022, 12:40 PM IST

ದಾವಣಗೆರೆ: ಚಂದ್ರಶೇಖರ್ ಹೊನ್ನಾಳಿ ಜನರ ಪ್ರೀತಿಗೆ ಪಾತ್ರನಾಗಿದ್ದ. ಅವನ ಸಾವು ಆಘಾತ ತಂದಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿರುವ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಮನೆಗೆ ಬಿ ವೈ ವಿಜಯೇಂದ್ರ ಇಂದು ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಣ್ಣ ವಯಸ್ಸಿನಲ್ಲಿಯೇ ಈ ಘಟನೆ ನಡೆದಿರುವುದು ರೇಣುಕಾಚಾರ್ಯ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಹೊನ್ನಾಳಿಗೆ ಆಘಾತ ತಂದಿದೆ. ಭಗವಂತ ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದರು.

ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌. ಸರಿಯಾಗಿ ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕು. ರೇಣುಕಾಚಾರ್ಯ ಅವರು ತುಂಬಾ ನೋವಿನಲ್ಲಿದ್ದಾರೆ. ಆದಷ್ಟು ಶೀಘ್ರ ತನಿಖೆ ನಡೆಸಿ ವರದಿ ನೀಡಬೇಕು ಎಂದು ಪೊಲೀಸ್​​ ಇಲಾಖೆಗೆ ಒತ್ತಾಯಿಸಿದರು.

ಎಂ.ಪಿ ರೇಣುಕಾಚಾರ್ಯ ನಿವಾಸಕ್ಕೆ ಬಿವೈ ವಿಜಯೇಂದ್ರ ಭೇಟಿ

ರೇಣುಕಾಚಾರ್ಯಗೆ ಸಾಂತ್ವನ: ರೇಣುಕಾಚಾರ್ಯ ಅವರ ಹೊನ್ನಾಳಿಯ ನಿವಾಸಕ್ಕೆ ಆಗಮಿಸಿದ್ದ ಬಿ ವೈ ವಿಜಯೇಂದ್ರ ಕೆಲ ಕಾಲ ಅವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು. ರೇಣುಕಾಚಾರ್ಯ ವಿಜಯೇಂದ್ರ ಅವರಿಗೆ ಚಂದ್ರು ಅವರ ಕೆಲ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡಿದ ವಿಡಿಯೋಗಳನ್ನು ತೋರಿಸಿದರು. ಕ್ಷೇತ್ರದ ಜನರಿಗೆ ಚಂದ್ರು ಎಂದರೆ ಎಲ್ಲಿಲ್ಲದ ಪ್ರೀತಿ. ಆತನನ್ನು ಕಳೆದುಕೊಂಡು ನಮ್ಮ ಕುಟುಂಬ ಅಷ್ಟೇ ಅಲ್ಲ, ಇಡೀ ಹೊನ್ನಾಳಿ ಜನ ನೋವಲ್ಲಿ ಇದ್ದಾರೆ ಎಂದು ರೇಣುಕಾಚಾರ್ಯ ಮರುಗಿದರು.

ಇದನ್ನೂ ಓದಿ: ಚಂದ್ರು ಕೈಗೆ ಹಗ್ಗ ಕಟ್ಟಿದ್ದಾರೆ.. ಇದು ವ್ಯವಸ್ಥಿತ ಕೊಲೆ: ಶಾಸಕ ರೇಣುಕಾಚಾರ್ಯ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.