ದಾವಣಗೆರೆ: ಬಿಎಸ್ವೈಗೆ ಯಾವುದೇ ಬ್ರೇಕ್ ಹಾಕಿಲ್ಲ, ಎಲ್ಲ ಬ್ರೇಕ್ಗಳು ಯಡಿಯೂರಪ್ಪ ಅವರ ಕೈಯಲ್ಲೇ ಇವೆ. ಯಾವಾಗ ಬೇಕಾದರೂ ರಾಜ್ಯ ಪ್ರವಾಸ ಮಾಡಬಹುದು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಎಸ್ವೈ ರಾಜ್ಯ ಪ್ರವಾಸ ಶುರು ಮಾಡಿದ್ದಾರೆ. ಮೈಸೂರು, ಶಿವಮೊಗ್ಗ ನಂತರ ದಾವಣಗೆರೆಗೆ ಬರಲಿದ್ದಾರೆ. ಅವರಿಗೆ ಬ್ರೇಕ್ ಹಾಕಲು ಸಾಧ್ಯ ಇಲ್ಲ. ಪಕ್ಷ ಸಂಘಟನೆ ರಕ್ತಗತವಾಗಿ ಬಂದಿದೆ. ಪಕ್ಷದ ಬಲವರ್ಧನೆಗಾಗಿ ರಾಜ್ಯದ ಮುಖಂಡರ ಜೊತೆ ಪ್ರವಾಸ ಮಾಡಲಿದ್ದಾರೆ ಎಂದರು.
ದೇವಾಲಯ ನೆಲಸಮ ವಿಚಾರಕ್ಕೆ ಪ್ರತಿಕ್ರಿಯೆ:
ಮೈಸೂರಿನಲ್ಲಿ ಅಧಿಕಾರಿಗಳು ದುಡುಕಿ ದೇವಾಲಯಗಳನ್ನು ಕೆಡವುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟವರ ಜೊತೆ ಚರ್ಚೆ ಮಾಡಬಹುದಿತ್ತು. ಸಿಎಂ ಬೊಮ್ಮಾಯಿ ಅವರು ಎಲ್ಲವೂ ಸರಿ ಆಗಲಿದೆ ಎಂದಿದ್ದಾರೆ ಎಂದರು.
ನನ್ನ ಸ್ಪರ್ಧೆ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನಿಸ್ತಾರೆ :
ದಾವಣಗೆರೆ ಸಭೆಯಲ್ಲಿ ಮಹತ್ತರ ವಿಷಯಗಳ ಚರ್ಚೆ ಆಗಲಿದ್ದು, ಹಾನಗಲ್, ಸಿಂದಗಿ, ವಿವಿಧ ಚುನಾವಣೆ ಸಮಗ್ರ ಚರ್ಚೆ ಕೂಡ ನಡೆಯಲಿದೆ. ನನ್ನ ಉಸ್ತುವಾರಿ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನ ಮಾಡಲಿದ್ದಾರೆ. ಯಾವುದೇ ಉಪಚುನಾವಣೆ ನಿಲ್ಲುವುದಕ್ಕೆ ತಲೆಕೆಡಿಸಿಕೊಂಡಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ಕರ್ನಾಟಕದಲ್ಲಿ ಎಲ್ಲೇ ಟಿಕೆಟ್ ಕೊಟ್ಟರೂ ಚುನಾವಣೆ ನಿಲ್ಲುತ್ತೇನೆ. ಮುಂದೆ ಸಿಎಂ ನೇತೃತ್ವದಲ್ಲಿ ಚುನಾವಣೆ ಎಂದು ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ. ಆಗಿನ ಬೆಳವಣಿಗೆ ನೋಡಿಕೊಂಡು ತೀರ್ಮಾನ ಮಾಡ್ತಾರೆ ಎಂದರು.
ಇದನ್ನೂ ಓದಿ: ಯಾವುದೋ ಒಂದು ತಪ್ಪಿಗೆ ಸಿದ್ದರಾಮಯ್ಯರಿಂದ ಪಾಠ ಕಲಿಯುವ ಅಗತ್ಯವಿಲ್ಲ: ಕಟೀಲ್ ತಿರುಗೇಟು