ದಾವಣಗೆರೆ: ವಿದೇಶದಿಂದ ಬಂದ ಉದ್ಯಮಿಯೊಬ್ಬರು ಬಡವರಿಗೆ ಆಸರೆಯಾಗುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀನಿವಾಸ್ ನಂದಿಗಾವಿ ಎನ್ನುವವರು ನಿತ್ಯ ಆಟೋ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ ಒಂದೂವರೆ ಸಾವಿರ ಕಿಟ್ ವಿತರಣೆ ಮಾಡುತ್ತಿದ್ದು, ಕೊರೋನಾ ವಾರಿಯರ್ಸ್ಗೆ ಎಲೆಕ್ಟ್ರಾನಿಕ್ ಹಬೆ ಯಂತ್ರವನ್ನು ಕೂಡ ನೀಡಿದ್ದಾರೆ.
ಹಾಂಕಾಂಗ್ ಸೇರಿದಂತೆ ಹಲವು ದೇಶಗಳಲ್ಲಿ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಕೋವಿಡ್ ಸಂದರ್ಭದಲ್ಲಿ ತನ್ನೂರಿಗೆ ಬಂದು ಜನರ ಕಷ್ಟಕ್ಕೆ ಆಸರೆ ಆಗುತ್ತಿದ್ದಾರೆ.
ಕಳೆದ ಲಾಕ್ಡೌನ್ ಸಂದರ್ಭದಲ್ಲಿ 20 ಸಾವಿರ ಕಿಟ್ಗಳನ್ನು ನೀಡಿ, ಕೊರೊನಾ ವಾರಿಯರ್ಸ್ಗೆ ಮೆಡಿಕಲ್ ಕಿಟ್ಗಳನ್ನು ನೀಡಲಾಗಿತ್ತು. ಈ ಬಾರಿ ಕೂಡ ಅದೇ ರೀತಿ ಲಾಕ್ಡೌನ್ ಮಾಡಿದ್ದು, ಸಾಕಷ್ಟು ಜನರು ಸಂಕಷ್ಟಕ್ಕೆ ಓಳಗಾಗಿದ್ದಾರೆ. ಅದ್ದರಿಂದ ಈ ಬಾರಿ ಕೂಡ 25 ಸಾವಿರ ಮಾಸ್ಕ್, 30 ಸಾವಿರ ರೇಷನ್ ಕಿಟ್ ಹಾಗೂ ಕೊರೊನಾ ವಾರಿಯರ್ಸ್ಗೆ ಎಲೆಕ್ಟ್ರಾನಿಕ್ ಹಬೆ ಯಂತ್ರಗಳನ್ನು ನೀಡುತ್ತಿದ್ದೇನೆ ಎಂದರು.