ದಾವಣಗೆರೆ: ಲಾಕ್ ಡೌನ್ ಇದ್ದರೂ ಸುಮಾರು 20 ಯುವಕರು ಗುಂಡು ಪಾರ್ಟಿ ಮಾಡಿ ಅಕ್ಕ-ಪಕ್ಕದವರಿಗೆ ಕಿರಿಕಿರಿ ಉಂಟು ಮಾಡಿದ ಘಟನೆ ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿ ನಡೆದಿದೆ.
ಸುದ್ದಿ ತಿಳಿದು ಸ್ಥಳಕ್ಕಾಮಿಸಿದ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಯುವಕರ ಗುಂಪೊಂದು ಎಣ್ಣೆ ಪಾರ್ಟಿ ಆಯೋಜಿಸಿ, ಗದ್ದಲ ಮಾಡುತ್ತಿದ್ದರು. ಈ ವೇಳೆ ಕಿರಿಕಿರಿ ಅನುಭವಿಸಿದ ಸ್ಥಳೀಯರು ವಿದ್ಯಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ನಾಲ್ವರು ಯುವಕರು ಸಿಕ್ಕಿದ್ದು, ವಶಕ್ಕೆ ಪಡೆದಿದ್ದಾರೆ. ಉಳಿದವರು ಪರಾರಿಯಾಗಿದ್ದು, ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನು ರೂಮ್ ನಲ್ಲಿ ಹತ್ತಾರು ಖಾಲಿ ಬಾಟಲ್ ಗಳು ಪತ್ತೆಯಾಗಿದ್ದು, ಈ ಬಾಟಲ್ ಗಳು ಎಲ್ಲಿಂದ ತರಲಾಗಿತ್ತು? ಹಾಗು ಈ ಯುವಕರು ರೂಂನಲ್ಲಿ ಒಟ್ಟಿಗೆ ಸೇರಿ ಪಾರ್ಟಿ ಮಾಡುತ್ತಿದ್ದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.