ETV Bharat / state

ಶಾಸಕ ಯತ್ನಾಳ್ ವಿರುದ್ಧ ಶಿಸ್ತು ಸಮಿತಿಗೆ ಮಾಹಿತಿ ನೀಡಿದ್ದೇವೆ: ನಳಿನ್ ಕುಮಾರ್ ಕಟೀಲ್​ - Nalin Kumar Kateel

ಸಿಎಂ ಅವರು ಶಾಸಕರ ಜೊತೆ ಸಭೆ ನಡೆಸಿದ್ದು, ಯಾರಿಗೂ ಕೂಡ ಪಕ್ಷ ಹಾಗೂ ಸಿಎಂ ವಿರುದ್ಧ ಅಸಮಾಧಾನವಿಲ್ಲ. ಕೆಲ ಶಾಸಕರು ಅನುದಾನ ಕೇಳಿದ್ದಾರೆ. ಅವರಿಗೆ ಸಿಎಂ ಯಡಿಯೂರಪ್ಪನವರು ಕೋವಿಡ್ ಸಂದರ್ಭದ ಬಗ್ಗೆ ವಿವರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.

BJP President Nalin Kumar Kateel
ಶಾಸಕ ಯತ್ನಾಳ್ ವಿರುದ್ಧ ಶಿಸ್ತು ಸಮಿತಿಗೆ ಮಾಹಿತಿ ನೀಡಿದ್ದೇವೆ: ನಳಿನ್ ಕುಮಾರ್ ಕಟೀಲ್​
author img

By

Published : Jan 6, 2021, 12:13 PM IST

Updated : Jan 6, 2021, 12:35 PM IST

ದಾವಣಗೆರೆ: ಶಾಸಕ ಯತ್ನಾಳ್ ವಿರುದ್ಧ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿಗೆ ಮಾಹಿತಿ ನೀಡಿದ್ದೇವೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಯಾವ ಸ್ಥಳದಲ್ಲಿ ಏನು ಮಾತನಾಡಬೇಕು ಎಂಬುದನ್ನು ಅರಿತು ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಾಸಕ ಯತ್ನಾಳ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ದಾವಣಗೆರೆಯಲ್ಲಿ ನಡೆಯುತ್ತಿರುವ ಎಸ್​ಸಿ ಮೋರ್ಚಾದ ಕಾರ್ಯಕಾರಿಣಿ ಸಭೆಗೆ ಮುನ್ನ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ‌ ಅವರು, ಸಿಎಂ ಅವರು ಶಾಸಕರ ಜೊತೆ ಸಭೆ ನಡೆಸಿದ್ದು, ಯಾರಿಗೂ ಕೂಡ ಪಕ್ಷ ಹಾಗೂ ಸಿಎಂ ವಿರುದ್ಧ ಅಸಮಾಧಾನವಿಲ್ಲ. ಕೆಲ ಶಾಸಕರು ಅನುದಾನವನ್ನು ಕೇಳಿದ್ದಾರೆ. ಅವರಿಗೆ ಸಿಎಂ ಯಡಿಯೂರಪ್ಪ ಕೋವಿಡ್ ಸಂದರ್ಭದ ಬಗ್ಗೆ ವಿವರಿಸಿದ್ದಾರೆ ಎಂದರು.

ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಏನೇ ಇದ್ದರೂ ಸಿಎಂ ಬಳಿ ಚರ್ಚೆ ಮಾಡಬೇಕು, ಇಲ್ಲ ನನ್ನ ಬಳಿ ಚರ್ಚೆ ಮಾಡಬೇಕು. ಅದನ್ನು ಬಿಟ್ಟು ಹೊರಗಡೆ ಮಾತನಾಡಿದರೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದರು.

ಸಮಯ ಬಂದಾಗ ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ:

ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಯಾರಿಗೂ ಸಚಿವರಾಗಬೇಕೆಂಬ ಅವಸರ ಇಲ್ಲ. ಮುಖ್ಯಮಂತ್ರಿಗಳ ಬಳಿ 7 ಖಾತೆಗಳಿದ್ದು, ಯಶಸ್ವಿಯಾಗಿ ಅದನ್ನು ಅವರೇ ನಿಭಾಯಿಸುತ್ತಿದ್ದಾರೆ. ಎಲ್ಲಾ ಸಚಿವರು ಅವರವರ ಜವಾಬ್ದಾರಿ ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಬಳಿ 13 ಖಾತೆಗಳಿದ್ದವು. ಯಾರಿಗೂ ಅವಸರ ಇಲ್ಲ. ಜನಗಳಿಗೆ ಉತ್ತಮ ಆಡಳಿತವನ್ನು ಬಿಜೆಪಿ ನೀಡುತ್ತಿದೆ ಎಂದರು.

ಓದಿ: ಸಿದ್ದರಾಮಯ್ಯನವರು ಮಾತನಾಡಲಿಲ್ಲ ಅಂದ್ರೆ ಕಾಂಗ್ರೆಸ್​​​ನಲ್ಲಿ ಕಳೆದುಹೋಗ್ತಾರೆ; ಕಟೀಲ್

ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಕೈ ಕಾಲು ಹಿಡಿಯುವ ಸಮಯ ದೂರ ಇಲ್ಲ ಎಂಬ ಮಾಜಿ ಸಿಎಂ ಹೆಚ್​​ಡಿಕೆ ಹೇಳಿಕೆಗೆ ಯಾವ ರಾಷ್ಟ್ರೀಯ ಪಕ್ಷ ಎಂದು ಹೆಚ್.ಡಿ. ಕುಮಾರಸ್ವಾಮಿಯವರು ಹೇಳಬೇಕು. ಬಿಜೆಪಿಗೆ ಅಂತಹ ಅವಶ್ಯಕತೆ ಇಲ್ಲ. ಯಾರ ಕೈಕಾಲು ಹಿಡಿಯುವುದಿಲ್ಲ. ಯಾವುದೇ ಕಾರ್ಯದಲ್ಲಿ ಒಪ್ಪಂದದ ಕೆಲಸ ಇಲ್ಲ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Last Updated : Jan 6, 2021, 12:35 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.