ETV Bharat / state

ನನ್ನನ್ನು ಕಂಡರೆ ಬಿಜೆಪಿ, ಜೆಡಿಎಸ್​ಗೆ ಭಯ: ಸಿದ್ದರಾಮಯ್ಯ ಟಾಂಗ್​​​​

author img

By

Published : Nov 27, 2019, 12:19 PM IST

Updated : Nov 27, 2019, 12:26 PM IST

ಕಾಂಗ್ರೆಸ್​ಲ್ಲಿ ಹಲವು ಮುಖಂಡರಿದ್ದಾರೆ. ಅವರನ್ನು ಬಿಟ್ಟು ನನ್ನ ಮೇಲೆ ಇತರೆ ಪಕ್ಷದವರು ಮುಗಿಬೀಳಲು ಉಪಚುನಾವಣೆಯಲ್ಲಿ ಸೋಲಿನ ಭಯ ಇರುವುದೇ ಕಾರಣ ಎಂದು ಬಿಜೆಪಿ-ಜೆಡಿಎಸ್​ ಬಗ್ಗೆ ವಾಗ್ದಾಳಿ ನಡೆಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ,Siddaramaiah
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ದಾವಣಗೆರೆ: ಬಿಜೆಪಿ, ಜೆಡಿಎಸ್​ನವರಿಗೆ ನನ್ನನ್ನು ಕಂಡರೆ ಭಯ. ಏನು ಬಲವಾದ ಕಾರಣ ಇಲ್ಲದೇ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ ಹೇಳಿ? ಎಂದು ವಿಧಾನಸಭೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ದಾವಣಗೆರೆ ಜಿಲೆಯ ಹರಿಹರ ಸಮೀಪದ ಕುಮಾರಪಟ್ಟಣಂನ ಗೆಸ್ಟ್ ಹೌಸ್​ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕನಿಷ್ಠ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. 15 ಸ್ಥಾನಗಳಲ್ಲಿ ಗೆದ್ದರೂ ಅಚ್ಚರಿ ಏನಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಕಾಂಗ್ರೆಸ್​ಲ್ಲಿ ಹಲವು ಮುಖಂಡರಿದ್ದಾರೆ. ಅವರನ್ನು ಬಿಟ್ಟು ನನ್ನ ಮೇಲೆ ಇತರ ಪಕ್ಷದವರು ಮುಗಿಬೀಳಲು ಉಪಚುನಾವಣೆಯಲ್ಲಿ ಸೋಲಿನ ಹೆದರಿಕೆ ಇರುವುದೇ ಕಾರಣ ಎಂದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಯದ್ವಾತದ್ವಾ ಹಣ ಖರ್ಚು ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ, ಆಮಿಷವೊಡ್ಡಿ ಮತಯಾಚನೆ ಮಾಡುತ್ತಿರುವುದು ಚುನಾವಣಾ ಆಯೋಗದ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ವಿರುದ್ಧ ಆರೋಪಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗವೂ ಆಡಳಿತ ವರ್ಗದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Intro:KN_DVG_01_27_SIDDU_BYTE_7203307

ನನ್ನನ್ನು ಕಂಡರೆ ಬಿಜೆಪಿ, ಜೆಡಿಎಸ್ ಗೆ ಭಯ, ಹಾಗಾಗಿ ನಾನೇ ಟಾರ್ಗೆಟ್ : ಸಿದ್ದರಾಮಯ್ಯ

ದಾವಣಗೆರೆ: ಬಿಜೆಪಿ, ಜೆಡಿಎಸ್ ನವರಿಗೆ ನನ್ನನ್ನು ಕಂಡರೆ ಭಯ. ಏನು ಬಲವಾದ ಕಾರಣ ಇಲ್ಲದೇ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ ಹೇಳಿ. ಕಾಂಗ್ರೆಸ್ ನಲ್ಲಿ ಹಲವು ಮುಖಂಡರಿದ್ದಾರೆ. ಅವರನ್ನು ಬಿಟ್ಟು ನನ್ನ ಮೇಲೆ ಮುಗಿಬೀಳಲು ಉಪಚುನಾವಣೆಯಲ್ಲಿ ಸೋಲಿನ ಹೆದರಿಕೆ ಇರುವುದೇ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆ ಜಿಲೆಯ ಹರಿಹರ ಸಮೀಪದ ಕುಮಾರಪಟ್ಟಣಂನ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕನಿಷ್ಠ ೧೨ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ೧೫ ಸ್ಥಾನಗಳಲ್ಲಿ ಗೆದ್ದರೂ ಅಚ್ಚರಿ ಏನಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಯದ್ವಾತದ್ವಾ ಹಣ ಖರ್ಚು ಮಾಡ್ತಿದೆ. ಚುನಾವಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ನಮ್ಮ ಬಳಿ ಹಣ ಇಲ್ಲ. ಮಂತ್ರಿ ಸ್ಥಾನ ನೀಡುತ್ತೇನೆ, ಅಭಿವೃದ್ಧಿ ಕೆಲಸ ಮಾಡುತ್ತೇನೆ. ದತ್ತು ಪಡೆಯುತ್ತೇನೆ. ಮಂತ್ರಿಯಾಗಲು ಮತ ನೀಡಿ ಎಂದು ಸಿಎಂ ಯಡಿಯೂರಪ್ಪ ಕೇಳುತ್ತಾರೆ. ಜಾತಿ, ಧರ್ಮದ ಹೆಸರಿನಲ್ಲಿ, ಆಮೀಷವೊಡ್ಡಿ ಮತಯಾಚನೆ ಮಾಡುತ್ತಿರುವುದು ಚುನಾವಣಾ ಆಯೋಗದ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗವೂ ಆಡಳಿತ ವರ್ಗದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ವಿರುದ್ಧ ಸುಮೊಟೋ ಕೇಸ್ ಅನ್ನು ಆಯೋಗ ದಾಖಲಿಸಬಹುದು. ಆದರೂ ದಾಖಲು ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.Body:KN_DVG_01_27_SIDDU_BYTE_7203307

ನನ್ನನ್ನು ಕಂಡರೆ ಬಿಜೆಪಿ, ಜೆಡಿಎಸ್ ಗೆ ಭಯ, ಹಾಗಾಗಿ ನಾನೇ ಟಾರ್ಗೆಟ್ : ಸಿದ್ದರಾಮಯ್ಯ

ದಾವಣಗೆರೆ: ಬಿಜೆಪಿ, ಜೆಡಿಎಸ್ ನವರಿಗೆ ನನ್ನನ್ನು ಕಂಡರೆ ಭಯ. ಏನು ಬಲವಾದ ಕಾರಣ ಇಲ್ಲದೇ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಾರೆ ಹೇಳಿ. ಕಾಂಗ್ರೆಸ್ ನಲ್ಲಿ ಹಲವು ಮುಖಂಡರಿದ್ದಾರೆ. ಅವರನ್ನು ಬಿಟ್ಟು ನನ್ನ ಮೇಲೆ ಮುಗಿಬೀಳಲು ಉಪಚುನಾವಣೆಯಲ್ಲಿ ಸೋಲಿನ ಹೆದರಿಕೆ ಇರುವುದೇ ಕಾರಣ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ದಾವಣಗೆರೆ ಜಿಲೆಯ ಹರಿಹರ ಸಮೀಪದ ಕುಮಾರಪಟ್ಟಣಂನ ಗೆಸ್ಟ್ ಹೌಸ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕನಿಷ್ಠ ೧೨ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ೧೫ ಸ್ಥಾನಗಳಲ್ಲಿ ಗೆದ್ದರೂ ಅಚ್ಚರಿ ಏನಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಯದ್ವಾತದ್ವಾ ಹಣ ಖರ್ಚು ಮಾಡ್ತಿದೆ. ಚುನಾವಣೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ನಮ್ಮ ಬಳಿ ಹಣ ಇಲ್ಲ. ಮಂತ್ರಿ ಸ್ಥಾನ ನೀಡುತ್ತೇನೆ, ಅಭಿವೃದ್ಧಿ ಕೆಲಸ ಮಾಡುತ್ತೇನೆ. ದತ್ತು ಪಡೆಯುತ್ತೇನೆ. ಮಂತ್ರಿಯಾಗಲು ಮತ ನೀಡಿ ಎಂದು ಸಿಎಂ ಯಡಿಯೂರಪ್ಪ ಕೇಳುತ್ತಾರೆ. ಜಾತಿ, ಧರ್ಮದ ಹೆಸರಿನಲ್ಲಿ, ಆಮೀಷವೊಡ್ಡಿ ಮತಯಾಚನೆ ಮಾಡುತ್ತಿರುವುದು ಚುನಾವಣಾ ಆಯೋಗದ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಯೋಗವೂ ಆಡಳಿತ ವರ್ಗದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಸಿಎಂ ಯಡಿಯೂರಪ್ಪ ವಿರುದ್ಧ ಸುಮೊಟೋ ಕೇಸ್ ಅನ್ನು ಆಯೋಗ ದಾಖಲಿಸಬಹುದು. ಆದರೂ ದಾಖಲು ಮಾಡಿಲ್ಲ ಯಾಕೆ ಎಂದು ಪ್ರಶ್ನಿಸಿದರು.Conclusion:
Last Updated : Nov 27, 2019, 12:26 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.