ETV Bharat / state

ಮುಸ್ಲಿಮರ ವ್ಯಾಪಾರಕ್ಕೆ ಅಡ್ಡಿ.. ರಾಜ್ಯವಾಳುವ ಪ್ರತಿನಿಧಿಗಳು ತಕ್ಕ ಉತ್ತರ ನೀಡಬೇಕು.. ಸಾಮರಸ್ಯ ಜಪಿಸಿದ ಭೀಮಾಶಂಕರಲಿಂಗ ಶ್ರೀ - ಹಿಜಾಬ್ ಕುರಿತು ಭೀಮಾಶಂಕರಲಿಂಗ ಶಿವಾಚಾರ್ಯ ಹೇಳಿಕೆ

ಸಂವಿಧಾನದಲ್ಲಿ ಉಲ್ಲೇಖ ಆಗದೆ ಇರುವುದನ್ನು ನಾವು ಪರಂಪರೆಯಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ. ಜಾತಿ, ಧರ್ಮ, ನಮಸ್ಕಾರ ಮಾಡುವುದನ್ನು ಪರಂಪರೆಯಿಂದ ಆಚರಣೆ ಮಾಡ್ತಿದ್ದೇವೆ. ಪರಂಪರೆ ಮಾಡುವರನ್ನು ನಾವು ವಿರೋಧ ಮಾಡಲ್ಲ. ಇದನ್ನು ವಿರೋಧಿಸುತ್ತಿರುವವರು, ಪ್ರತಿಬಂಧ ಮಾಡುತ್ತಿರುವರನ್ನು ಕೇಳಿದ್ರೆ ಬಟ್ಟೆ( ಹಿಜಾಬ್)ಯನ್ನು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ಸಿಗುತ್ತದೆ ಎಂದು ಕೇದಾರನಾಥ ಜಗದ್ಗುರು ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು..

bhimashankarlinga-shivacharya-swamiji-spoke-on-hijab-issue
ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ
author img

By

Published : Mar 25, 2022, 5:16 PM IST

Updated : Mar 25, 2022, 10:09 PM IST

ದಾವಣಗೆರೆ : ಬಟ್ಟೆ (ಹಿಜಾಬ್) ಎಂಬುದು ಪರಂಪರೆಯಿಂದ‌, ರೂಢಿಯಿಂದ ಬಂದಿರುವುದು. ಪರಂಪರೆಗಳು ಕಾನೂನಿಗಿಂತ‌ ಶ್ರೇಷ್ಠವಾಗಿರುತ್ತವೆ ಎಂದು ಹಿಜಾಬ್ ಎಂದು ಹೇಳದೆ ಬಟ್ಟೆ ಎಂದು ಕೇದಾರನಾಥ ಜಗದ್ಗುರು ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಹೇಳಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ಉಲ್ಲೇಖ ಆಗದೆ ಇರುವುದನ್ನು ನಾವು ಪರಂಪರೆಯಿಂದ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದರು.

ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು

ಜಾತಿ, ಧರ್ಮ, ನಮಸ್ಕಾರ ಮಾಡುವುದನ್ನು ಪರಂಪರೆಯಿಂದ ಆಚರಣೆ ಮಾಡ್ತಿದ್ದೇವೆ. ಪರಂಪರೆ ಮಾಡುವವರನ್ನು ನಾವು ವಿರೋಧ ಮಾಡಲ್ಲ. ಇದನ್ನು ವಿರೋಧಿಸುತ್ತಿರುವವರು, ಪ್ರತಿಬಂಧ ಮಾಡುತ್ತಿರುವರನ್ನು ಕೇಳಿದ್ರೆ ಬಟ್ಟೆ(ಹಿಜಾಬ್) ಅನ್ನು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ಸಿಗುತ್ತದೆ. ಮುಸ್ಲಿಮರು ಕೂಡ ಶಿವನ ಭಕ್ತರು. ಅವರ ಪವಿತ್ರ ಕ್ಷೇತ್ರವಾದ ಮೆಕ್ಕಾ, ಮದೀನಾದಲ್ಲಿ ಕೆಳಗೆ ಶಿವಲಿಂಗವಿದೆ ಎಂದು ತಿಳಿಸಿದರು.

ಸಂವಿಧಾನ, ಕಾನೂನು ಬೇರೆ, ಧಾರ್ಮಿಕ ಪರಂಪರೆ ಬೇರೆ. ಶತಶತಮಾನಗಳಿಂದ ನಡೆದುಕೊಂಡು ಬಂದ ಪರಂಪರೆ ಈಗ ರಾಜ್ಯದಲ್ಲಿ ಮುಸ್ಲಿಂ ಸಮಾಜದವರಿಗೆ ವ್ಯಾಪಾರ ಮಾಡಲು ಅಡ್ಡಿಪಡಿಸುವ ವಿಚಾರ ಕೇಳಿ ಬರುತ್ತಿದೆ. ಇದಕ್ಕೆ ರಾಜ್ಯವಾಳುವ ಪ್ರತಿನಿಧಿಗಳು ಸೂಕ್ತ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಓದಿ: ಶುಲ್ಕ ಪಾವತಿಸದಿರುವ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ : ಸಚಿವ ಬಿ. ಸಿ ನಾಗೇಶ್‌

Last Updated : Mar 25, 2022, 10:09 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.