ದಾವಣಗೆರೆ: ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾ ಬಿಜೆಪಿ ವತಿಯಿಂದ ಬಾಗಿನ ಅರ್ಪಣೆ ಮಾಡಲಾಯ್ತು.
ಸಂಸದ ಜಿ. ಎಂ. ಸಿದ್ದೇಶ್ವರ್, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್. ಎ. ರವೀಂದ್ರನಾಥ್, ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ, ಎಂ. ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ನೀರಾವರಿ ತಜ್ಞ ನರಸಿಂಹಪ್ಪ ಸೇರಿದಂತೆ ಬಿಜೆಪಿ ನಾಯಕರು ಭದ್ರಾ ನದಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಭದ್ರಾ ಜಲಾಶಯ ತುಂಬಿರುವುದು ಸಂತಸ ತಂದಿದೆ. ಜನರು ನೀರನ್ನು ಮಿತವಾಗಿ ಬಳಸಬೇಕು. ಹನಿ ನೀರಿಗೂ ಬೆಲೆ ಇದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕಳೆದ ಎರಡ್ಮೂರು ವರ್ಷ ಬಿಟ್ಟರೆ ಈ ಬಾರಿಯೂ ಜಲಾಶಯ ತುಂಬಿದ್ದು, ದಾವಣಗೆರೆ ಜಿಲ್ಲೆಯ ಜನರಲ್ಲಿ ಖುಷಿ ತಂದಿದೆ ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು ಹೇಳಿದರು.
ಭದ್ರಾ ಜಲಾಶಯ ಜಿಲ್ಲೆಯ ಜನರ ಜೀವನಾಡಿ. ಇದು ಭರ್ತಿಯಾದರೆ ರೈತರ ಪಾಲಿಗೆ ವರದಾನ. ಕುಡಿಯುವ ನೀರಿನಿಂದ ಹಿಡಿದು ಎಲ್ಲದಕ್ಕೂ ಅವಶ್ಯಕವಾಗಿ ಬೇಕೇ ಬೇಕು. ಇನ್ನು ಅಕ್ರಮವಾಗಿ ಪಂಪ್ ಸೆಟ್ ಮೂಲಕ ನೀರು ಎತ್ತುವುದನ್ನು ಕೈಬಿಡಬೇಕು ಎಂಬ ಮನವಿಯನ್ನೂ ಕೂಡ ಮಾಡಲಾಯಿತು.