ದಾವಣಗೆರೆ: ಬೆಂಗಳೂರು ಗೃಹ ರಕ್ಷಕದಳ ಮತ್ತು ಪೌರ ರಕ್ಷಣಾ ತರಬೇತಿ ಅಕಾಡೆಮಿ ವತಿಯಿಂದ ಗೃಹ ರಕ್ಷಕಿಯರ ಪ್ರಥಮ ಚಿಕಿತ್ಸಾ ತರಬೇತಿ ಬೆಂಗಳೂರಿನಲ್ಲಿ ನಡೆದಿದೆ. ಈ ತರಬೇತಿಯಲ್ಲಿ ದಾವಣಗೆರೆ ಘಟಕದ ಗೃಹ ರಕ್ಷಕಿ ಅಲ್ಮಾಸ್ ಬೇಗಂ ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅಪಘಾತ ಇನ್ನಿತರೆ ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವ ಬಗೆ ಹೇಗೆ? ಎನ್ನುವ ತರಬೇತಿಯಲ್ಲಿ ಅಲ್ಮಾಸ್ ಬೇಗಂ ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ದ್ವಿತೀಯ ಸ್ಥಾನ ಹಾಗೂ ಪದಕ ಪಡೆದಿದ್ದಾರೆ.
ಕಮಾಂಡೆಂಟ್ ಡಾ.ಬಿ.ಹೆಚ್ ವೀರಪ್ಪ , ಬೋಧಕರಾದ ಜಿ.ಸಂದೀಪ್, ಸ್ಟಾಫ್ ಆಫೀಸರ್ ಕೆ.ಸರಸ್ವತಿ, ಘಟಕಾಧಿಕಾರಿ ಕೆ.ಎಸ್ ಅಮರೇಶ್, ಕಚೇರಿ ಸಿಬ್ಬಂದಿ ಹಾಗೂ ಜಿಲ್ಲೆಯ ಎಲ್ಲಾ ಸದಸ್ಯರು ಅಲ್ಮಾಸ್ ಬೇಗಂ ಅವರನ್ನು ಅಭಿನಂದಿಸಿದ್ದಾರೆ.