ETV Bharat / state

ದಾವಣಗೆರೆ: ತೀವ್ರತೆ ಪಡೆದ ಬೇಡ ಜಂಗಮ ಹೋರಾಟ - ನಕಲಿ ಎಸ್​ಸಿ ಜಾತಿ ಪ್ರಮಾಣ ಪತ್ರ

ಬೇಡ ಜಂಗಮ ಎಂದು ಹೇಳಿ ನಕಲಿ ಎಸ್​ಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ದಲಿತ ಮುಖಂಡರು ದ್ವಾರಕೇಶ್ವರಯ್ಯ ಅವರಿಗೆ ಮುತ್ತಿಗೆ ಹಾಕಿದ್ದರು. ಘಟನೆ ಹಿನ್ನೆಲೆಯಲ್ಲಿ 13 ಜನ ದಲಿತ ಮುಖಂಡರ ವಿರುದ್ಧ ದೂರು ದಾಖಲಾಗಿದೆ. ಇದರಿಂದ ಆಕ್ರೋಶಗೊಂಡ ದಲಿತ ಮುಖಂಡರು, ತಾವು ಕೂಡ ಪ್ರತಿ ದೂರು ನೀಡಲು ಮುಂದಾಗಿದ್ದು ಪೊಲೀಸರು ತಮ್ಮ ದೂರು ದಾಖಲಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

beda jangam community protest
ಪೊಲೀಸ್​ ಠಾಣೆ ಮುಂಭಾಗ ಧರಣಿ ಕುಳಿತ ದಲಿತ ಮುಖಂಡರು
author img

By

Published : Apr 3, 2022, 11:14 AM IST

ದಾವಣಗೆರೆ: ಬೇಡ ಜಂಗಮ ಹೋರಾಟ ಮುಗಿಯುವಂತೆ ಕಾಣುತ್ತಿಲ್ಲ. ಸದನದಲ್ಲಿ ಪ್ರಾರಂಭವಾದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸುಳ್ಳು ಜಾತಿ ಪ್ರಮಾಣ ಪತ್ರಗಳ ವಿರೋಧಿ ಹೋರಾಟ ಬೆಣ್ಣೆ ನಗರಿಯಲ್ಲಿ ತೀವ್ರತೆ ಪಡೆದುಕೊಂಡಿದೆ. ಈ ಹೋರಾಟದಲ್ಲಿ ಕೊಲೆ ಯತ್ನ, ಬೆದರಿಕೆ, ಜಾತಿ ನಿಂದನೆ ಆರೋಪ ಸಹ ಕೇಳಿಬಂದಿದೆ.

ಮಾರ್ಚ್​ 28ರಂದು ದಾವಣಗೆರೆ ಪ್ರೆಸ್ ಕ್ಲಬ್ ಎದುರು ಎಂ.ಪಿ.ರೇಣುಕಾಚಾರ್ಯ ಸಹೋದರ ದ್ವಾರಕೇಶ್ವರಯ್ಯ ಎಂಬವರಿಗೆ, ದಲಿತ ಸಂಘಟನೆಗಳು ನಕಲಿ ಎಸ್​ಸಿ ಪ್ರಮಾಣ ಪತ್ರ ಪಡೆದಿದ್ದಾರೆಂದು ಪ್ರಶ್ನಿಸಿ, ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಅವರು 13 ಜನ ದಲಿತ ಮುಖಂಡರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ದಲಿತ ಮುಖಂಡರು, ತಾವು ಕೂಡ ಪ್ರತಿ ದೂರು ನೀಡಲು ಮುಂದಾಗಿದ್ದು ಪೊಲೀಸರು ತಮ್ಮ ದೂರು ದಾಖಲಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ, ರಾಜಕೀಯ ಒತ್ತಡದಿಂದ ಎಫ್​ಐಆರ್ ದಾಖಲು ಮಾಡುತ್ತಿಲ್ಲ ಎಂದು ದಲಿತ‌ ಮುಖಂಡ ಡಾ. ವೈ.ರಾಮಪ್ಪ ಆರೋಪಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ಕೂಡ ನಡೆದಿದೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಸುದ್ದಿಗೋಷ್ಠಿ ‌ನಡೆಸಲು ದಿನಾಂಕ ನಿಗದಿ ಮಾಡಲು ಹೋಗುತ್ತಿದ್ದ ಸಂದರ್ಭದಲ್ಲಿ ದಲಿತ ಮುಖಂಡ ತಿಮ್ಮಣ್ಣ ಎನ್ನುವರ ಮೇಲೆ ದ್ವಾರಕೇಶ್ವರಯ್ಯರ ಸಹಚರರು ಕಾರು ಚಲಾಯಿಸಿಕೊಂಡು ಬಂದು ಕುತ್ತಿಗೆ ಹಿಡಿದು ಕೊಲೆ ಮಾಡಲು ಯತ್ನಿಸಿ, ಜಾತಿ ನಿಂದನೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ದೂರು ನೀಡಲು ಹೋದಾಗ ಸಿಪಿಐ ಗುರುಬಸವರಾಜ್ ಕೂಡ ರಾಜಕೀಯ ಪ್ರಭಾವಕ್ಕೆ ಒಳಗಾಗಿ, ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ, ಆವರ ಮೇಲೂ ಸಹ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ. ದೂರು ದಾಖಲಾಗುವವರೆಗೂ ಪ್ರತಿಭಟನೆ ಮಾಡುವುದಾಗಿ ದಲಿತ ಮುಖಂಡರು ಧರಣಿ ಕುಳಿತಿದ್ದಾರೆ.

ಇದನ್ನೂ ಓದಿ; 13 ದಲಿತ ಮುಖಂಡರ ವಿರುದ್ಧ ದೂರು ಸಲ್ಲಿಸಿದ ಶಾಸಕ ರೇಣುಕಾಚಾರ್ಯ ಸಹೋದರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.