ETV Bharat / state

ಕೋವಿಡ್​ ಸೋಂಕಿತರ ಚಿಕಿತ್ಸೆಗೆ ತಮ್ಮ ಒಡೆತನದ ಆಸ್ಪತ್ರೆ ನೀಡಿದ ರೇಣುಕಾಚಾರ್ಯ - ಶಾಸಕ ಎಂ.ಪಿ. ರೇಣುಕಾಚಾರ್ಯ

ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಶಿವಮೊಗ್ಗದಲ್ಲಿರುವ ತಮ್ಮ ಒಡೆತನದ ಬಾಪೂಜಿ ಆಯುರ್ವೇದಿಕ್ ಕಾಲೇಜು ಹಾಗೂ ಆಸ್ಪತ್ರೆ ಸೇರಿದಂತೆ ಒಂದು ಆ್ಯಂಬುಲೆನ್ಸ್ ಅನ್ನು ಸಾರ್ವಜನಿಕ ಸೇವೆಗೆ ನೀಡಿದ್ದಾರೆ. ಜತೆಗೆ ಕೋವಿಡ್​​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಧನಸಹಾಯ ಘೋಷಿಸಿದ್ದಾರೆ.

MLA MP Renukacharya
ಬಾಪೂಜಿ ಆಯುರ್ವೇದ ಕಾಲೇಜು ಕೋವಿಡ್​ ಸೋಂಕಿತರಿಗೆ ಮೀಸಲು
author img

By

Published : May 17, 2021, 7:38 AM IST

ದಾವಣಗೆರೆ: ಕೊರೊನಾ ಸೋಂಕಿನಿಂದ ಮೃತಪಟ್ಟ ಕಡುಬಡವರ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ 9 ಸಾವಿರ ರೂ. ಧನಸಹಾಯ ನೀಡುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

ಬಾಪೂಜಿ ಆಯುರ್ವೇದ ಕಾಲೇಜು ಕೋವಿಡ್​ ಸೋಂಕಿತರಿಗೆ ಮೀಸಲು: ಎಂಪಿ ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತ್ಯಸಂಸ್ಕಾರಕ್ಕೆ 4 ಸಾವಿರ ರೂ ಪಿಪಿಇ ಕಿಟ್​ಗೆ ಹಾಗೂ 5 ಸಾವಿರ ರೂ. ಮೃತ ಕುಟುಂಬಕ್ಕೆ ಧನಸಹಾಯ ಘೋಷಿಸಿದರು. ಇದಲ್ಲದೆ ಶಿವಮೊಗ್ಗದಲ್ಲಿರುವ ತಮ್ಮ ಒಡೆತನದ ಬಾಪೂಜಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ಸೇರಿದಂತೆ ಒಂದು ಆ್ಯಂಬುಲೆನ್ಸ್ ಅ​ನ್ನು ಸಾರ್ವಜನಿಕ ಸೇವೆಗೆ ನೀಡಿದರು.

ಈ ಆಸ್ಪತ್ರೆ 100 ಬೆಡ್​​ಗಳ ಸಾಮರ್ಥ್ಯ ಹೊಂದಿದ್ದು, ದಾವಣಗೆರೆ ಜಿಲ್ಲೆಯ ನ್ಯಾಮತಿ ಹಾಗೂ ಹೊನ್ನಾಳಿ ಭಾಗದ ಜನರಿಗೆ ಅನುಕೂಲವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.