ETV Bharat / state

ದಾವಣಗೆರೆಗೆ ಕೊರೊನಾ ಕಾಲಿಡಲು ಈರುಳ್ಳಿ ವ್ಯಾಪಾರಿ ಕಾರಣನಾ? - davangere corona updates

ನ್ನೂ ನಾಲ್ಕು ಸ್ಯಾಂಪಲ್ ಬರಬೇಕು. ಬಂದ ಮೇಲಷ್ಟೇ ಗೊತ್ತಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು. 556 ಹಾಗೂ 533 ಸೋಂಕಿತರ ಕುಟುಂಬದವರಿಗೆ ಸೋಂಕು ಹೆಚ್ಚಾಗಿ ತಗುಲುವ ಸಾಧ್ಯತೆ ಇದೆ.

bairathi basavraj reaction on corona
ಸಚಿವ ಭೈರತಿ ಬಸವರಾಜ್​ ಹೇಳಿಕೆ
author img

By

Published : May 5, 2020, 12:08 PM IST

ದಾವಣಗೆರೆ : ಕಳೆದ ನಾಲ್ಕೈದು ದಿನಗಳಿಂದ ದಾವಣಗೆರೆಯಲ್ಲಿ ಅಟ್ಟಹಾಸ ತೋರುತ್ತಿರುವ ಕೊರೊನಾ ಸೋಂಕು ಜಿಲ್ಲೆಗೆ ಕಾಲಿಡಲು ಈರುಳ್ಳಿ ವ್ಯಾಪಾರಿ ಬಾಗಲಕೋಟೆಗೆ ಹೋಗಿ ಬಂದಿದ್ದೇ ಕಾರಣವೇ ಎಂಬ ಅನುಮಾನ ಈಗ ಕಾಡತೊಡಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್​..
ಈರುಳ್ಳಿ ವ್ಯಾಪಾರಿ ಬಾಗಲಕೋಟೆಗೆ ಹೋಗಿ ಬಂದು ಇಲ್ಲಿ ವ್ಯಾಪಾರ ಮಾಡುವ ವೇಳೆ ಈ ಸೋಂಕು ಬಂದಿರಬಹುದು. ಎಸ್ಪಿ ಹನುಮಂತರಾಯ ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೂ ನಾಲ್ಕು ಸ್ಯಾಂಪಲ್ ಬರಬೇಕು. ಬಂದ ಮೇಲಷ್ಟೇ ಗೊತ್ತಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹೇಳಿದರು. 556 ಹಾಗೂ 533 ಸೋಂಕಿತರ ಕುಟುಂಬದವರಿಗೆ ಸೋಂಕು ಹೆಚ್ಚಾಗಿ ತಗುಲುವ ಸಾಧ್ಯತೆ ಇದೆ. ಒಂದೊಂದಕ್ಕೂ ಲಿಂಕ್ ಇರುತ್ತದೆ. ಹಾಗಾಗಿ ಸೋಂಕಿನ ಮೂಲ ಹುಡುಕುವುದು ಕಷ್ಟವಾಗ್ತಿದೆ. ಸೋಂಕಿತರು ಸರಿಯಾಗಿ ಮಾಹಿತಿ ನೀಡಿದರೆ ಆದಷ್ಟು ಬೇಗ ಪತ್ತೆ ಮಾಡಬಹುದು. ಇಲ್ಲದಿದ್ದರೆ ಕಷ್ಟ ಆಗುತ್ತೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಮೃತಪಟ್ಟ ವೃದ್ದನ ಸೊಸೆ ಗುಜರಾತ್‌ಗೆ ಹೋಗಿ ಬಂದ ಹಿನ್ನೆಲೆ ಸೋಂಕು ಬಂದಿರಬಹುದಾ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ‌ ಎಂದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.