ದಾವಣಗೆರೆ: ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಬೆಣ್ಣೆನಗರಿ ದಾವಣಗೆರೆಯ ಅರ್ಜುನ್ ಹಲಕುರ್ಕಿ ಯಶಸ್ವಿಯಾಗಿದ್ದಾರೆ.

ಅರ್ಜುನ್ ಹಲಕುರ್ಕಿ ದಾವಣಗೆರೆ ಕ್ರೀಡಾ ಹಾಸ್ಟೆಲ್ನ ಕುಸ್ತಿಪಟುವಾಗಿದ್ದು, ಚಿನ್ನದ ಪದಕ ಗೆಲ್ಲುವ ಮೂಲಕ ಪ್ರೀ ಒಲಿಂಪಿಕ್ ಕ್ಯಾಂಪ್ಗೆ ಆಯ್ಕೆಯಾಗಿದ್ದಾರೆ. ಪಂಜಾಬ್ನ ಜಲಂಧರ್ನಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅರ್ಜುನ್ ಎದುರಾಳಿ ಹರಿಯಾಣದ ವಿಜಯ್ ಎಂಬ ಪೈಲ್ವಾನ್ನನ್ನು ಮಣಿಸಿದರು.
ಸೋಲು ಕಂಡಿರುವ ವಿಜಯ್ ವಿರುದ್ಧ ಅರ್ಜುನ್ 12-02ರ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು. ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ನಲ್ಲಿ ಪಾಲ್ಗೊಳ್ಳುವ ಭಾರತದ ಕುಸ್ತಿಪಟುಗಳ ಇಂಡಿಯನ್ ಕ್ಯಾಂಪ್ಗೆ ಆಯ್ಕೆಯಾಗಿ ಮತ್ತೊಂದು ಇತಿಹಾಸ ಬರೆದರು. ಅರ್ಜುನ್ ಗೆಲುವು ಸಾಧಿಸಿ ಕುಸ್ತಿಪಟುಗಳ ಇಂಡಿಯನ್ ಕ್ಯಾಂಪ್ಗೆ ಆಯ್ಕೆಯಾಗಿದ್ದರಿಂದ ಕ್ರೀಡಾ ಹಾಸ್ಟೆಲ್ನ ಸಿಬ್ಬಂದಿ ಹಾಗೂ ಸ್ನೇಹಿತರ ಸಂತಸ ಮುಗಿಲು ಮುಟ್ಟಿತ್ತು.