ETV Bharat / state

ನಮ್ಮ ಜೀವವಿರುವವರೆಗೂ ಅಂಬೇಡ್ಕರ್ ಅವರನ್ನು ಮರೆಯಬಾರದು: ಶಾಸಕ ಎಸ್.ರಾಮಪ್ಪ

author img

By

Published : Apr 15, 2020, 8:10 AM IST

ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮದಿನಾಚರಣೆ ಆಚಿಸಲಾಯಿತು. ಶಾಸಕ ಎಸ್. ರಾಮಪ್ಪ ಹಾಗೂ ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಅಂಬೇಡ್ಕರ್ ಕುರಿತು ಮಾತನಾಡಿದರು.

ambedkar jayanti
ambedkar jayanti

ಹರಿಹರ: ನಾವು ನಿಜವಾದ ಭಾರತೀಯರಾದರೆ ನಮ್ಮ ಜೀವವಿರುವವರೆಗೂ ಡಾ.ಅಂಬೇಡ್ಕರ್ ಅವರನ್ನು ಮರೆಯಬಾರದು ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.

ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 129ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಭಾಗಿಯಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸರು, ಅಂಬೇಡ್ಕರ್ ಕಡುಬಡತನದಲ್ಲಿ ಜನಿಸಿದ್ದರೂ ಸಹ ತಮ್ಮ ದೃಢವಾದ ಸಂಕಲ್ಪದಿಂದ ದೇಶ-ವಿದೇಶಗಳಲ್ಲಿ ಓದಿ ವಿದ್ಯಾವಂತರಾಗಿದ್ದರು.

ಕೆಳವರ್ಗದ ಸಮುದಾಯಗಳಿಗೆ ಮುಂದೆ ಒಳ್ಳೆಯದನ್ನು ಮಾಡಬೇಕು ಎಂಬ ಸಂಕಲ್ಪದಿಂದ ವಿದ್ಯಾವಂತರಾದ ಅವರು ವಿಶ್ವದಲ್ಲಿಯೇ ಅಗ್ರಗಣ್ಯವಾದ ನಮ್ಮ ಭಾರತದ ಸಂವಿಧಾನವನ್ನು ರಚನೆ ಮಾಡಿ ಇಂದು ಪ್ರಪಂಚದಲ್ಲಿ ಹೆಸರು ಗಳಿಸಿದ್ದಾರೆ. ಅವರಂತಹ ವ್ಯಕ್ತಿ ಈ ಹಿಂದೆ ಹುಟ್ಟಿಲ್ಲ, ಮುಂದೆಯೂ ಸಹ ಹುಟ್ಟುವುದಿಲ್ಲ ಎಂದು ಹೇಳಿದರು.

ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ ಮಾತನಾಡಿ, ಅಂಬೇಡ್ಕರ್ ವ್ಯಕ್ತಿಯಲ್ಲ ದೇಶದ ಆಸ್ತಿಯಾಗಿದ್ದರು. ಆಧುನಿಕ ಸರ್ಕಾರ, ಅಧಿಕಾರಿಗಳು, ಜನಸಾಮಾನ್ಯರ ಕರ್ತವ್ಯ ಈ ಎಲ್ಲದರ ಬಗ್ಗೆ ಅನುಷ್ಠಾನಗೊಳಿಸಲು ಬರೆದ ಸಂವಿಧಾನ ಇಂದು ವಿಶ್ವಮಾನ್ಯತೆ ಪಡೆದಿದ್ದು, ಇಂದು ದೇಶ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ ಎಂದರು.

ಇಂದಿನ ಆಧುನಿಕ ಭಾರತವು ಅವರ ದೂರ ದೃಷ್ಟಿಯಿಂದ ರಚಿಸಲ್ಪಟ್ಟ ಸಂವಿಧಾನದ ಆಧಾರದಲ್ಲಿಯೇ ನಡೆಯುತ್ತಿದೆ ಎನ್ನುವುದು ಸತ್ಯವಾದ ವಿಚಾರವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ಅಂದಿನ ದಿನಗಳಲ್ಲಿಯೇ ಅವರು ಅನೇಕ ವಿಷಯಗಳನ್ನು ಸಂವಿಧಾನದಲ್ಲಿ ಅಳವಡಿಸಿ ಬರೆದಿದ್ದಾರೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.