ದಾವಣಗೆರೆ: ಪ್ರತ್ಯೇಕ ಧರ್ಮ ವಿಚಾರವಾಗಿ ಎಂ ಬಿ ಪಾಟೀಲ್ ಹಾಗೂ ಡಿಕೆಶಿ ಅವರ ಆರೋಪ ಪ್ರತ್ಯಾರೋಪ ಹಿನ್ನಲೆ ಪ್ರತಿಕ್ರಿಯಿಸಿರುವ ಡಾ. ಶಾಮನೂರು ಶಿವಶಂಕರಪ್ಪ ನಾನು ವೀರಶೈವ ಮಹಾಸಭಾಕ್ಕೆ ಅಧ್ಯಕ್ಷ, ನಾನು ಹೇಳಿದಂತೆ ನಡೆಯೋದು ಎಂದು ಖಡಕ್ಕಾಗಿ ಹೇಳಿದ್ದಾರೆ.
ಜಿಲ್ಲೆಯ ತುರ್ಚಘಟ್ಟ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ ಬಿ ಮಂಜಪ್ಪ ಪರ ಮತಯಾಚನೆ ಬಳಿಕ ಮಾತನಾಡಿದ ಅವರು, ವೀರಶೈವ-ಲಿಂಗಾಯಿತ ಒಂದೇ ನಾಣ್ಯದ ಎರಡು ಮುಖಗಳು, ಎರಡು ಒಂದೇ ಎಂದರು.
ವೋಟು ಒಡೆಯಲು ಕಾಂಗ್ರೆಸ್ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕೈಗೆತ್ತಿಗೊಂಡಿತ್ತು ಎಂಬ ಬಿಎಸ್ವೈ ಆರೋಪಕ್ಕೂ ಪ್ರತಿಕ್ರಿಯಿಸಿದ ಶಾಮನೂರು ಅವರು, ಬಿಎಸ್ವೈ ಕೂಡ ಸ್ವತಂತ್ರರು, ಯಾವ ಪಕ್ಷದ ಪರವಾಗಿ, ವಿರೋಧವಾಗಿ ಹೇಳಿಕೆ ನೀಡಬಹುದು. ಚುನಾವಣೆ ಮುಗಿದ ಬಳಿಕ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಮಾತನಾಡುತ್ತೇನೆ ಎಂದರು.