ETV Bharat / state

ಆಗದು ಎಂದು ಸುಮ್ಮನೇ ಕುಳಿತರೆೆ ಏನೂ ಆಗದು.. ಸಾಧ್ಯವೆಂದ್ರೇ ಎಲ್ಲವೂ ಸಾಧ್ಯ ಅಂತಾರೆ ಉಪೇಂದ್ರ - etv bharat

ಹಣ ಖರ್ಚು ಮಾಡದೇ ಚುನಾವಣೆ ಎದುರಿಸಬೇಕು ಅನ್ನೋದು ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ, ನಟ ಉಪೇಂದ್ರ ಅವರ ಗುರಿ. ಅದರಂತೆ ಅವರು ಈವರೆಗೂ ನಡೆದುಕೊಂಡಿದ್ದಾರೆ. ತಾವು ಯಾಕೆ ಈ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿಲ್ಲ ಅನ್ನೋದನ್ನೂ ಉಪೇಂದ್ರ ಹೇಳಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ಎ ಗಣೇಶ್.
author img

By

Published : Apr 10, 2019, 5:13 PM IST

ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಏಕೆ ಸ್ಪರ್ಧಿಸುತ್ತಿಲ್ಲ ಅನ್ನೋದು ಯಾರಿಗಾದರೂ ಗೊತ್ತಾ? ಈ ಪ್ರಶ್ನೆಗೆ ಸ್ವತಃ ಅವರೇ ಉತ್ತರ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪೇಂದ್ರ, ನಾನು ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಪರ ಯಾರು ಪ್ರಚಾರ ನಡೆಸುತ್ತಾರೆ? ನಾನೇ ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿಲ್ಲ ಎಂದು ಹೇಳುವ ಮೂಲಕ ಚುನಾವಣೆಗೆ ಯಾಕೆ ತಾವು ಸ್ಪರ್ಧಿಸಲಿಲ್ಲ ಅನ್ನೋದನ್ನ ಬಹಿರಂಗಪಡಿಸಿದರು.

ಸಿನಿಮಾ‌ದವರಿಂದ ಬದಲಾವಣೆಯಾಗದು :

ಸಿನಿಮಾ‌ ಕಲಾವಿದರು ಪ್ರಚಾರಕ್ಕೆ ಬಂದು ಹೇಳಿದರೆ ಬದಲಾವಣೆ ಆಗದು. ಆಗ ನಮ್ಮ ಸ್ವಂತಿಕೆ ಏನೂ ಇರುವುದಿಲ್ಲ. ಉಪೇಂದ್ರ ಎಲ್ಲಿ ಸ್ಪರ್ಧಿಸುತ್ತಾರೆ, ಪ್ರಿಯಾಂಕಾ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಮುಖ್ಯವಲ್ಲ. ಬದಲಾವಣೆ ಆಗಬೇಕು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವವರು ಆಯ್ಕೆಯಾಗಬೇಕು. ಕೆಲಸ ಮಾಡುವವರು ಆರಿಸಿ ಬರಬೇಕು ಎಂಬ ಅಪೇಕ್ಷೆ ನಮ್ಮದು. ಇದೆಲ್ಲಾ ಆದಷ್ಟು ಬೇಗ ಆಗದು ಎಂಬುದು ಗೊತ್ತಿದೆ. ಆದರೆ, ಸಾಕಷ್ಟು ಸಮಯಾವಕಾಶ ಬೇಕು. ನಮ್ಮಿಂದಾಗದು ಎಂದರೆ ಆಗದು. ಪ್ರಯತ್ನಪಟ್ಟರೆ ಎಲ್ಲವೂ ಸುಲಭವಾಗುತ್ತದೆ ಎಂದು ಉಪೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ ಎ ಗಣೇಶ್.

ಬಳ್ಳಾರಿಯಲ್ಲಿ ಮಾತ್ರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಮಂಡ್ಯದಲ್ಲಿ ನಾವು ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅಲ್ಲಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.‌ ನಮ್ಮ ಪಕ್ಷದ ಅಭ್ಯರ್ಥಿಗಳೇ ನಮಗೆ ಮುಖ್ಯ. ಹಾಗಾಗಿ ನಾನು ಅಖಾಡಕ್ಕೆ ಧುಮುಕಿಲ್ಲ. ಹೋದ ಕಡೆಗಳಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದು, ಇದು ಖುಷಿ ತಂದಿದೆ ಎಂದರು.

ರೋಡ್ ಶೋ, ಜಾಥಾ, ಸಭೆ ಸಮಾರಂಭಗಳನ್ನು ನಮ್ಮ ಅಭ್ಯರ್ಥಿಗಳು ನಡೆಸುವುದಿಲ್ಲ. ನಮ್ಮದೇನಿದ್ದರೂ ಕೇವಲ 30 ರಿಂದ 40 ಸಾವಿರ ಮಾತ್ರ ಚುನಾವಣೆ ಖರ್ಚು. ಚುನಾವಣಾ ಆಯೋಗ 70 ಲಕ್ಷಕ್ಕೆ ವೆಚ್ಚ ನಿಗದಿಪಡಿಸಿದ್ದರೂ 70 ಕೋಟಿ ರೂಪಾಯಿವರೆಗೂ ಖರ್ಚು ಮಾಡಲಾಗುತ್ತಿದೆ. ಇದೇನೂ ಗುಟ್ಟಾಗಿ ಉಳಿದಿಲ್ಲ.‌ ಜನಸಾಮಾನ್ಯರಿಗೆ ತೊಂದರೆ ಆಗದ ಹಾಗೆ ಚುನಾವಣೆ ನಡೆಸಬೇಕೆಂಬ ಉದ್ದೇಶ ನಮ್ಮದು. ಈ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದು ತಿಳಿಸಿದರು.

ಯಾವುದೇ ಫಂಡ್ ನೀಡಿಲ್ಲ:

ಉತ್ತಮ ಪ್ರಜಾಕೀಯ ಪಕ್ಷದ ಯಾವುದೇ ಅಭ್ಯರ್ಥಿಗಳಿಗೆ ಪಕ್ಷವು ಫಂಡ್ ನೀಡಿಲ್ಲ. ಎಲ್ಲಾ ಖರ್ಚಅನ್ನು ಅವರೇ ಭರಿಸುತ್ತಾರೆ.‌ ಪಾಂಪ್ಲೆಟ್, ಮಾಧ್ಯಮ, ಸೋಷಿಯಲ್ ಮೀಡಿಯಾ ಮೂಲಕ ಪ್ರಚಾರ ನಡೆಸುತ್ತಿದ್ದೇವೆ. ಹಣ ಖರ್ಚು ಮಾಡಿ ಚುನಾವಣೆ ಎದುರಿಸುವುದಕ್ಕೆ ನಮ್ಮ ವಿರೋಧವಿದೆ. ಜನರಿಗೆ ಗೆದ್ದ ಬಳಿಕ ಸುಲಭವಾಗಿ ಕೈಗೆ ಸಿಗಬೇಕು. ಅವರ ಕೆಲಸ ಮಾಡಿಕೊಡುವ ನಾಯಕ ಬೇಕು. ದಾವಣಗೆರೆಯಿಂದ ಬಿ.ಎ. ಗಣೇಶ್ ಕಣಕ್ಕಿಳಿದಿದ್ದು, ಅಭ್ಯರ್ಥಿಯ ಪ್ರಚಾರಕ್ಕೆ ನಾನೇ ಬಂದಿದ್ದೇನೆ. ಎಲ್ಲಾ ಕಡೆಗಳಲ್ಲಿಯೂ ನಾನೇ ಹೋಗಿ ಕ್ಯಾಂಪೇನ್ ಮಾಡುತ್ತೇನೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪ್ಪಿ ಅಭಿಮಾನಿಗಳ ದಂಡು !

ಉಪೇಂದ್ರ ಪತ್ರಿಕಾಗೋಷ್ಠಿಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಆಗಮಿಸಿದ್ದರು.‌ ಈ ವೇಳೆ ಉಪ್ಪಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ತಾ ಮುಂದು ನಾ ಮುಂದು ಅಂತಾ ಮುಗಿಬಿದ್ದರು.‌ ಉಪ್ಪಿ ಕಣ್ತುಂಬಿಕೊಂಡ ಖುಷಿ ಕೆಲವರದ್ದು ಆದರೆ, ಮತ್ತೆ ಕೆಲವರು ಹೌದು ಹೌದು ಎಂದು ಹೇಳುವ ಮೂಲಕ ತಮ್ಮ ನೆಚ್ಚಿನ ನಾಯಕ ಉಪ್ಪಿ ಮಾತುಗಳನ್ನು ಆಲಿಸಿದರು.

Intro:ರಿಪೋರ್ಟರ್: ಯೋಗರಾಜ್

ಚುನಾವಣೆಯಲ್ಲಿ ಸ್ಪರ್ಧಿಸದಿರುವುದಕ್ಕೆ ಉಪ್ಪಿ ಕೊಟ್ಟ ಕಾರಣ ಏನು ಗೊತ್ತಾ...?

ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಟ ಉಪೇಂದ್ರ ಯಾಕೆ ಸ್ಪರ್ಧಿಸಿಲ್ಲ ಗೊತ್ತಾ...? ಈ ಪ್ರಶ್ನೆಗೆ ಸ್ವತಃ ಸೂಪರ್ ಸ್ಟಾರ್ ಉತ್ತರ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಉಪೇಂದ್ರ, ನಾನು ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯದ ೨೭ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಪರ ಯಾರು ಪ್ರಚಾರ ನಡೆಸುತ್ತಾರೆ. ನಾನೇ ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿಲ್ಲ ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸದಿರುವ ಕುರಿತ ಗುಟ್ಟು ಬಹಿರಂಗಪಡಿಸಿದರು.

ಸಿನಿಮಾ‌ ಕಲಾವಿದರು ಪ್ರಚಾರಕ್ಕೆ ಬಂದು ಹೇಳಿದರೆ ಬದಲಾವಣೆ ಆಗದು. ಆಗ ನಮ್ಮ ಸ್ವಂತಿಕೆ ಏನೂ ಇರುವುದಿಲ್ಲ. ಉಪೇಂದ್ರ ಎಲ್ಲಿ ಸ್ಪರ್ಧಿಸುತ್ತಾರೆ, ಪ್ರಿಯಾಂಕಾ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಮುಖ್ಯವಲ್ಲ, ಬದಲಾವಣೆ ಆಗಬೇಕು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವವರು ಆಯ್ಕೆಯಾಗಬೇಕು. ಕೆಲಸ ಮಾಡುವವರು ಆರಿಸಿ ಬರಬೇಕು ಎಂಬ ಅಪೇಕ್ಷೆ ನಮ್ಮದು. ಇದೆಲ್ಲಾ ಆದಷ್ಟು ಬೇಗ ಆಗದು ಎಂಬುದು ಗೊತ್ತಿದೆ. ಆದ್ರೆ ಸಾಕಷ್ಟು ಸಮಯಾವಕಾಶ ಬೇಕು. ನಮ್ಮಿಂದಾಗದು ಎಂದರೆ ಆಗದು. ಪ್ರಯತ್ನಪಟ್ಟರೆ ಎಲ್ಲವೂ ಸುಲಭವಾಗುತ್ತದೆ ಎಂದು ಉಪೇಂದ್ರ ಹೇಳಿದರು.

ಬಳ್ಳಾರಿಯಲ್ಲಿ ಮಾತ್ತ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಮಂಡ್ಯದಲ್ಲಿ ನಾವು ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅಲ್ಲಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.‌ ನಮ್ಮ ಪಕ್ಷದ ಅಭ್ಯರ್ಥಿಗಳೇ ನಮಗೆ ಮುಖ್ಯ. ಹಾಗಾಗಿ ನಾನು ಅಖಾಡಕ್ಕೆ ಧುಮುಕಿಲ್ಲ. ಹೋದ ಕಡೆಗಳಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದು, ಇದು ಖುಷಿ ತಂದಿದೆ ಎಂದರು.

ರೋಡ್ ಶೋ, ರ್ಯಾಲಿ, ಸಭೆ ಸಮಾರಂಭಗಳನ್ನು ನಮ್ಮ ಅಭ್ಯರ್ಥಿಗಳು ನಡೆಸುವುದಿಲ್ಲ. ನಮ್ಮದೇನಿದ್ದರೂ ಕೇವಲ ೩೦ ರಿಂದ ೪೦ ಸಾವಿರ ಮಾತ್ರ ಚುನಾವಣೆ ಖರ್ಚು. ಚುನಾವಣಾ ಆಯೋಗ ೭೦ ಲಕ್ಷಕ್ಕೆ ವೆಚ್ಚ ನಿಗದಿಪಡಿಸಿದ್ದರೂ ೭೦ ಕೋಟಿ ರೂಪಾಯಿವರೆಗೂ ಖರ್ಚು ಮಾಡಲಾಗುತ್ತಿದೆ. ಇದೇನೂ ಗುಟ್ಟಾಗಿ ಉಳಿದಿಲ್ಲ.‌ ಜನಸಾಮಾನ್ಯರಿಗೆ ತೊಂದರೆ ಆಗದ ಹಾಗೆ ಚುನಾವಣೆ ನಡೆಸಬೇಕೆಂಬ ಉದ್ದೇಶ ನಮ್ಮದು. ಈ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದು ತಿಳಿಸಿದರು.

ಯಾವುದೇ ಫಂಡ್ ನೀಡಿಲ್ಲ

ಉತ್ತಮ ಪ್ರಜಾಕೀಯ ಪಕ್ಷದ ಯಾವ ಅಭ್ಯರ್ಥಿಗಳಿಗೆ ಪಕ್ಷವು ಫಂಡ್ ನೀಡಿಲ್ಲ. ಎಲ್ಲಾ ಖರ್ಚನ್ನು ಅವರೇ ಭರಿಸುತ್ತಾರೆ.‌ ಪಾಂಪ್ಲೆಟ್, ಮಾಧ್ಯಮ, ಸೋಷಿಯಲ್ ಮೀಡಿಯಾ ಮೂಲಕ ಪ್ರಚಾರ ನಡೆಸುತ್ತಿದ್ದೇವೆ. ಹಣ ಖರ್ಚು ಮಾಡಿ ಚುನಾವಣೆ ಎದುರಿಸುವುದಕ್ಕೆ ನಮ್ಮ ವಿರೋಧವಿದೆ. ಜನರಿಗೆ ಗೆದ್ದ ಬಳಿಕ ಸುಲಭವಾಗಿ ಕೈಗೆ ಸಿಗಬೇಕು. ಅವರ ಕೆಲಸ ಮಾಡಿಕೊಡುವ ನಾಯಕ ಬೇಕು. ದಾವಣಗೆರೆಯಿಂದ ಬಿ. ಎ. ಗಣೇಶ್ ಕಣಕ್ಕಿಳಿದಿದ್ದು, ಅಭ್ಯರ್ಥಿಯ ಪ್ರಚಾರಕ್ಕೆ ನಾನೇ ಬಂದಿದ್ದೇನೆ. ಎಲ್ಲಾ ಕಡೆಗಳಲ್ಲಿಯೂ ನಾನೇ ಹೋಗಿ ಕ್ಯಾಂಪೇನ್ ಮಾಡುತ್ತೇನೆ ಎಂದು ಹೇಳಿದರು.

Body:ಚುನಾವಣೆಯಲ್ಲಿ ಸ್ಪರ್ಧಿಸದಿರುವುದಕ್ಕೆ ಉಪ್ಪಿ ಕೊಟ್ಟ ಕಾರಣ ಏನು ಗೊತ್ತಾ...?

ದಾವಣಗೆರೆ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನಟ ಉಪೇಂದ್ರ ಯಾಕೆ ಸ್ಪರ್ಧಿಸಿಲ್ಲ ಗೊತ್ತಾ...? ಈ ಪ್ರಶ್ನೆಗೆ ಸ್ವತಃ ಸೂಪರ್ ಸ್ಟಾರ್ ಅವರೇ ಉತ್ತರ ಕೊಟ್ಟಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ಉಪೇಂದ್ರ, ನಾನು ಚುನಾವಣೆಗೆ ಸ್ಪರ್ಧಿಸಿದರೆ ರಾಜ್ಯದ ೨೭ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಪರ ಯಾರು ಪ್ರಚಾರ ನಡೆಸುತ್ತಾರೆ. ನಾನೇ ಎಲ್ಲಾ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಬೇಕು. ಈ ಹಿನ್ನೆಲೆಯಲ್ಲಿ ಚುನಾವಣಾ ಅಖಾಡಕ್ಕೆ ಧುಮುಕಿಲ್ಲ ಎಂದು ಹೇಳುವ ಮೂಲಕ ಚುನಾವಣೆಗೆ ಸ್ಪರ್ಧಿಸದಿರುವ ಕುರಿತ ಗುಟ್ಟು ಬಹಿರಂಗಪಡಿಸಿದರು.

ಸಿನಿಮಾ‌ ಕಲಾವಿದರು ಪ್ರಚಾರಕ್ಕೆ ಬಂದು ಹೇಳಿದರೆ ಬದಲಾವಣೆ ಆಗದು. ನನ್ನ ಬಳಿ ಬಂದು ಕೆಲವರು ಸಿನಿ ಸ್ಟಾರ್ ಗಳಿಂದ ಪ್ರಚಾರ ಮಾಡಿಸಿ ಎಂಬ ಸಲಹೆ ಕೊಟ್ಟರು. ಇದಕ್ಕೆ ನಾನು ಒಪ್ಪಲಿಲ್ಲ. ಕಲಾವಿದರು ಬಂದು ಹೇಳಿದರೆ ನಮ್ಮ ಸ್ವಂತಿಕೆ ಏನೂ ಇರುವುದಿಲ್ಲ. ಉಪೇಂದ್ರ ಎಲ್ಲಿ ಸ್ಪರ್ಧಿಸುತ್ತಾರೆ, ಪ್ರಿಯಾಂಕಾ ಎಲ್ಲಿ ಸ್ಪರ್ಧಿಸುತ್ತಾರೆ ಎಂಬುದು ಮುಖ್ಯವಲ್ಲ, ಬದಲಾವಣೆ ಆಗಬೇಕು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವವರು ಆಯ್ಕೆಯಾಗಬೇಕು. ಕೆಲಸ ಮಾಡುವವರು ಆರಿಸಿ ಬರಬೇಕು ಎಂಬ ಅಪೇಕ್ಷೆ ನಮ್ಮದು. ಇದೆಲ್ಲಾ ಆದಷ್ಟು ಬೇಗ ಆಗದು ಎಂಬುದು ಗೊತ್ತಿದೆ. ಆದ್ರೆ ಇದಕ್ಕೆ ಸಾಕಷ್ಟು ಸಮಯಾವಕಾಶ ಬೇಕು. ನಮ್ಮಿಂದಾಗದು ಎಂದರೆ ಆಗದು. ಪ್ರಯತ್ನಪಟ್ಟರೆ ಎಲ್ಲವೂ ಸುಲಭವಾಗುತ್ತದೆ ಎಂದು ಉಪೇಂದ್ರ ಹೇಳಿದರು.

ಬಳ್ಳಾರಿಯಲ್ಲಿ ಮಾತ್ರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಮಂಡ್ಯದಲ್ಲಿ ನಾವು ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ಅಲ್ಲಿ ಬೇರೆಯವರ ಬಗ್ಗೆ ತಲೆಕೆಡಿಸಿಕೊಂಡಿಲ್ಲ.‌ ನಮ್ಮ ಪಕ್ಷದ ಅಭ್ಯರ್ಥಿಯೇ ನಮಗೆ ಮುಖ್ಯ. ಹಾಗಾಗಿ ನಾನು ಚುನಾವಣೆಯಲ್ಲಿ ಕಣಕ್ಕಿಳಿದಿಲ್ಲ. ಹೋದ ಕಡೆಗಳಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದು, ಇದು ಖುಷಿ ತಂದಿದೆ ಎಂದರು.

ರೋಡ್ ಶೋ, ರ್ಯಾಲಿ, ಸಭೆ ಸಮಾರಂಭಗಳನ್ನು ನಮ್ಮ ಅಭ್ಯರ್ಥಿಗಳು ನಡೆಸುವುದಿಲ್ಲ. ನಮ್ಮದೇನಿದ್ದರೂ ಕೇವಲ ೩೦ ರಿಂದ ೪೦ ಸಾವಿರ ಮಾತ್ರ ಚುನಾವಣೆ ಖರ್ಚು. ಚುನಾವಣಾ ಆಯೋಗ ೭೦ ಲಕ್ಷಕ್ಕೆ ನಿಗದಿಪಡಿಸಿದ್ದರೂ ೭೦ ಕೋಟಿ ರೂಪಾಯಿವರೆಗೂ ಖರ್ಚು ಮಾಡಲಾಗುತ್ತಿದೆ. ಇದೇನೂ ಗುಟ್ಟಾಗಿ ಉಳಿದಿಲ್ಲ.‌ ಜನಸಾಮಾನ್ಯರಿಗೆ ತೊಂದರೆ ಆಗದ ಹಾಗೆ ಚುನಾವಣೆ ನಡೆಸಬೇಕೆಂಬ ಉದ್ದೇಶ ನಮ್ಮದು. ಈ ದಾರಿಯಲ್ಲಿ ನಾವು ಸಾಗುತ್ತಿದ್ದೇವೆ ಎಂದು ತಿಳಿಸಿದರು.

ಯಾವುದೇ ಫಂಡ್ ನೀಡಿಲ್ಲ

ಉತ್ತಮ ಪ್ರಜಾಕೀಯ ಪಕ್ಷದ ಯಾವ ಅಭ್ಯರ್ಥಿಗಳಿಗೆ ಪಕ್ಷವು ಫಂಡ್ ನೀಡಿಲ್ಲ. ಎಲ್ಲಾ ಖರ್ಚನ್ನು ಅವರೇ ಭರಿಸುತ್ತಾರೆ.‌ ಪಾಂಪ್ಲೆಟ್, ಮಾಧ್ಯಮ, ಸೋಷಿಯಲ್ ಮೀಡಿಯಾ ಮೂಲಕ ಪ್ರಚಾರ ನಡೆಸುತ್ತಿದ್ದೇವೆ. ಹಣ ಖರ್ಚು ಮಾಡಿ ಚುನಾವಣೆ ಎದುರಿಸುವುದಕ್ಕೆ ನಮ್ಮ ವಿರೋಧವಿದೆ ಎಂದು ಹೇಳಿದರು.

ಜನರಿಗೆ ಗೆದ್ದ ಬಳಿಕ ಸುಲಭವಾಗಿ ಕೈಗೆ ಸಿಗಬೇಕು. ತುಂಬಾ ಬುದ್ದಿವಂತರಾಗಿರಬಾರದು. ಕಷ್ಟಕ್ಕೆ ಮರುಗುವ ಹೃದಯ ವೈಶಾಲ್ಯತೆ ಇರುವವರು ಬೇಕು. ಈ ಹಿನ್ನೆಲೆಯಲ್ಲಿ ದಾವಣಗೆರೆಯಿಂದ ಬಿ. ಎ. ಗಣೇಶ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಪ್ರಚಾರಕ್ಕೆ ನಾನೇ ಬಂದಿದ್ದೇನೆ. ಎಲ್ಲಾ ಕಡೆಗಳಲ್ಲಿಯೂ ನಾನೇ ಹೋಗಿ ಕ್ಯಾಂಪೇನ್ ಮಾಡುತ್ತೇನೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಉಪ್ಪಿ ಅಭಿಮಾನಿಗಳ ದಂಡು...!

ಉಪೇಂದ್ರ ಪತ್ರಿಕಾಗೋಷ್ಠಿಗೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ಆಗಮಿಸಿದ್ದರು.‌ ಈ ವೇಳೆ ಉಪ್ಪಿ ಜೊತೆ ಸೆಲ್ಫಿ ತೆಗೆದುಕೊಳ್ಳು ತಾ ಮುಂದು ನಾ ಮುಂದು ಅಂತಾ ಮುಗಿಬಿದ್ದರು.‌ ಉಪ್ಪಿ ಕಣ್ತುಂಬಿಕೊಂಡ ಖುಷಿ ಕೆಲವರದ್ದು ಆದರೆ, ಮತ್ತೆ ಕೆಲವರು ಹೌದು ಹೌದು ಎಂದು ಹೇಳುವ ಮೂಲಕ ತಮ್ಮ‌ ನೆಚ್ಚಿನ ನಾಯಕ ಉಪ್ಪಿ ಮಾತುಗಳನ್ನು ರುಚಿಸಿಕೊಂಡರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.