ETV Bharat / state

‘ಸೂರ್ಯನೊಬ್ಬ, ಚಂದ್ರನೊಬ್ಬ, ಆ ರಾಜನೂ ಒಬ್ಬ’.. ಹಾಡಿ ಅಭಿಮಾನಿಗಳನ್ನ ರಂಜಿಸಿದ್ದ ಅಪ್ಪು - ದಾವಣಗೆರೆ ಸುದ್ದಿ

ಪ್ರತಿ ವರ್ಷ ಪಂಚಮಸಾಲಿ ಮಠ ನಡೆಸುವ ಹರ ಜಾತ್ರೆಗೆ ಆಗಮಿಸುತ್ತಿದ್ದ ನಟ ಪುನೀತ್ ರಾಜ್​​ಕುಮಾರ್, ವೇದಿಕೆಯಲ್ಲಿ ಅಭಿಮಾನಿಗಳಿಗಾಗಿ ಹಾಡು ಹಾಡಿ ರಂಜಿಸಿದ್ದರು..

actor-puneeth-rajkumar-sings-for-his-fans-in-davangere
ದಾವಣಗೆರೆಯಲ್ಲಿ ಅಭಿಮಾನಿಗಳ ರಂಜಿಸಿದ್ದ ಅಪ್ಪು
author img

By

Published : Oct 30, 2021, 2:57 PM IST

ದಾವಣಗೆರೆ : ನಟ ಪುನೀತ್ ರಾಜ್‍ಕುಮಾರ್ ಕೋಟ್ಯಂತರ ಅಭಿಮಾನಿಗಳನ್ನು ಅಗಲಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಪುನೀತ್ ದಾವಣಗೆರೆಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಚನ್ನಗಿರಿ ತಾಲೂಕಿನ ಐತಿಹಾಸಿಕ ಸಂತೆಬೆನ್ನೂರು ಪುಷ್ಕರಣಿಗೆ ಭೇಟಿ ನೀಡಿದ್ದ ಅವರು ಸುಂದರ ಪುಷ್ಕರಣಿಯನ್ನು ಕಣ್ತುಂಬಿಕೊಂಡಿದ್ದರು.

‘ಸೂರ್ಯನೊಬ್ಬ, ಚಂದ್ರನು ಒಬ್ಬ, ಆ ರಾಜನೂ ಒಬ್ಬ’.. ಹಾಡಿನಿಂದ ಅಭಿಮಾನಿಗಳನ್ನ ರಂಜಿಸಿದ್ದ ಅಪ್ಪು

ಅವರ 'ದೊಡ್ಮನೆ ಹುಡುಗ' ಚಿತ್ರೀಕರಣಕ್ಕಾಗಿ ಜಿಲ್ಲೆಯ ಐತಿಹಾಸಿಕ ತಾಣವಾದ ಸಂತೆಬೆನ್ನೂರು ಪುಷ್ಕರಣಿಗೆ ಆಗಮಿಸಿದ್ದರು. ಪುಷ್ಕರಣಿಯಲ್ಲಿ ಮುಳುಗಿ ಎದ್ದು ನಂಜನಗುಡಿನ ರಥವನ್ನು ಎಳೆಯುವ ಸನ್ನಿವೇಶವನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು.

ಸುಂದರ ಪುಷ್ಕರಣಿ ನೋಡಿದ್ದ ಅವರು ಸಂತಸ ವ್ಯಕ್ತಪಡಿಸಿದ್ದರು. ಬಳಿಕ ಚಿತ್ರೀಕರಣದ ವೇಳೆ ಬಹಳಷ್ಟು ಸಂಖ್ಯೆಯಲ್ಲಿ ಜಮಾಯಿಸಿದ್ದ ಅಭಿಮಾನಿಗಳತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದ್ದರು.

actor-puneeth-rajkumar-
ದಾವಣಗೆರೆಯಲ್ಲಿ ಚಿತ್ರೀಕರಣದ ಸಮಯದಲ್ಲಿ ಪುನೀತ್‌

ಇದಾದ ಬಳಿಕ ಹರ ಜಾತ್ರೆಗೆ ಆಗಮಿಸಿದ್ದ ಅವರು, ‘ರಾಜಕುಮಾರ’ ಚಿತ್ರದ ‘ಆಡಿಸಿಯೆ ನೋಡು ಬೀಳಿಸಿಯೆ ನೋಡು ಎಂದು ಸೋಲದು, ಸೋತು ತಲೆಯಬಾಗದು’ ಎಂದು ಹಾಡಿದ್ದರು.

ಜೊತೆಗೆ ಸಹೋದರರ ಜೊತೆಗೂಡಿ ಒಂದು ಸಿನಿಮಾ ಮಾಡುವ ಆಸೆಯನ್ನೂ ಅವರು ವ್ಯಕ್ತಪಡಿಸಿದ್ದರು. ಆದರೆ, ಈ ಆಸೆ ಈಡೇರುವ ಮೊದಲೇ ಪುನೀತ್ ಅಗಲಿದ್ದಾರೆ.

actor-puneeth-rajkumar-
ದಾವಣಗೆರೆಯಲ್ಲಿ ಚಿತ್ರೀಕರಣದ ಸಮಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.