ETV Bharat / state

ದಾವಣಗೆರೆ ಸಹೋದರಿಯರ ಹತ್ಯೆ ಪ್ರಕರಣ​... ಅಕ್ಕನ ಗಂಡನೇ ಕೃತ್ಯವೆಸಗಿದ ಆರೋಪಿ! - Davanagere double murder case

ದಾವಣಗೆರೆ ನಗರದ ಹೊರವಲಯದಲ್ಲಿ ನಡೆದಿದ್ದ ಸಹೋದರಿಯರ ಹತ್ಯೆ ಪ್ರಕರಣದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

accused-arrested-davanagere-double-murder-case
ದಾವಣಗೆರೆ ಸಹೋದರಿಯರ ಹತ್ಯೆ ಪ್ರಕರಣ
author img

By

Published : Aug 3, 2021, 4:40 AM IST

ದಾವಣಗೆರೆ: ನಗರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ. ಅಕ್ಕ-ತಂಗಿ ಇಬ್ಬರನ್ನೂ ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಯನ್ನು ಪ್ರಕರಣ ಬೆಳಕಿಗೆ ಬಂದ ಮೂರೇ ದಿನದಲ್ಲಿ ಬಂಧಿಸಲಾಗಿದೆ.

ಕೊಲೆಯಾದ ಸಹೋದರಿಯರಿಬ್ಬರಲ್ಲಿ ಒಬ್ಬರ ಪತಿಯೇ ಪ್ರಕರಣದ ಆರೋಪಿಯಾಗಿದ್ದಾನೆ. ಪೊಲೀಸರು ಮಂಜುನಾಥ್ (46) ಎಂಬುವನನ್ನು ಬೆಂಗಳೂರಿನ ಚನ್ನಾಪುರದಲ್ಲಿ ಬಂಧಿಸಿದ್ದಾರೆ. ಆರೋಪಿಯ ಪತ್ನಿ ಗೌರಮ್ಮ (35) ಹಾಗೂ ಗೌರಮ್ಮಳ ತಂಗಿ ರಾಧಮ್ಮ(32)ರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.‌ ಸಹೋದರಿಯರು ಆಂಜನೇಯ ಮಿಲ್ ಬಡಾವಣೆಯ ಮನೆಯೊಂದರಲ್ಲಿ ವಾಸಿಸುತ್ತಿದ್ದರು.

ಕೊಲೆಯಾದ 7 ದಿನಗಳ ಬಳಿಕ (ಜುಲೈ30) ಪ್ರಕರಣ ಬೆಳಕಿಗೆ ಬಂದಿತ್ತು. ಮನೆಯ ದುರ್ವಾಸನೆ ಗಮನಿಸಿ ಮನೆಯ ಬಾಗಿಲು ಒಡೆದು ನೋಡಿದಾಗ ಎರಡು ಶವಗಳು ಕೊಳೆತ‌ ಸ್ಥಿತಿಯಲ್ಲಿ ಪತ್ತೆಯಾಗಿದ್ದವು.

ಆರೋಪಿ ಮಂಜುನಾಥ್ ಪತ್ನಿ ಗೌರಮ್ಮಳ ಶೀಲ ಶಂಕಿಸಿ ಆಕೆ ಹಾಗೂ ಸಹೋದರಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕೊಳೆತ ಸ್ಥಿತಿಯಲ್ಲಿ ಸಹೋದರಿಯರಿಬ್ಬರ ಶವ ಪತ್ತೆ ಪ್ರಕರಣ: ಕೊಲೆ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.