ದಾವಣಗೆರೆ: ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ನಮ್ಮ ಪೊಲೀಸ್ ಸಿಬ್ಬಂದಿ ಹಿಡಿದುಕೊಂಡು ಬಂದಿದ್ದಾರೆ. ಆದ್ರೆ ಮುಂದಿರುವ ಸವಾಲು ಅವರಿಗೆ ಶಿಕ್ಷೆ ವಿಧಿಸುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಕೋರ್ಟ್‌ನಲ್ಲಿ ಪ್ರಕರಣದ ಸರಿಯಾದ ನಿರ್ವಹಣೆಯ ಕುರಿತು ಪೊಲೀಸರ ಜೊತೆ ಚರ್ಚೆ ಮಾಡ್ತೀನಿ. ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುತ್ತೇವೆ. ಮೈಸೂರು ಅತ್ಯಾಚಾರ ಹಾಗೂ ಮಾದಕ ವಸ್ತುಗಳ ಪ್ರಕರಣದಲ್ಲಿ ಬಿಗಿ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.
ಇದನ್ನೂ ಓದಿ: Mysuru Gang Rape: ತಿರುಪೂರದಲ್ಲಿ ಸ್ಥಳ ಮಹಜರು ನಡೆಸಿದ ಪೊಲೀಸರು
ದಾವಣಗೆರೆಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಡವಾಗಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, ಯಾವುದೇ ಸಮಸ್ಯೆ ಆಗಿಲ್ಲ. ಇವೆಲ್ಲವೂ ಸಾಮಾನ್ಯ. ಅವರು ದೇಶದ ಗೃಹ ಸಚಿವರು. ಹೀಗಾಗಿ ಸ್ವಲ್ಪ ಟೈಮ್ ಹಿಡಿಯುತ್ತೆ ಎಂದು ಸ್ಪಷ್ಟನೆ ಕೊಟ್ಟರು.